»   » ಲಾಬಿಕೋರರಿಗೆ ಮಾತ್ರ ರಾಜ್ಯ ಪ್ರಶಸ್ತಿ ಹಲ್ವಾ : ರಮ್ಯಾ

ಲಾಬಿಕೋರರಿಗೆ ಮಾತ್ರ ರಾಜ್ಯ ಪ್ರಶಸ್ತಿ ಹಲ್ವಾ : ರಮ್ಯಾ

Posted By:
Subscribe to Filmibeat Kannada

ಸದಾ ತಮ್ಮ ಮೂಗಿನ ನೇರಕ್ಕೆ ಮಾತನಾಡು ಗೋಲ್ಡನ್ ಗರ್ಲ್ ರಮ್ಯಾ ಈಗ ಮತ್ತೊಂದು ಸತ್ಯವಾದ ಹಾಗೂ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. "ನಾನು ರಾಜ್ಯ ಪ್ರಶಸ್ತಿಗಳಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ" ಎಂದಿದ್ದಾರೆ. ಅದಕ್ಕೆ ಕಾರಣ ಏನೂ ಎಂದು ರಮ್ಯಾ ಹೇಳಿದ್ದಾರೆ ಮುಂದೆ ಓದಿ...

"ಪ್ರಾಮಾಣಿಕರಿಗೆ ಪ್ರಶಸ್ತಿ ಸಿಗುವುದು ಕಷ್ಟ. ಯಾರು ಹೆಚ್ಚಿನ ವಶೀಲಿಬಾಜಿ ನಡೆಸುತ್ತಾರೋ, ಪ್ರಶಸ್ತಿಗಾಗಿಯೇ ಹಗಲು ಇರುಳು ಪ್ರಭಾವ ಬೀರಿ ಗಿಟ್ಟಿಸಿಕೊಳ್ಳುವವರ ಮಡಿಲಿಗೆ ರಾಜ್ಯ ಪ್ರಶಸ್ತಿ ಸಲೀಸಾಗಿ ಬಂದು ಬೀಳುತ್ತದೆ. ಹಾಗಾಗಿ ಈ ಪ್ರಶಸ್ತಿಯಲ್ಲಿ ತಮಗೆ ನಂಬಿಕೆ ಉಳಿದಿಲ್ಲ" ಎಂದಿದ್ದಾರೆ.

ಇದಿಷ್ಟನ್ನು ಅವರು ಹೇಳಿರುವುದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ.ಆದರೆ ರಮ್ಯಾ ಅವರಿಗೆ ಇದುವರೆಗೂ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲ.ತಮ್ಮ ಚಿತ್ರಗಳಿಗೆ ತಾವೇ ವಾಯ್ಸ್ ಡಬ್ ಮಾಡಲ್ಲ ಎಂಬ ಕಾರಣಕ್ಕೆ ಪ್ರಶಸ್ತಿ ಅವರಿಗೆ ಒಲಿಯುತ್ತಿಲ್ಲ ಎಂಬ ಮಾತನ್ನು ರಮ್ಯಾ ಸುತಾರಾಂ ಒಪ್ಪಲ್ಲ. (ಏಜೆನ್ಸೀಸ್)

English summary
Kannada actress Ramya tweets like, Till today I've never received a state award! I stopped believing in them. I can never receive an award knowing it has been lobbied for! I have you'll and that's my priority!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada