»   » ಇಷ್ಟು ದಿನ ಸೈಲೆಂಟ್ ಆಗಿದ್ದ ಉಪೇಂದ್ರ ಬಗ್ಗೆ ಈಗ ಬಂದಿದೆ ಹೊಸ ಬ್ರೇಕಿಂಗ್ ನ್ಯೂಸ್ !

ಇಷ್ಟು ದಿನ ಸೈಲೆಂಟ್ ಆಗಿದ್ದ ಉಪೇಂದ್ರ ಬಗ್ಗೆ ಈಗ ಬಂದಿದೆ ಹೊಸ ಬ್ರೇಕಿಂಗ್ ನ್ಯೂಸ್ !

Posted By:
Subscribe to Filmibeat Kannada
ಮುಳುಗಿತಾ ಉಪ್ಪಿ ರಾಜಕೀಯ ದೋಣಿ ?| Upendra's drowning political career| Filmibeat Kannada

ಕರ್ನಾಟಕದಲ್ಲಿ ಎಲ್ಲಿ ಕೇಳಿದರು ಈಗ ಚುನಾವಣೆಯದ್ದೇ ಸುದ್ದಿ. ಬಿಜೆಪಿ, ಕಾಂಗ್ರೆಸ್, ಜೆ ಡಿ ಎಸ್ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುವ ಕೆಲಸದಲ್ಲಿ ಬಿಜಿ ಇದ್ದಾರೆ. ಆದರೆ ನಟ ಉಪೇಂದ್ರ ಮಾತ್ರ ಚುನಾವಣೆಯ ಬಗ್ಗೆ ಯಾವ ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಉಪೇಂದ್ರ ಈ ಬಾರಿ ಚುನಾವಣೆಗೆ ನಿಲ್ಲುತ್ತಾರಾ ಎನ್ನುವುದು ಸಹ ಸ್ಪಷ್ಟವಾಗಿ ತಿಳಿದಿಲ್ಲ.

ನಟ ಉಪೇಂದ್ರ ತಮ್ಮ ಕಲ್ಪನೆಯ ಪ್ರಜಾಕೀಯ ಕಟ್ಟಲು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' (ಕೆಪಿಜೆಪಿ) ಪಕ್ಷಕ್ಕೆ ಸೇರಿಕೊಂಡಿದ್ದರು. ಉಪೇಂದ್ರ ಏನಾದರೂ ಬದಲಾವಣೆ ಮಾಡಬಹುದು ಎಂಬ ನಂಬಿಕೆ ಜನರಲ್ಲಿ ಮೂಡುತ್ತಿರವಾಗಲೇ ಉಪ್ಪಿ ಆ ಪಕ್ಷದಿಂದ ಆಚೆ ಬಂದರು. ಭಿನ್ನಾಭಿಪ್ರಾಯದಲ್ಲಿ ಹೊರ ಬಂದ ಉಪೇಂದ್ರ 'ಪ್ರಜಾಕೀಯ' ಹೆಸರಿನಲ್ಲಿ ಹೊಸ ಪಕ್ಷ ಶುರು ಮಾಡುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಆ ಬಗ್ಗೆ ಉಪ್ಪಿ ಮತ್ತೆ ಮಾತನಾಡಿಲ್ಲ.

ಹೀಗಿರುವಾಗ, ನಟ ಉಪೇಂದ್ರ ಬಗ್ಗೆ ಇದೀಗ ಹೊಸ ಸುದ್ದಿ ಹರಿದಾಡುತ್ತಿದೆ. ಅದೇನು ಎನ್ನುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ...

ಮತ್ತೆ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ?

ರಾಜಕೀಯ ರಂಗಕ್ಕೆ ಧುಮುಕಿದ್ದ ಉಪೇಂದ್ರ ಸಿನಿಮಾ ಕೆಲಸಗಳಿಂದ ದೂರ ಇದ್ದರು. ಆದರೆ ಸದ್ಯದ ಸುದ್ದಿಯ ಪ್ರಕಾರ ಉಪೇಂದ್ರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರಂತೆ. ರಿಯಲ್ ಸ್ಟಾರ್ ಉಪೇಂದ್ರ ಕಮ್ ಬ್ಯಾಕ್ ಮಾಡುವ ಬಗ್ಗೆ ಕೆಲವು ದಿನ ಪತ್ರಿಕೆಗಳು ವರದಿ ಮಾಡಿವೆ.

ಸಿನಿಮಾದ ಜೊತೆಗೆ ರಾಜಕೀಯ, ರಾಜಕೀಯದ ಜೊತೆಗೆ ಸಿನಿಮಾ

ಉಪೇಂದ್ರ ಈ ಹಿಂದೆ ''ರಾಜಕೀಯದಲ್ಲಿ ಗೆಲ್ಲುತ್ತೀನಿ ಎಂಬ ನಂಬಿಕೆ ಇದೆ. ಗೆದ್ದರೆ ಸಂತೋಷ. ಇಲ್ಲ ಸಾಯೋವವರೆಗೆ ಪ್ರಯತ್ನ ಮಾಡುತ್ತಲೇ ಇರುತ್ತೀನಿ. ಪ್ರತಿ ಚುನಾವಣೆಯ ಆರು ತಿಂಗಳ ಮುಂಚೆ ಬಂದು ಪ್ರಯತ್ನ ಮಾಡುತ್ತಲೇ ಇರುತ್ತೀನಿ'' ಎಂದಿದ್ದರು. ಈಗ ಅದೇ ರೀತಿ ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರಗಳನ್ನು ಉಪೇಂದ್ರ ನಿಭಾಯಿಸಲಿದ್ದಾರಂತೆ.

'ಹೋಮ್ ಮಿನಿಸ್ಟರ್' ಚಿತ್ರದ ಶೂಟಿಂಗ್

ಉಪೇಂದ್ರ ರಾಜಕೀಯಕ್ಕೆ ಹೋಗುವ ಮುನ್ನ ಅವರ 'ಹೋಮ್ ಮಿನಿಸ್ಟರ್' ಸಿನಿಮಾದ ಶೂಟಿಂಗ್ ನಡೆಯುತಿತ್ತು. ಈಗ ಈ ಚಿತ್ರದ ಎರಡು ಹಾಡಿನ ಚಿತ್ರೀಕರಣ ಬಾಕಿ ಇದ್ದು ಶೀಘ್ರವೇ ಉಪ್ಪಿ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರಂತೆ. 'ಹೋಮ್ ಮಿನಿಸ್ಟರ್' ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ. ನಟಿ ವೇದಿಕಾ ಈ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಬಾಕಿ ಇರುವ ಸಿನಿಮಾಗಳು

ಸದ್ಯ ಉಪೇಂದ್ರ ಅವರ ಖಾತೆಯಲ್ಲಿ ಮೂರ್ನಾಲ್ಕು ಸಿನಿಮಾಗಳು ಬಾಕಿ ಇದೆ. ಈ ಪೈಕಿ 'ಹೋಮ್ ಮಿನಿಸ್ಟರ್' ನಂತರ 'ಉಪ್ಪಿ ರುಪ್ಪಿ' ಸಿನಿಮಾ ಶುರು ಆಗಬೇಕಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯಾಗಿದ್ದಾರೆ. ಅದರ ಜೊತೆಗೆ ಮಂಜು ಮಾಂಡವ್ಯ ಹಾಗೂ ಗುರುದತ್ ನಿರ್ದೇಶನದಲ್ಲಿ ಉಪ್ಪಿ ಒಂದೊಂದು ಸಿನಿಮಾ ಮಾಡುವುದು ಬಾಕಿ ಇದೆ. ಗುರುದತ್ ನಿರ್ದೇಶನದ ಚಿತ್ರಕ್ಕೆ 'ನಾಗರ್ಜುನ' ಎಂಬ ಟೈಟಲ್ ಇಡಲಾಗಿತ್ತು.

ಕಥೆ, ಚಿತ್ರಕಥೆ, ನಿರ್ದೇಶನ - ಉಪೇಂದ್ರ

ಉಪೇಂದ್ರ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸಂಗತಿ ಅಂದರೆ ಈ ಎಲ್ಲ ಸಿನಿಮಾಗಳ ನಂತರ ರಿಯಲ್ ಸ್ಟಾರ್ ಮತ್ತೆ ನಿರ್ದೇಶನಕ್ಕೆ ಮರಳಲಿದ್ದಾರಂತೆ. ಉಪೇಂದ್ರ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ (ಸಪ್ಟೆಂಬರ್ 18)ಕ್ಕೆ ಈ ಸಿನಿಮಾ ಲಾಂಚ್ ಆಗುವ ಸಾಧ್ಯತೆ ಇದೆಯಂತೆ. ಸದ್ಯಕ್ಕೆ 'ಉಪ್ಪಿ 2' ಉಪೇಂದ್ರ ನಿರ್ದೇಶಕದಲ್ಲಿ ಬಂದ ಕೊನೆಯ ಚಿತ್ರ ಆಗಿದೆ.

ಈ ಬಾರಿ ಚುನಾವಣೆಗೆ ನಿಲ್ತಾರಾ ?

ಇಷ್ಟೆಲ್ಲ ಸುದ್ದಿಗಳು ಇದ್ದರೂ ಉಪೇಂದ್ರ ಈ ಬಾರಿಯ ಚುನಾವಣೆಗೆ ನಿಲ್ಲುತ್ತಾರಾ, ಇಲ್ವಾ? ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಒಂದು ಕಡೆ ಉಪೇಂದ್ರ ಅವರಿಗೆ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಉಪೇಂದ್ರ ಏನು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. ಆದರೆ ಇದಕ್ಕೆ ಉಪೇಂದ್ರ ಅವರೇ ಉತ್ತರ ನೀಡಬೇಕು.

English summary
According to the source Kannada actor Upendra is returning to the silver screen. After resigning 'Karnataka Pragnyavantha Janatha Party' Upendra keep politics aside temporarily and go back to film making.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X