For Quick Alerts
  ALLOW NOTIFICATIONS  
  For Daily Alerts

  'ಇಂತಹ' ಹೀರೋಗಳ ಜತೆ ಸಿನಿಮಾ ಮಾಡುವುದಿಲ್ಲವಂತೆ ಪೂಜಾ ಹೆಗ್ಡೆ!

  |

  ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ದಕ್ಷಿಣ ಭಾರತದ ನಟಿಯರಲ್ಲಿ ಪೂಜಾ ಹೆಗ್ಡೆ ಒಬ್ಬರು. ಕರಾವಳಿ ಮೂಲದ ಈ ಚೆಲುವೆ ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆ ಪಡೆದಿದ್ದಾರೆ. ಬಾಲಿವುಡ್ ಕೂಡ ಈಕೆಯ ಅಭಿನಯ ಮತ್ತು ಗ್ಲಾಮರ್ ಲುಕ್‌ಗೆ ಮಾರು ಹೋಗಿದೆ. ಈ ಬೇಡಿಕೆ ಅರಿತೇ ಇತ್ತೀಚೆಗೆ ಪೂಜಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದರು.

  ಎಸ್ ಪಿ ಬಾಲಸುಬ್ರಹ್ಮಣ್ಯಂ ತಗುಲಿದ ಕರೋನ ಸೋಂಕು | Filmibeat Kannada

  ಪೂಜಾ ಹೆಗ್ಡೆ ಚಿತ್ರಗಳ ಆಯ್ಕೆಯಲ್ಲಿ ಬಹಳ 'ಚೂಸಿ'ಯಾಗಿದ್ದಾರಂತೆ. ಒಳ್ಳೆಯ ಆಫರ್‌ಗಳು ಬಂತು ಎಂಬ ಕಾರಣಕ್ಕೆ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದರೂ, ಒಳ್ಳೆಯ ಕಥೆ ಇದ್ದರೂ ಅವರು ಥಟ್ಟನೆ ಸಿನಿಮಾಗಳಿಗೆ ಸಹಿ ಹಾಕುವುದಿಲ್ಲ. ಈ ಎಲ್ಲ ಅಂಶಗಳ ನಡುವೆ ಪೂಜಾ ಮತ್ತೊಂದು ಕರಾರು ಕೂಡ ಮುಂದಿಡುತ್ತಿದ್ದಾರಂತೆ. ಅದು ನಾಯಕನದ್ದು. ತಮ್ಮ ಚಿತ್ರಗಳಲ್ಲಿ ನಾಯಕ ಕೂಡ ದೊಡ್ಡ ಸ್ಟಾರ್ ಆಗಿರಬೇಕು ಎನ್ನುವುದು ಅವರ ನಿಯಮ. ಹೀಗಾಗಿ ಎಷ್ಟೇ ಸಂಭಾವನೆ ನೀಡಿದರೂ ಸಣ್ಣ ಪುಟ್ಟ ಹೀರೋಗಳ ಜತೆಗೆ ಅವರು ನಟಿಸುವುದಿಲ್ಲವಂತೆ. ಮುಂದೆ ಓದಿ...

  ಎಲ್ಲ ಸಿನಿಮಾ ಒಪ್ಪುತ್ತಿಲ್ಲ

  ಎಲ್ಲ ಸಿನಿಮಾ ಒಪ್ಪುತ್ತಿಲ್ಲ

  ಇದುವರೆಗೂ ತಮ್ಮ ಪಾಲಿಗೆ ಒಲಿದಿದ್ದ ಬಹುತೇಕ ಎಲ್ಲ ಸಿನಿಮಾಗಳನ್ನೂ ಪೂಜಾ ಒಪ್ಪಿಕೊಂಡು ನಟಿಸಿದ್ದರು. ಅವರಿಗೆ ದೊಡ್ಡ ಸ್ಟಾರ್ ನಟರ ಸಿನಿಮಾಗಳೂ ಸಿಕ್ಕಿದ್ದವು. ಆದರೆ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಅವರು ಬಹಳ ಎಚ್ಚರಿಕೆಯ ನಡೆ ಇರಿಸುತ್ತಿದ್ದಾರೆ.

  ಏಕಾ-ಏಕಿ ಸಂಭಾವನೆ ಹೆಚ್ಚಿಸಿಕೊಂಡ ಪೂಜಾ ಹೆಗ್ಡೆ: ಒಂದು ಸಿನಿಮಾಕ್ಕೆ ಎಷ್ಟು?ಏಕಾ-ಏಕಿ ಸಂಭಾವನೆ ಹೆಚ್ಚಿಸಿಕೊಂಡ ಪೂಜಾ ಹೆಗ್ಡೆ: ಒಂದು ಸಿನಿಮಾಕ್ಕೆ ಎಷ್ಟು?

  ಅಂಧಾಧುನ್ ರೀಮೇಕ್ ಒಲ್ಲೆ ಎಂದ ಪೂಜಾ

  ಅಂಧಾಧುನ್ ರೀಮೇಕ್ ಒಲ್ಲೆ ಎಂದ ಪೂಜಾ

  ಇತ್ತೀಚಿನ ವರದಿಗಳ ಪ್ರಕಾರ ಯುವ ನಟ ನಿತಿನ್ ಜತೆಗಿನ ಸಿನಿಮಾವನ್ನು ಪೂಜಾ ತಿರಸ್ಕರಿಸಿದ್ದಾರೆ. ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ 'ಅಂಧಾಧುನ್'ನ ರೀಮೇಕ್‌ನಲ್ಲಿ ಆಯುಷ್ಮಾನ್ ಖುರಾನಾ ನಿಭಾಯಿಸಿದ್ದ ಪಾತ್ರವನ್ನು ನಿತಿನ್ ನಿರ್ಹಿಸುತ್ತಿದ್ದಾರೆ. ಇದರಲ್ಲಿ ನಿತನ್‌ಗೆ ಜೋಡಿಯಾಗಿ ಪೂಜಾ ನಟಿಸಬೇಕಿತ್ತು. ಆದರೆ ಇದಕ್ಕೆ ಅವರು ಒಪ್ಪಿಲ್ಲ.

  'ಎ' ಗ್ರೇಡ್ ನಟರ ಜತೆ ಸಿನಿಮಾ

  'ಎ' ಗ್ರೇಡ್ ನಟರ ಜತೆ ಸಿನಿಮಾ

  ಸಣ್ಣ ಪುಟ್ಟ ಹೀರೋಗಳು ಅಥವಾ ಮಧ್ಯಮ ಮಟ್ಟದ ಹೀರೋಗಳ ಸಿನಿಮಾದಲ್ಲಿ ನಟಿಸಲು ಪೂಜಾ ಹೆಗ್ಡೆ ಒಪ್ಪುತ್ತಿಲ್ಲ. 'ಎ' ಗ್ರೇಡ್‌ನ ನಟರ ಜತೆ ಮಾತ್ರ ತೆರೆ ಹಂಚಿಕೊಳ್ಳಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪ್ರಭಾಸ್ ಜತೆಗೆ 'ರಾಧೆ ಶ್ಯಾಮ್' ಮತ್ತು ಅಖಿಲ್ ಜತೆ 'ಮೋಸ್ಟ್ ಎಲಿಜಬಲ್ ಬ್ಯಾಚೆಲರ್' ಚಿತ್ರಗಳು ಅವರಿಗೆ ಸಿಕ್ಕಿವೆ. ಹೀಗಾಗಿ ನಿತಿನ್ ಜತೆಗಿನ ಸಿನಿಮಾವನ್ನು ಅವರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ಮುಯ್ಯಿಗೆ ಮುಯ್ಯಿ: ಪೂಜಾ ಹೆಗ್ಡೆಯನ್ನು ಲೇವಡಿ ಮಾಡಿದ ಸಮಂತಾಮುಯ್ಯಿಗೆ ಮುಯ್ಯಿ: ಪೂಜಾ ಹೆಗ್ಡೆಯನ್ನು ಲೇವಡಿ ಮಾಡಿದ ಸಮಂತಾ

  ಕಳಪೆ ಪೋಸ್ಟರ್ ಎಂದ ಫ್ಯಾನ್ಸ್

  ಕಳಪೆ ಪೋಸ್ಟರ್ ಎಂದ ಫ್ಯಾನ್ಸ್

  ಅಖಿಲ್ ಅಕ್ಕಿನೇನಿ ಹಾಗೂ ಪೂಜಾ ಹೆಗ್ಡೆ ನಟಿಸುತ್ತಿರುವ 'ಮೋಸ್ಟ್ ಎಲಿಜಬಲ್ ಬ್ಯಾಚೆಲರ್' ಚಿತ್ರದ ಹೊಸ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದು ವಿವಾದ ಸೃಷ್ಟಿಸಿದೆ. ಇದರಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ಅಖಿಲ್ ಕಿವಿಯನ್ನು ಪೂಜಾ ಕಾಲಿನಲ್ಲಿ ಎಳೆಯುತ್ತಿರುವ ಚಿತ್ರವಿತ್ತು. ಇದು ಅಖಿಲ್ ಅಭಿಮಾನಿಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಇದು ಅತ್ಯಂತ ಕೀಳುಮಟ್ಟದ ಪೋಸ್ಟರ್ ಎಂದು ಕಿಡಿಕಾರಿದ್ದಾರೆ. ನಿಮ್ಮ ಅತ್ತಿಗೆ (ಸಮಂತಾ) ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

  ರಶ್ಮಿಕಾ ಅಲ್ಲ, ಅನುಷ್ಕಾ ಅಲ್ಲ, ಇವರೇ ನೋಡಿ ತೆಲುಗಿನ ನಂ 1 ನಟಿರಶ್ಮಿಕಾ ಅಲ್ಲ, ಅನುಷ್ಕಾ ಅಲ್ಲ, ಇವರೇ ನೋಡಿ ತೆಲುಗಿನ ನಂ 1 ನಟಿ

  English summary
  Actress Pooja Hegde has turned down the offer of Nithin starrer Andhadhun remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X