For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರಾ 'ಸ್ವೀಟಿ' ಅನುಷ್ಕಾ ಶೆಟ್ಟಿ?

  |

  'ಬಾಹುಬಲಿ 2' ಚಿತ್ರದ ಬಳಿಕ ಸ್ವೀಟಿ ಅನುಷ್ಕಾ ಶೆಟ್ಟಿ ಅಂತಹ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ನಟಿಸಿಲ್ಲ. ಬಾಹುಬಲಿಯ ಬಳಿಕ ಅವರು ಹಾರರ್-ಥ್ರಿಲ್ಲರ್ ಚಿತ್ರ 'ಭಾಗಮತಿ'ಯಲ್ಲಿ ಗಮನ ಸೆಳೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ನಟಿಸುತ್ತಿರುವ ಚಿತ್ರಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಪ್ರಮುಖ ನಿರ್ದೇಶಕರ ಚಿತ್ರಗಳು ಅವರ ಬಳಿ ಹೋದರೂ ಅವರು ಸಹಿ ಹಾಕುತ್ತಿಲ್ಲ ಎಂದು ಹೇಳಲಾಗುತ್ತಿದೆ.

  ನಿಮ್ಮ ಜೊತೆ ಮತ್ತಷ್ಟು ಸಿನಿಮಾ ಮಾಡಬೇಕು ಅಂತ ಪ್ರಾರ್ಥಿಸುತ್ತೇನೆ | Shiva Rajkumar | Vasishta N. Simha

  2017ರಲ್ಲಿ ಬಿಡುಗಡೆಯಾದ 'ಬಾಹುಬಲಿ 2'ರ ಬಳಿಕ ಅವರು 'ಭಾಗಮತಿ' ಮತ್ತು 'ನಿಶ್ಶಬ್ಧಂ' ಚಿತ್ರಗಳಲ್ಲಿ ಮಾತ್ರ ನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ನಾಯಕಿ ಪ್ರಧಾನ ಚಿತ್ರಗಳು. ಇವುಗಳಲ್ಲಿ 'ನಿಶ್ಶಬ್ಧಂ' ತೆರೆ ಕಾಣಲು ಸಿದ್ಧವಾಗುತ್ತಿದೆ. ಈ ಚಿತ್ರ ಏಪ್ರಿಲ್‌ನಲ್ಲಿಯೇ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿತ್ತು. ಕೊರೊನಾ ವೈರಸ್ ಕಾರಣದಿಂದ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಸದ್ಯಕ್ಕೆ ನಿಶ್ಶಬ್ಧಂ ಚಿತ್ರತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ. ಮೆಗಾ ಸ್ಟಾರ್ ಚಿರಂಜೀವಿ ಅವರಿಗಾಗಿ ಅನುಷ್ಕಾ 'ಸೈರಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಓದಿ...

  ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್

  ಒಟಿಟಿಯಲ್ಲಿ ನಿಶ್ಶಬ್ಧಂ?

  ಒಟಿಟಿಯಲ್ಲಿ ನಿಶ್ಶಬ್ಧಂ?

  ನಿಶ್ಶಬ್ಧಂ ಚಿತ್ರದ ಬಿಡುಗಡೆಯ ಸುದ್ದಿ ಕೆಲವು ದಿನಗಳಿಂದ ಚರ್ಚೆಯಲ್ಲಿತ್ತು. ಚಿತ್ರಮಂದಿರಗಳು ತೆರೆಯುವವರೆಗೂ ಕಾಯಲು ಶಕ್ತರಾಗಿಲ್ಲದ ಕಾರಣ ನಿರ್ಮಾಪಕರು ನೇರ ಒಟಿಟಿಯಲ್ಲಿ ಚಿತ್ರವನ್ನು ತೆರೆ ಕಾಣಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಡಿಜಿಟಲ್ ಪ್ಲಾಟ್‌ ಫಾರ್ಮ್ ಒಂದರ ಜತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

  ನಿರ್ಮಾಪಕರ ಅಸಮಾಧಾನ?

  ನಿರ್ಮಾಪಕರ ಅಸಮಾಧಾನ?

  ನಿಶ್ಶಬ್ಧಂ ಚಿತ್ರವನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ನಟಿ ಅನುಷ್ಕಾ ಶೆಟ್ಟಿ ಸಹಮತ ವ್ಯಕ್ತಪಡಿಸಿರಲಿಲ್ಲ. ಇದರಿಂದ ನಿರ್ಮಾಪಕರು ಬೇಸರಗೊಂಡಿದ್ದರು ಎಂದು ಹೇಳಲಾಗಿತ್ತು. ಸಾಮಾನ್ಯವಾಗಿ ಒಟಿಟಿ ಬಿಡುಗಡೆಗೆ ಆ ಕಂಪೆನಿಗಳು ಪ್ರಮುಖ ಕಲಾವಿದರ ಅನುಮತಿ ಮತ್ತು ಹೇಳಿಕೆ ಬಯಸುತ್ತವೆ. ಆದರೆ ಅನುಷ್ಕಾ ಇದಕ್ಕೆ ಒಪ್ಪಿಕೊಂಡಿರಲಿಲ್ಲ ಎಂದು ವರದಿಯಾಗಿತ್ತು.

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅನುಷ್ಕಾ ಶೆಟ್ಟಿ ಭಾವನಾತ್ಮಕ ಬರಹಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅನುಷ್ಕಾ ಶೆಟ್ಟಿ ಭಾವನಾತ್ಮಕ ಬರಹ

  ಗೌತಮ್ ಮೆನನ್ ಚಿತ್ರ ಅನುಮಾನ

  ಗೌತಮ್ ಮೆನನ್ ಚಿತ್ರ ಅನುಮಾನ

  'ನಿಶ್ಶಬ್ಧಂ' ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಅವರ ಸಿನಿಮಾ ಯಾವುದು? ಗೌತಮ್ ಮೆನನ್ ಅವರ ಬಹುಭಾಷೆಯ ಸಿನಿಮಾದಲ್ಲಿ ನಟಿಸಲು ಅನುಷ್ಕಾ ಶೆಟ್ಟಿ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಚಿತ್ರದ ತಮಿಳು ನಿರ್ಮಾಪಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಾರಣದಿಂದ ಇದು ಸದ್ಯಕ್ಕೆ ಸೆಟ್ಟೇರುವುದು ಅನುಮಾನವಾಗಿದೆ.

  ನಾಯಕಿ ಪ್ರಧಾನ ಚಿತ್ರಗಳಿಗೆ ಆದ್ಯತೆ

  ನಾಯಕಿ ಪ್ರಧಾನ ಚಿತ್ರಗಳಿಗೆ ಆದ್ಯತೆ

  ಅನುಷ್ಕಾ ಈಗ ಚಿತ್ರರಂಗದ ನಂಟನ್ನು ನಿಧಾನವಾಗಿ ಕಳಚಿಕೊಳ್ಳಲು ಬಯಸಿದ್ದಾರೆ. ಬರುವ ಎಲ್ಲ ಸಿನಿಮಾಗಳನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಚಿತ್ರದ ಕಥೆ ತಮ್ಮ ಸುತ್ತಲೇ ಇರುವಂತಹ ನಾಯಕಿ ಪ್ರಧಾನ ಸಿನಿಮಾಗಳಿಗೆ ಆದ್ಯತೆ ನೀಡುತ್ತಿದ್ದಾರೆ.

  ನಟನೆಯಿಂದ ದೂರ ಸರಿಯುತ್ತಾರಾ?

  ನಟನೆಯಿಂದ ದೂರ ಸರಿಯುತ್ತಾರಾ?

  ಅಲ್ಲದೆ, ತಮಗೆ ಅತ್ಯಾಪ್ತರಾಗಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಚಿತ್ರಗಳನ್ನು ಮಾತ್ರವೇ ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರಿಂದ ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳು ಮಾತ್ರವೇ ಬರುತ್ತಿವೆ. ಇದು ಅವರು ನಟನೆಗೆ ನಿಧಾನವಾಗಿ ಗುಡ್ ಬೈ ಹೇಳಲು ತಯಾರಿ ನಡೆಸಿರುವ ಸೂಚನೆ ಎನ್ನಲಾಗುತ್ತಿದೆ.

  ಮದುವೆ ವದಂತಿ ನಿರಾಕರಣೆ

  ಮದುವೆ ವದಂತಿ ನಿರಾಕರಣೆ

  ಅನುಷ್ಕಾ ಶೆಟ್ಟಿ ಮದುವೆಯ ಸಂಗತಿ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ತೆಲುಗು ನಿರ್ಮಾಪಕರೊಬ್ಬರ ಮಗನೊಂದಿಗೆ ಅನುಷ್ಕಾ ಮದುವೆ ನಡೆಯಲಿದೆ ಎಂಬ ಸುದ್ದಿ ಹರಿದಾಡಿತ್ತು. ಇದನ್ನು ಅನುಷ್ಕಾ ತಳ್ಳಿಹಾಕಿದ್ದರು. ತೆರೆಯ ಮೇಲಿನ ಸುಂದರ ಜೋಡಿಗಳಲ್ಲಿ ಒಂದಾದ ಪ್ರಭಾಸ್ ಮತ್ತು ಅನುಷ್ಕಾ ನಿಜಜೀವನದಲ್ಲಿಯೂ ಜೋಡಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಅದನ್ನು ಕೂಡ ಇಬ್ಬರೂ ನಿರಾಕರಿಸಿದ್ದರು.

  ನಟಿ ಅನುಷ್ಕಾ ಶೆಟ್ಟಿ ಮೊದಲ ಆಡಿಷನ್ ವಿಡಿಯೋ ವೈರಲ್ನಟಿ ಅನುಷ್ಕಾ ಶೆಟ್ಟಿ ಮೊದಲ ಆಡಿಷನ್ ವಿಡಿಯೋ ವೈರಲ್

  English summary
  Buzz around actress Anushka Shetty as Sweety is not accepting much films. She may quit acting soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X