»   » ಕನ್ನಡಕ್ಕೆ ಬರ್ತಿದ್ದಾರೆ ಕಮಲ್ ಹಾಸನ್ ಎರಡನೇ ಪುತ್ರಿ.!

ಕನ್ನಡಕ್ಕೆ ಬರ್ತಿದ್ದಾರೆ ಕಮಲ್ ಹಾಸನ್ ಎರಡನೇ ಪುತ್ರಿ.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಇಬ್ಬರು ಮಕ್ಕಳು ಸಿನಿಮಾ ಲೋಕದಲ್ಲಿ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಸೌತ್ ನಿಂದ ಬಾಲಿವುಡ್ ನವರೆಗೂ ಶ್ರುತಿ ಹಾಸನ್ ಮತ್ತು ಅಕ್ಷರ್ ಹಾಸನ್ ಹೆಸರು ಜೋರಾಗಿಯೇ ಕೇಳಿ ಬರುತ್ತೆ. ಆದ್ರೆ, ಇದುವರೆಗೂ ಕಮಲ್ ಪುತ್ರಿಯರ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ ಮತ್ತು ಯಾವುದೇ ಚಟುವಟಿಕೆಯಲ್ಲೂ ಭಾಗವಹಿಸಿಲ್ಲ.

ಇದೇ ಮೊದಲ ಬಾರಿಗೆ ಕಮಲ ಹಾಸನ್ ಎರಡನೇ ಮಗಳು ಅಕ್ಷರ್ ಹಾಸನ್ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರಂತೆ. ಈ ಸುದ್ದಿ ಈಗ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಹೌದು, ಕ್ರೇಜಿಸ್ಟಾರ್ ಎರಡನೇ ಪುತ್ರನ ಚಿತ್ರಕ್ಕಾಗಿ ಕಮಲ್ ಹಾಸನ್ ಎರಡನೇ ಪುತ್ರಿ ಕನ್ನಡಕ್ಕೆ ಬರ್ತಿದ್ದಾರಂತೆ.

ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಕ್ರೇಜಿಸ್ಟಾರ್ ಎರಡನೇ ಪುತ್ರ.!

Actress Akshara Hassan Debut to Sandalwood

ನಿರ್ದೇಶಕ ನಾಗಶೇಖರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಅಕ್ಷರ್ ಹಾಸನ್ ಅವರನ್ನ ಅಪ್ರೋಚ್ ಮಾಡಲಾಗಿದೆಯಂತೆ. ಕಥೆ ಕೇಳಿರುವ ಅಕ್ಷರ್ ಹಾಸನ್ ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ರವಿಚಂದ್ರನ್ ಅವರ ಮುದ್ದು ಮಕ್ಕಳು ಒಂದೇ ಫ್ರೇಮ್ ನಲ್ಲಿ ಸೆರೆಯಾದಾಗ....

ಇನ್ನು ಈ ಚಿತ್ರವನ್ನ ಆರ್ ಎಸ್ ಪ್ರೊಡಕ್ಷನ್ ಅಡಿಯಲ್ಲಿ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡುತ್ತಿದ್ದು, ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿಯೂ ಮೂಡಿಬರಲಿದೆಯಂತೆ. ಆಷಾಡ ಮುಗಿದ ಮೇಲೆ ವಿಕ್ರಂ ರವಿಚಂದ್ರನ್ ಅವರ ಸಿನಿಮಾ ಸೆಟ್ಟೇರಲಿದೆ ಎನ್ನುತ್ತಿವೆ ಮೂಲಗಳು.

English summary
Actress Akshara Hassan has been approached by the makers of the film which has Vikram Ravichandaran in the lead role. The Movie directed by Nagashekhar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada