twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಮೇಷ್ಟ್ರು ನಾಗತಿಹಳ್ಳಿಯ ಇಂಗ್ಲಿಷ್ ಪ್ರಣಯ

    By Rajendra
    |

    ವೃತ್ತಿಯಲ್ಲಿ ಕನ್ನಡ ಮೇಷ್ಟ್ರು ಹಾಗೂ ಪ್ರವೃತ್ತಿಯಲ್ಲಿ ಚಲನಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್ ಹೊಸ ವಿವಾದವೊಂದನ್ನು ತಾವೇ ತಮ್ಮ ಕೈಯಾರೆ ಮೈಮೇಲೆ ಎಳೆದುಕೊಂಡಿದ್ದಾರೆ. ನಾಗತಿಹಳ್ಳಿ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆಯೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ. ತಮ್ಮ ಹೊಚ್ಚಹೊಸ ಚಿತ್ರಕ್ಕೆ 'ಬ್ರೇಕಿಂಗ್ ನ್ಯೂಸ್' ಎಂದು ಹೆಸರಿಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    'ಬ್ರೇಕಿಂಗ್ ನ್ಯೂಸ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಮಾಧ್ಯಮಗಳು ನಾಗತಿಹಳ್ಳಿ ಅವರನ್ನು ತಮ್ಮ ಚಿತ್ರಕ್ಕೆ ಇಂಗ್ಲಿಷ್ ಶೀರ್ಷಿಕೆ ಯಾಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಒಂಚೂರು ಬೇಸರದಲ್ಲೆ ಪ್ರತಿಕ್ರಿಯಿಸಿದ ನಾಗತಿಹಳ್ಳಿ, ಅದರಲ್ಲೇನು ತಪ್ಪಿದೆ. ಸ್ಕೂಲು, ಕಾಲೇಜು, ಬ್ಯಾಂಕು ಎಂದು ಕರೆದಂತೆ ತಮ್ಮ ಚಿತ್ರಕ್ಕೂ ಬ್ರೇಕಿಂಗ್ ನ್ಯೂಸ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದರು.

    ಇಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರು ಮುಂದುವರಿದು ಹೇಳಿದ್ದೇನೆಂದರೆ, ನಾನು ಕನ್ನಡ ಭಾಷೆಯ ಕುರುಡು ಅಭಿಮಾನಿಯಲ್ಲ. ಕನ್ನಡ ಭಾಷೆಯ ಅಗತ್ಯತೆ ಬಗ್ಗೆ ನನಗೆ ಒಲವಿಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಅವರ ಈ ಹೇಳಿಕೆ ಬಿಸಿಬಿಸಿ ವಾದ ವಿವಾದ ಚರ್ಚೆಗೆ ಎಡೆಮಾಡಿಕೊಟ್ಟಿತು.

    ತಮ್ಮ ಹೊಸ ಭವ್ಯಗೃಹಕ್ಕೆ ನಾಗತಿಹಳ್ಳಿ 'ಲಿರಿಕ್ಸ್' ಎಂದು ಹೆಸರಿಟ್ಟಿರುವ ಬಗ್ಗೆಯೂ ಮಾಧ್ಯಮಗಳು ಪ್ರಶ್ನಿಸಿದವು. ನಿತ್ಯಜೀವನದಲ್ಲಿ ತಾವು ಬಳಸುವ ಇಂಗ್ಲಿಷ್ ಪದಗಳಂತೆ ತಮ್ಮ ಮನೆಗೂ ಹೆಸರಿಟ್ಟಿದ್ದೇನೆ. ತಮಿಳರಂತೆ ನಾನೇನು ಭಾಷೆಯ ಅಂಧಾಭಿಮಾನಿಯಲ್ಲ ಎಂದಿದ್ದಾರೆ. ಕನ್ನಡ ಮೇಷ್ಟ್ರು ಈ ರೀತಿ ಮಾತನಾಡಿರುವುದು ಕನ್ನಡ ಪ್ರೇಮಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದೆ. (ಏಜೆನ್ಸೀಸ್)

    English summary
    Kannada films well known director Nagathihalli Chandrashekar caught in a controversy that too on the day of launch of his new film 'Breaking News'. "I am not a fanatic, I do not love Kannada in exigency" stated Nagathihalli.
    Friday, September 30, 2011, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X