»   » ತಮಿಳು ಸೂಪರ್ ಸ್ಟಾರ್ ವಿಜಯ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ.!

ತಮಿಳು ಸೂಪರ್ ಸ್ಟಾರ್ ವಿಜಯ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ.!

Posted By:
Subscribe to Filmibeat Kannada
ತಮಿಳಿನ ಸೂಪರ್ ಸ್ಟಾರ್ ವಿಜಯ್ ಜೊತೆ ಶ್ರದ್ಧಾ ಶ್ರೀನಾಥ್ ನಾಯಕಿ | Filmibeat Kannada

'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ 'ಯು ಟರ್ನ್' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಶ್ರದ್ಧಾ ಶ್ರೀನಾಥ್. ಮೊದಲ ಚಿತ್ರದಲ್ಲೇ ನೋಡುಗರನ್ನ ಮೋಡಿ ಮಾಡಿದ ಶ್ರದ್ಧಾ ಶ್ರೀನಾಥ್ ಮೂಗುತಿ ಸುಂದರಿ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದರು.

ಎರಡೇ ವರ್ಷದಲ್ಲಿ ಹತ್ತು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನ ಗಳಿಸಿರುವ ಶ್ರದ್ಧಾ ಶ್ರೀನಾಥ್, ಈಗ ತಮಿಳಿನ ಸ್ಟಾರ್ ನಾಯಕನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.

ಸದ್ಯದ ಸುದ್ದಿಯ ಪ್ರಕಾರ 'ಇಳಯದಳಪತಿ ವಿಜಯ್' ಅಭಿನಯದ 62ನೇ ಚಿತ್ರಕ್ಕೆ ಶ್ರದ್ದಾ ನಾಯಕಿಯಾಗಿದ್ದಾರಂತೆ. ಈ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗೋದಕ್ಕೂ ಕೆಲವು ಕಾರಣಗಳಿವೆ...ಮುಂದೆ ಓದಿ

ಮತ್ತೆ ತಮಿಳಿನಲ್ಲಿ ಅವಕಾಶ ಪಡೆದುಕೊಂಡ ನಟಿ

ತಮಿಳಿನ 'ಕಾಟ್ರು ವೆಲೆಯಾಡೈ' (Kaatru Veliyidai) 'ಇವನ್ ತಂಥಿರಾನ್' ಹಾಗೂ 'ವಿಕ್ರಂವೇದ' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದರು. ತಮಿಳು ಚಿತ್ರರಂಗದಲ್ಲೂ ಈಕೆಯ ಅಭಿನಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಈಗ ಮತ್ತೆ ತಮಿಳಿನ ಸ್ಟಾರ್ ನಟನಿಗೆ ತೆರೆ ಮೇಲೆ ಜೋಡಿಯಾಗುವ ಅವಕಾಶ ಸಿಕ್ಕಿದೆ ಎನ್ನೋ ಸುದ್ದಿ ಕೇಳಿ ಬರ್ತಿದೆ.

ಕಾಲಿವುಡ್ ಚಿತ್ರಕ್ಕೆ ಸೂಟ್ ಆಗುವ ನಟಿ

'ಮಣಿರತ್ನಂ' ಸಿನಿಮಾದಲ್ಲಿ ಅಭಿನಯಿಸಿ ಮೆಚ್ಚುಗೆಗಳಿಸಿರುವ ನಟಿ ಶ್ರದ್ಧಾ ತಮಿಳು ಸಿನಿಮಾಗೆ ಹೇಳಿ ಮಾಡಿದ ನಟಿ, ಅನ್ನುವ ಮಾತುಗಳು ಕನ್ನಡ ಚಿತ್ರರಂಗದಲ್ಲೂ ಕೇಳಿಬಂದಿತ್ತು. ತಮಿಳಿನ ಮೂರು ಸಿನಿಮಾದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರೋದ್ದರಿಂದ ಮತ್ತೆ ಅವಕಾಶ ಹುಡುಕಿಕೊಂಡು ಬರ್ತಿದೆ. ವಿಜಯ್ ಅಭಿನಯದ 62ನೇ ಚಿತ್ರವನ್ನ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿ

ಶ್ರದ್ಧಾ ಶ್ರೀನಾಥ್ ಅಭಿನಯದ 'ರಿಚ್ಚಿ' ಸಿನಿಮಾ ಸಂದರ್ಶನದ ವೇಳೆ 'ಇಳಯದಳಪತಿ ವಿಜಯ್' ಅವರ ಚಿತ್ರಕ್ಕೆ ನೀವೇ ನಾಯಕಿ ಅನ್ನೋ ಸುದ್ದಿ ವೈರಲ್ ಆಗಿದೆ ಎನ್ನುವ ಪ್ರಶ್ನೆಗೆ, ನಟಿ ಶ್ರದ್ಧಾ ನಗುತ್ತಲೇ "ನಾನೇ ಅನ್ನೋದು ಅಧಿಕೃತವಾಗಿ ಅನೌನ್ಸ್ ಆದರೆ ಖಂಡಿತ ಖುಷಿ ಆಗುತ್ತೆ" ಎಂದಿದ್ದಾರೆ.

ಪ್ರತಿಭಾನಿತ್ವ ನಟಿ ಶ್ರದ್ಧಾ

ನೀನಾಸಂ ಸತೀಶ್ ಅಭಿನಯದ 'ಗೋದ್ರಾ' ಚಿತ್ರಕ್ಕೂ ಶ್ರದ್ಧಾ ಶ್ರೀನಾಥ್ ನಾಯಕಿ. ಪವನ್ ಒಡೆಯರ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಶಾದಿಭಾಗ್ಯ' ಸಿನಿಮಾದಲ್ಲಿ ಶ್ರದ್ದಾ ಅಭಿನಿನಯಿಸುತ್ತಿದ್ದಾರೆ.

English summary
The 62nd movie of Ilaiyadalapathy Vijay is likely to be a Kannada actress Shraddha Srinath heroine. The film will be directed by AR Murugadoss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada