»   » ಸುಪ್ರೀಂಕೋರ್ಟ್ ಅಂಗಳಕ್ಕೆ ಶಾರುಖ್ ಖಾನ್ ಮನೆ

ಸುಪ್ರೀಂಕೋರ್ಟ್ ಅಂಗಳಕ್ಕೆ ಶಾರುಖ್ ಖಾನ್ ಮನೆ

Posted By:
Subscribe to Filmibeat Kannada
Shahrukh Khan Mannat
ವಿವಾದಗಳ ಜೊತೆ ಜೊತೆಗೆ ಬೆಳೆದ ಕಿಂಗ್ ಖಾನ್ ಶಾರುಖ್ ಬುಡಕ್ಕೆ ಈಗ ಕೊಡಲಿ ಪೆಟ್ಟು ಬೀಳುವಂತಿದೆ. ಶಾರುಖ್ ಕನಸಿನ ಅರಮನೆ 'ಮನ್ನತ್' ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿದೆ.

ಪುರಾತತ್ವ ಇಲಾಖೆ ಹಾಗೂ ಕರಾವಳಿ ಪ್ರದೇಶದ ನಿಯಮಗಳನ್ನು ಉಲ್ಲಂಘಿಸಿ ಶಾರುಖ್ ಖಾನ್ ತನ್ನ ಬಂಗಲೆ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈನ ಅಮಿತ್ ಮರಾಂಡ್ ಹಾಗೂ ಸಿಂಪ್ರೀತ್ ಸಿಂಗ್ ಎಂಬುವರು ಶಾರುಖ್ ಮನೆ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕಾರಗೊಂಡಿತ್ತು.

ಈಗ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಬಾಂಬೆ ಹೈಕೋರ್ಟ್ ನಿಂದ 20 ಸಾವಿರ ರೂ ದಂಡ ಹಾಗೂ ಛೀಮಾರಿ ಹಾಕಿಸಿಕೊಂಡಿದ್ದ ಅಮಿತ್ ಹಾಗೂ ಸಿಂಗ್ ಜೋಡಿ ಮತ್ತೆ ಕೋರ್ಟ್ ನತ್ತ ಮುಖ ಮಾಡಿದ್ದಾರೆ.

ಶಾರುಖ್ ವಿರುದ್ಧ ಕೇಸ್ ಹಾಕಿ ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶ ನಮಗಿಲ್ಲ ಎಂದು ಈ ಜೋಡಿ ಹೇಳಿಕೊಂಡಿದೆ. ಈ ಬಗ್ಗೆ ಶಾರುಖ್ ಅವರನ್ನು ಕೇಳಿದರೆ, 'ಆರೋಪಗಳೆಲ್ಲ ಸುಳ್ಳು. ನಿಯಮಗಳನ್ನು ಉಲ್ಲಂಘಿಸಿದ್ದರೆ ಮಹಾನಗರ ಪಾಲಿಕೆ ನನಗೆ ಕಟ್ಟಡ ಕಟ್ಟಲು ಅನುಮತಿ ನೀಡುತ್ತಲೇ ಇಲ್ಲ' ಎಂದಿದ್ದಾನೆ.

English summary
A plea has been filed in the Supreme Court against Bollywood Badshah, Shahrukh Khan's bunglow Mannat over the alleged violation of archaeological laws and coastal regulation zone in the construction of the bunglow.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X