»   » ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?

ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?

Posted By:
Subscribe to Filmibeat Kannada

ಏನೇ ಮಾಡಿದ್ರೂ ಸ್ಪೆಷಲ್ ಆಗಿ ಮಾಡುವ ರಿಯಲ್ ಸ್ಟಾರ್ ಉಪೇಂದ್ರ ಅವರ 50ನೇ ಸಿನಿಮಾ, ಯಾರ ಜೊತೆ?,ಏನು?, ಎತ್ತ?, ಅಂತ ಎಲ್ಲರಲ್ಲೂ ಸಾಕಷ್ಟು ಕುತೂಹಲ ಇತ್ತು. ಇದೀಗ 'ಆ' ಕುತೂಹಲಕ್ಕೆ ತೆರೆ ಬಿದ್ದಿದೆ.

ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಿರ್ದೇಶನ ಮಾಡಲು ತಯಾರಾಗಿರೋದು 'ಮಾಸ್ಟರ್ ಪೀಸ್' ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಅವರು. 'ಉಪ್ಪಿ 2' ಹೊಸ ಸಂಚಲನ ಮೂಡಿಸಿದಂತೆ, ಈ ಸಿನಿಮಾ ಕೂಡ ಉಪೇಂದ್ರ ಅವರ ಹೊಸ ಸ್ಟೈಲ್ ನಲ್ಲಿ ಅಲೆ ಎಬ್ಬಿಸಲಿದೆ ಎನ್ನುತ್ತಾರೆ 'ಮಾಸ್ಟರ್ ಪೀಸ್' ಮಂಜು ಮಾಂಡವ್ಯ ಅವರು.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]

Actor Upendra's 50th Movie with Director Manju Mandavya

ತಮ್ಮ ಚೊಚ್ಚಲ ನಿರ್ದೇಶನದಲ್ಲೇ ರಾಕಿಂಗ್ ಸ್ಟಾರ್ ಯಶ್ ಅವರಿಗೆ 'ಮಾಸ್ಟರ್ ಪೀಸ್' ಸಿನಿಮಾ ಮಾಡಿ ಬಾಕ್ಸಾಫೀಸ್ ಪೀಸ್-ಪೀಸ್ ಮಾಡಿ, ಭರವಸೆ ಮೂಡಿಸಿದ ಮಂಜು ಮಾಂಡವ್ಯ, ಇದೀಗ ಎರಡನೇ ಪ್ರಾಜೆಕ್ಟ್ ಕೂಡ ಸ್ಟಾರ್ ನಟನ ಜೊತೆ ಮಾಡುತ್ತಿದ್ದಾರೆ.[ಪದೇ ಪದೇ ಕೇಳಬೇಕೆನ್ನುವ ಉಪೇಂದ್ರ ರವರ ಡೈಲಾಗ್ ಗಳಿವು]

Actor Upendra's 50th Movie with Director Manju Mandavya

ಒಂದಷ್ಟು ದಿನ ಸುದ್ದಿಯಲ್ಲಿ ಇಲ್ಲದೇ ಉಪೇಂದ್ರ ಅವರಿಗಾಗಿ ಅಂತ ಸ್ಕ್ರಿಪ್ಟ್ ತಯಾರಿ ಮಾಡೋದ್ರಲ್ಲಿ ಬಿಜಿಯಾಗಿದ್ದರು. ಇದೀಗ ಉಪ್ಪಿಗೆ ನಿರ್ದೇಶನ ಮಾಡೋದು ಪಕ್ಕಾ ಆಗಿದ್ದು, ಈ ಅವಕಾಶ ಸಿಕ್ಕಿದ್ದಕ್ಕೆ ಮಂಜು ಅವರು ಫುಲ್ ಖುಷ್ ಆಗಿದ್ದಾರೆ.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

Actor Upendra's 50th Movie with Director Manju Mandavya

ಇನ್ನು ಮಂಜು ಅವರ ಕಥೆ ಕೇಳಿದ ತಕ್ಷಣ ಉಪೇಂದ್ರ ಅವರು ಸಖತ್ ಥ್ರಿಲ್ ಆಗಿ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು ಅಂತ ಮಂಜು ಅವರು ಕೂಡ ಎಕ್ಸೈಟ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನೂ ಹೆಸರಿಡದ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

English summary
Kannada Actor Upendra's 5oth film will be directed by 'Masterpiece' fame Director Manju Mandavya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada