»   » ತ್ರಿಡಿ ಎಂದು ಕಿವಿಗೆ ಬೀಡಿ ಸಿಕ್ಕಿಸಿದ ನಿರ್ದೇಶಕ ಪ್ರೇಮ್

ತ್ರಿಡಿ ಎಂದು ಕಿವಿಗೆ ಬೀಡಿ ಸಿಕ್ಕಿಸಿದ ನಿರ್ದೇಶಕ ಪ್ರೇಮ್

Posted By: * ಪ್ರೇಮಶೇಖರ, ಬೆಂಗಳೂರು
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರದ ಹಾಡೊಂದು 3ಡಿಯಲ್ಲಿ ಮೂಡಿಬರಲಿದೆ. ಮುಂಬೈನಲ್ಲಿ 3ಡಿ ವಿನ್ಯಾಸ ಮಾಡಲಾಗುತ್ತಿದೆ ಹಾಗೆ ಹೀಗೆ ಎಂದು ಹೇಳಿ ಒಂದು ಕಿವಿಗೆ ಲಾಲ್‌ಬಾಗ್ ಮತ್ತೊಂದು ಕಿವಿಗೆ ಕಬ್ಬನ್ ಪಾರ್ಕ್‌ ಇಟ್ಟಿದ್ದಾರೆ ನಿರ್ದೇಶಕ ಪ್ರೇಮ್. ತ್ರಿಡಿ ಎಂದು ಜೋಗಯ್ಯ ನೋಡಲು ಹೋದ ನನಗೆ ಸಿಕ್ಕಿದ್ದು ಗಣೇಶ ಬೀಡಿ ಮಾತ್ರ.

ಆಯ್ದ ಕೆಲ ಚಿತ್ರಮಂದಿರಗಳಲ್ಲಿ 3ಡಿ ವ್ಯವಸ್ಥೆ ಮಾಡಲಾಗಿದೆ ಎಂದೂ ಪ್ರಚಾರ ಮಾಡಲಾಗಿತ್ತು. ಬಳಿಕ ಮೆಜೆಸ್ಟಿಕ್ ಪ್ರದೇಶದ ಸಂತೋಷ್ ಮತ್ತು ಕಪಾಲಿ ಚಿತ್ರಮಂದಿರಗಳ ಮುಂದೆ "ತಾಂತ್ರಿಕ ದೋಷದಿಂದ 3ಡಿ ಅಳವಡಿಸಿಲ್ಲ. ಸೋಮವಾರದಿಂದ 3ಡಿ ಲಭ್ಯ ಎಂಬ " ಬೋರ್ಡ್ ನೇತು ಹಾಕಲಾಗಿದೆ.

ಮೊದಲ ದಿನ ನಾನು ಇದು ತ್ರಿಡಿ ಚಿತ್ರಎಂದು ನೋಡಲು ಹೋದಾಗ ತೀವ್ರ ನಿರಾಸೆ ಕಾದಿತ್ತು. ಈಗ ತ್ರಿಡಿಯಲ್ಲಿ ಚಿತ್ರ ಪ್ರದರ್ಶಿಸಲಾಗುತ್ತಿದೆ ಎನ್ನುತ್ತ್ತಿದ್ದಾರೆ. ಆದರೆ ಮೊದಲು ತ್ರಿಡಿ ನೋಡದವರು ಈಗ ಮತ್ತೊಮ್ಮೆ ಚಿತ್ರವನ್ನು ನೋಡಬೇಕೆ? ಇದು ಪ್ರೇಮ್ ಮಾಡಿದ ಎಡವಟ್ಟೋ ಗಿಮಿಕ್ಕೋ ನೀವೇ ಹೇಳಿ?

ಬೆಂಗಳೂರಿನ ಆಯ್ದ 16 ಚಿತ್ರಮಂದಿರಗಳಲ್ಲಿ ಜೋಗಯ್ಯ 3ಡಿ ಚಿತ್ರ ನೋಡಬಹುದು. ಟಿಕೆಟ್ ಜೊತೆಗೆ ಕನ್ನಡಕವನ್ನೂ ಕೊಡಲಾಗುತ್ತದೆ ಎಂಬ ಜಾಹೀರಾತನ್ನು ನೀಡಲಾಗಿತ್ತು. ಆದರೆ ನಿರ್ದೇಶಕ ಪ್ರೇಮ್ ಪ್ರೇಕ್ಷಕರ ಕಿವಿಗೆ ಹೂವಿನ ಜೊತೆ ಬೀಡಿಯನ್ನೂ ಸಿಕ್ಕಿಸಿ ತಮಾಷೆ ನೋಡಿದ್ದಾರೆ ಅಷ್ಟೆ.

ಪ್ರೇಮ್ ತಮ್ಮ ಚಿತ್ರಗಳಿಗೆ ಇಲ್ಲಸಲ್ಲದ ಪ್ರಚಾರ ಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಜೋಗಯ್ಯ' ಚಿತ್ರದಲ್ಲಿ ರಜನಿಕಾಂತ್ ಅಭಿನಯಿಸುತ್ತಾರೆ ಹಾಗೆ ಹೀಗೆ ಎಂದು ಕಾಗೆ ಹಾರಿಸಿದ್ದರು. 'ರಾಜ್' ಚಿತ್ರ ದೇಶವಿದೇಶಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಲಿದೆ ಎಂದು ಹುಸಿಬಾಂಬ್ ಸಿಡಿಸಿದ್ದರು.

English summary
Earlier, director Prem had said that his latest movie Jogayya, which stars Shivarajkumar in lead, would have a song in 3D format. But the movie buffs are very disappointed after watching the movie as there are no 3D effects in it. He has just fooled the audience for a publicity stunt for Jogayya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada