»   »  ಹಣಕಾಸು ಮುಗ್ಗಟ್ಟಿನಲ್ಲಿ ನವೀನ್ ಕೃಷ್ಣ ಚಿತ್ರ

ಹಣಕಾಸು ಮುಗ್ಗಟ್ಟಿನಲ್ಲಿ ನವೀನ್ ಕೃಷ್ಣ ಚಿತ್ರ

Subscribe to Filmibeat Kannada
Naveen Krishna
ಒಂದು ಉತ್ತಮ ಬ್ರೇಕ್ ಗಾಗಿ ಕಾಯುತ್ತಿರುವ ನಾಯಕ ನಟ ನವೀನ್ ಕೃಷ್ಣ ಅವರಿಗೆ ಯಾಕೋ ಏನೋ ಕಾಲ ಕೂಡಿಬರುತ್ತಿಲ್ಲ. ಬಹು ನಿರೀಕ್ಷಿತ 'ಧಿಮಾಕು' ಚಿತ್ರವೂ ಬಾಕ್ಸಾಫೀಸಲ್ಲಿ ಸೋತಿದೆ. ಮಗನನ್ನು ಮೇಲಕ್ಕೆ ತರಬೇಕೆಂಬ ಶ್ರೀನಿವಾಸಮೂರ್ತಿ ಅವರ ಕನಸು ಯಾವಾಗ ನನಸಾಗುತ್ತದೋ?

ಮತ್ತೊಂದು ಕೆಟ್ಟ ಸುದ್ದಿಯೆಂದರೆ, ಅವರು ನಟಿಸುತ್ತಿರುವ ಹೊಸ ಚಿತ್ರ 'ನಿರ್ದೇಶಕ' ಸಹ ನೆನೆಗುದಿಗೆ ಬಿದ್ದಿದೆ. ಕಾರಣ ಹಣಕಾಸು ಮುಗ್ಗಟ್ಟು. ಚಿತ್ರದ ನಿರ್ದೇಶಕ, ನಿರ್ಮಾಪಕ ಎಸ್.ಕೆ.ಶ್ರೀರಾಜ್ ಮಾತನಾಡುತ್ತಾ, ಚಿತ್ರಕ್ಕೆ ದುಡ್ಡು ಹಾಕ್ತೀವಿ ಎಂದವರು ಕಡೆ ಗಳಿಗೆಯಲ್ಲಿ ಕೈಕೊಟ್ಟರು. ವಿಧಿ ಇಲ್ಲದೆ ನಾನು ಚಿತ್ರೀಕರಣವನ್ನ್ನು ನಿಲ್ಲಿಸಿದ್ದೇನೆ. ಈ ಚಿತ್ರ ನನ್ನ ಕನಸು. ಮುಂದಿನ ಎರಡು ತಿಂಗಳಲ್ಲಿ ಚಿತ್ರವನ್ನು ಆರಂಭಿಸುತ್ತೇನೆ ಎಂದರು ಆಶಾಭಾವನೆಯಿಂದ.

ಮೂವರು ನಾಯಕಿಯರಿರುವ ಈ ಚಿತ್ರದಲ್ಲಿ ನವೀನ್ ಕೃಷ್ಣ ಪ್ರಮುಖ ಪಾತ್ರಧಾರಿ. ಬಹಳಷ್ಟು ನಿರ್ದೇಶಕರು ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ಹದಿನೈದು ವರ್ಷಗಳಿಂದ ಚಿತ್ರ ನಿರ್ದೇಶಕನಾಗಬೇಕು ಎಂದು ಹಂಬಲಿಸುತ್ತಿರುವ ತನ್ನದೇ ಕತೆಯನ್ನು ಶ್ರೀರಾಜ್ ಬೆಳ್ಳಿತೆರೆಗೆ ತರುತ್ತಿದ್ದಾರೆ. ಆದರೆ ನಿರ್ದೇಶಕನಾಗಬೇಕೆಂದು ಅವರ ಹೆಣಗಾಟ ಇನ್ನೂ ಮುಗಿಯದಿರುವುದು ದುರಂತ ಅಲ್ಲವೇ?

(ದಟ್ಸ್ ಕನ್ನಡ ಚಿತ್ರವಾರ್ತೆ)

ನಿರ್ದೇಶಕನ ನಾಯಕನಾಗಿ ನವೀನ್ ಕೃಷ್ಣ!
ನಟ ನವೀನ್ ಕೃಷ್ಣ ನಕಲಿ ಸಿಡಿ ಕೇಸ್ ನಲ್ಲಿ ಬಂಧನ?
ದಿಮಾಕು ಇಲ್ಲದ ನವೀನ್ ಕೃಷ್ಣರ 'ಧಿಮಾಕು'
ಧಿಮಾಕು:ಅಪ್ಪನಿಗೆ ಕನಸು, ನವೀನ್ ಕೃಷ್ಣಗೆ ಪರೀಕ್ಷೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada