»   » ತಾರೆ ಐಶ್ವರ್ಯಾ ರೈ ಬಚ್ಚನ್ ಮತ್ತೆ ಗರ್ಭಿಣಿಯಂತೆ

ತಾರೆ ಐಶ್ವರ್ಯಾ ರೈ ಬಚ್ಚನ್ ಮತ್ತೆ ಗರ್ಭಿಣಿಯಂತೆ

By: ರವಿಕಿಶೋರ್
Subscribe to Filmibeat Kannada
ಸದ್ಯಕ್ಕೆ ಬಾಲಿವುಡ್ ಚಿತ್ರರಂಗಕ್ಕೆ ಮರಳುವ ಸಾಧ್ಯತೆಗಳು ಇಲ್ಲ ಎಂದು ಬಾಲಿವುಡ್ ತಾರೆ ಐಶ್ವರ್ಯಾ ರೈ ಇತ್ತೀಚೆಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಇದನ್ನೇ ಕೆಲವರು ಇನ್ನೊಂದು ಅರ್ಥದಲ್ಲಿ ಕಲ್ಪಿಸಿಕೊಂಡಿದ್ದಾರೆ.

ಅದೇನೆಂದರೆ ಅವರು ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬುದು. ಈ ಗಾಳಿಸುದ್ದಿ ಈಗ ಬಾಲಿವುಡ್ ನಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ತಮ್ಮ ಮೊದಲ ಮಗು ಆರಾಧ್ಯ ಹುಟ್ಟಿ ಈಗ 14 ತಿಂಗಳಾಗುತ್ತಿದೆ. ಇಷ್ಟು ಬೇಗ ಐಶ್ವರ್ಯಾ ಎರಡನೇ ಮಗುವಿನ ಅಣಿಯಾದರೆ?

ಒಂದು ಮಗುವಿಗೂ ಇನ್ನೊಂದು ಮಗುವಿಗೂ ಕನಿಷ್ಠ ಎರಡು ವರ್ಷಗಳ ಅಂತರ ಇರಬೇಕು ಎಂಬುದು ವೈದ್ಯರ ಸಲಹೆ. ಐಶ್ವರ್ಯಾ ರೈ ಅವರಿಗೆ ಅಷ್ಟೂ ಗೊತ್ತಾಗಲ್ವೆ? ಎಂದು ಆಕೆಯ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಯಾವ ಚಿತ್ರಕ್ಕೂ ಸಹಿ ಹಾಕದಿರುವ ಐಶ್ವರ್ಯಾ, ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಅವರ ದೇಹದ ತೂಕ ಯಥಾವತ್ತಾಗಿದೆ. ಒಂದು ವೇಳೆ ಅವರು ಚಿತ್ರದಲ್ಲಿ ಅಭಿನಯಿಸುವಂತಿದ್ದರೆ ಇಷ್ಟೊತ್ತಿಗೆ ತೂಕದ ಕಡೆಗಾದರೂ ಗಮನಕೊಡುತ್ತಿದ್ದರು. ಆದರೆ ಅವರು ಸುಮ್ಮನಿರುವುದು ಆಕೆ ಗರ್ಭಿಣಿ ಎಂಬ ಮಾತುಗಳಿಗೆ ರೆಕ್ಕೆಪುಕ್ಕ ಬಂದಿದೆ. (ಏಜೆನ್ಸೀಸ್)

English summary
Reports say that bollywood actress Aishwarya Rai has conceived again. Also, it is said that there are changes in her body which are typical of a pregnant woman. Now it seems Aishwarya Rai is into plans for second delivery.
Please Wait while comments are loading...