For Quick Alerts
  ALLOW NOTIFICATIONS  
  For Daily Alerts

  ಮುನಿರತ್ನ 'ಕಠಾರಿವೀರ' ಬಿಡುಗಡೆ ಹಾದಿ ಸುಗಮ

  By Rajendra
  |

  ಯಶವಂತಪುರ (ವಾರ್ಡ್ ನಂಬರ್ 37) ಹಾಲಿ ಕಾರ್ಪೋರೇಟರ್ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದೆ. ಭಾರಿ ಬಜೆಟ್‌ನ ಈ ಚಿತ್ರ 2ಡಿ ಹಾಗೂ 3ಡಿ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದ್ದು ಎರಡೂ ಆವೃತ್ತಿಗಳೂ ಸೆನ್ಸಾರ್‌ನಲ್ಲಿ ಪಾಸಾಗಿವೆ.

  'ಕಠಾರಿವೀರ' ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ 2ಡಿ ಮತ್ತು 3ಡಿ ಆವೃತ್ತಿಗಳಿಗೆ ಯು/ಎ ಸರ್ಟಿಫಿಕೇಟ್ ನೀಡಿದೆ. 'ಕಠಾರಿವೀರ' 2ಡಿ ಚಿತ್ರಕ್ಕೆ ಬುಧವಾರ (ಏ.25) ಸೆನ್ಸಾರ್ ಆಗಿತ್ತು. 3ಡಿ ಚಿತ್ರವನ್ನು ಗುರುವಾರ (ಏ.27) ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

  ಆದರೆ ಕೆ ಮಂಜು ಅವರ 'ಗಾಡ್‌ಫಾದರ್' ಚಿತ್ರದ ಸೆನ್ಸಾರ್ ಕತೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಮೊದಲು ಯಾವ ಚಿತ್ರ ಸೆನ್ಸಾರ್ ಆಗುತ್ತದೋ ಆ ಚಿತ್ರಕ್ಕೆ ಮೊದಲು ಬಿಡುಗಡೆ ಭಾಗ್ಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿಗೆ ಕೆ ಮಂಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

  ಮೊದಲು ಸೆಟ್ಟೇರಿದ್ದು ತಮ್ಮ 'ಗಾಡ್‌ಫಾದರ್' ಚಿತ್ರ. ಹಾಗಾಗಿ ತಮ್ಮ ಚಿತ್ರವೇ ಮೊದಲು ಬಿಡುಗಡೆಯಾಗಬೇಕು ಎಂದು ಪಟ್ಟುಹಿಡಿದ್ದಾರೆ. ಆದಕಾರಣ ಎರಡೂ ಚಿತ್ರಗಳ ಬಿಡುಗಡೆ ವಿವಾದ ತಾರಕಕ್ಕೇರಿದೆ. ಈ ಸಂಬಂಧ ಶುಕ್ರವಾರ (ಏ.27) ಸಂಜೆ ಫಿಲಂ ಚೇಂಬರ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಏನಾಗಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. (ಒನ್‌ಇಂಡಿಯಾ ಕನ್ನಡ)

  English summary
  Much awaited Kannada film Kataari Veera Sura Sundaraangi starring Upendra and Ramya was 2D and 3D versions censored after the members viewed the film. Both versions of the film got a U/A certificate clearance from the regional censor board. The KFCC will come to a decision in a meeting to be held on 27th April, Friday evening for the release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X