»   » ಗುಳಿಕೆನ್ನೆ ಚೆಲುವೆಗೆ ಅದೃಷ್ಟ ಮತ್ತೆ ಕೈ ಕೊಟ್ಟಿದೆ.!

ಗುಳಿಕೆನ್ನೆ ಚೆಲುವೆಗೆ ಅದೃಷ್ಟ ಮತ್ತೆ ಕೈ ಕೊಟ್ಟಿದೆ.!

Posted By:
Subscribe to Filmibeat Kannada

ಕೆಲದಿನಗಳ ಹಿಂದೆಯಷ್ಟೇ ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ಜೋಡಿಯ ಚಿತ್ರಗಳ ಬಗ್ಗೆ ಸುದ್ದಿಯಾಗಿತ್ತು. ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳಲ್ಲಿ ವಿಜಯ್ ಜೊತೆ ರಚಿತಾ ರಾಮ್ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಈ ಮಧ್ಯೆ 'ಕನಕ' ಚಿತ್ರದಿಂದ ರಚಿತಾ ಹೊರ ಬಂದಿದ್ದರು.

ಆದ್ರೆ, ಎರಡನೇ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಚಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿತ್ತಾದರೂ, ಈಗ ಆ ಚಿತ್ರದಿಂದಲೂ ಹೊರ ಬಂದಿದ್ದಾರಂತೆ. ಈ ಮೂಲಕ ದುನಿಯಾ ವಿಜಯ್ ಅವರ ಎರಡು ಸಿನಿಮಾಗಳನ್ನ ಒಪ್ಪಿಕೊಂಡು, ಈಗ ಆ ಚಿತ್ರಗಳಿಂದ ಹಿಂದೆ ಸರಿದಿದ್ದಾರೆ ಡಿಂಪಲ್ ಕ್ವೀನ್. ಮುಂದೆ ಓದಿ.....

ಎರಡನೇ ಚಿತ್ರದಿಂದಲೂ ರಚಿತಾ ಔಟ್!

ದುನಿಯಾ ವಿಜಯ್ ಜೊತೆ ಅಭಿನಯಿಸಬೇಕಿದ್ದ ಎರಡನೇ ಚಿತ್ರದಿಂದಲೂ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ಬಂದಿದ್ದಾರಂತೆ. ಈ ಚಿತ್ರವನ್ನ ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ.

ಮತ್ತೊಮ್ಮೆ 'ಲಕ್ಕಿ ಹೀರೋಯಿನ್' ಆದ ಡಿಂಪಲ್ ಕ್ವೀನ್ ರಚಿತಾ.!

ಕಾರಣವೇನು?

ಚಿತ್ರದಿಂದ ಹೊರ ಬರಲು ಕಾರಣ ಶೆಡ್ಯೂಲ್ ಸಮಸ್ಯೆ. ಈಗಾಗಲೇ ಒಪ್ಪಿಕೊಂಡಿರುವ ಕೆಲಸಗಳ ನಿಮಿತ್ತ ಈ ಚಿತ್ರದಲ್ಲಿ ಅಭಿನಯಿಸಲು ರಚಿತಾ ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಹೀಗಾಗಿ, ಈ ಚಿತ್ರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರಂತೆ.

ದುನಿಯಾ ವಿಜಯ್ ಚಿತ್ರದಿಂದ ರಚಿತಾ ರಾಮ್ ಹೊರ ಬಂದಿದ್ದೇಕೆ?

'ಕನಕ' ಚಿತ್ರದಿಂದಲೂ ರಚಿತಾ ಹೊರಕ್ಕೆ!

ಈ ಹಿಂದೆ ಆರ್.ಚಂದ್ರು ನಿರ್ದೇಶನದ 'ಕನಕ' ಚಿತ್ರದಿಂದಲೂ ರಚಿತಾ ಹೊರ ಬಂದಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ಹೊಸ ಜೋಡಿಯ ಅವಶ್ಯಕತೆಯಿತ್ತಂತೆ. ಹೀಗಾಗಿ, 'ಕನಕ' ಚಿತ್ರದಲ್ಲಿ ನಟಿಸಿದ್ರೆ, ಮತ್ತೆ ಪ್ರೀತಂ ಗುಬ್ಬಿ ಚಿತ್ರದಲ್ಲೂ ಅದೇ ಜೋಡಿ ಮುಂದುವರೆಯುತ್ತಿದ್ದರಿಂದ ಇದು ಪ್ರೆಶ್ ಜೋಡಿಯಾಗುವುದಿಲ್ಲ ಎಂಬ ಕಾರಣಕ್ಕೆ 'ಕನಕ' ಚಿತ್ರದಿಂದ ನಟಿಯನ್ನ ಕೈಬಿಡಲಾಗಿತ್ತಂತೆ.

ರಚಿತಾ ಜಾಗಕ್ಕೆ ಯಾರು?

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಹೆಸರು 'ಜಾನಿ ಜಾನಿ ಎಸ್ ಪಪ್ಪಾ'. ಅಂದ್ಹಾಗೆ, ಇದು 'ಜಾನಿ' ಚಿತ್ರದ ಮುಂದುವರೆದ ಭಾಗ. ಮೊದಲ ಭಾಗದಲ್ಲಿ ಮೋಹಕ ತಾರೆ ರಮ್ಯಾ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ರಚಿತಾ ಅಭಿನಯಿಸುವುದು ಪಕ್ಕಾ ಆಗಿತ್ತು. ಆಗ, ರಚಿತಾ ಹೊರಗುಳಿದಿರುವುದರಿಂದ ಆ ಜಾಗಕ್ಕೆ ಯಾರು ಎಂಬ ಕುತೂಹಲ ಕಾಡಿದೆ.

ಮೋಹಕ ತಾರೆ ರಮ್ಯಾ ಜಾಗಕ್ಕೆ ರಚಿತಾ ರಾಮ್ ಎಂಟ್ರಿ!

ಗುಳಿಕೆನ್ನೆ ನಟಿ ಬದಲು ಮೂಗುತ್ತಿ ಸುಂದರಿ

ಮೂಲಗಳ ಪ್ರಕಾರ, ಗುಳಿಕೆನ್ನೆ ಚೆಲುವೆ ರಚಿತಾ ಅವರ ಬದಲು, ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಅಭಿನಯಿಸುವ ಸಾಧ್ಯತೆ ಇದೆಯಂತೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದ್ದು, ಫೈನಲ್ ಆಗಬೇಕಿದೆಯಂತೆ.

ವಿಜಯ್ ನಿರ್ಮಾಣದ ಚಿತ್ರ

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರವನ್ನ ಸ್ವತಃ ದುನಿಯಾ ವಿಜಯ್ ಅವರೇ ನಿರ್ಮಾಣ ಮಾಡಲಿದ್ದಾರಂತೆ. ವಿ ಹರಿಕೃಷ್ಣ ಅವರು ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಉಳಿದಂತೆ ರಂಗಾಯಣ ರಘು ಮತ್ತು ಸಾಧುಕೋಕಿಲ ತಾರಾಗಣದಲ್ಲಿರಲಿದ್ದಾರೆ.

English summary
Looks like Rachita Ram will not be paired opposite Duniya Vijay anytime soon, because she has backed out from two films - Johnny Johnny Yes Papa and Kanaka

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada