For Quick Alerts
  ALLOW NOTIFICATIONS  
  For Daily Alerts

  ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಫಿಕ್ಸ್? ಶೀಘ್ರದಲ್ಲೇ ಅಧಿಕೃತ ಘೋಷಣೆ!

  |

  ಬಹುಭಾಷಾ ನಟಿ ತಮನ್ನಾ ಬಾಟಿಯಾ ಮ್ಯಾರೇಜ್ ಸ್ಟೋರಿ ಮತ್ತೊಮ್ಮೆ ಸದ್ದು ಮಾಡ್ತಿದೆ. ಒಂದ್ಕಡೆ ತಮನ್ನಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಶೀಘ್ರದಲ್ಲೇ ಮಿಲ್ಕಿ ಬ್ಯೂಟಿ ಹಸೆಮಣೆ ಏರುತ್ತಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಪೋಷಕರ ಆಸೆಯಂತೆ ತಮನ್ನಾ ಮದುವೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

  ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ತಮನ್ನಾ ಬಾಟಿಯಾ ನಟಿಸಿ ಗೆದ್ದಿದ್ದಾರೆ. ಕನ್ನಡದ 2 ಐಟಂ ಸಾಂಗ್‌ಗಳಲ್ಲಿ ಮಿಲ್ಕಿ ಬ್ಯೂಟಿ ಕುಣಿದು ರಂಗೇರಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೆ ತಮನ್ನಾ ಮ್ಯಾರೇಜ್ ಸ್ಟೋರಿ ಸದ್ದು ಮಾಡಿತ್ತು. ನಂತರ ಅದು ಸುಳ್ಳು ಎನ್ನಲಾಗಿತ್ತು. ವಯಸ್ಸು 30 ದಾಟಿದ್ದು ಮುಂಬೈ ಬ್ಯೂಟಿ ಈಗ ಮದುವೆ ಬಗ್ಗೆ ಆಲೋಚಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಮುಂಬೈ ಮೂಲದ ಉದ್ಯಮಿ ಒಬ್ಬರನ್ನು ತಮನ್ನಾ ಕೈ ಹಿಡಿಯುತ್ತಾರೆ ಎನ್ನುವ ಸುದ್ದಿ ಜೋರಾಗಿದೆ ಕೇಳಿ ಬರುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

  ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ತಮನ್ನಾಗೆ ಆರಂಭದಲ್ಲಿ ಸಕ್ಸಸ್ ಸಿಕ್ಕಿರಲಿಲ್ಲ. ತಮಿಳಿನ 'ಪಯ್ಯಾ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಮುಂದೆ ಬಾಲಿವುಡ್‌ನಲ್ಲೂ ಒಳ್ಳೆ ಅವಕಾಶಗಳು ಸಿಕ್ಕಿತ್ತು.

  ಲವ್ ಗಾಸಿಪ್‌ನಿಂದ ತಮನ್ನಾ ದೂರ

  ಲವ್ ಗಾಸಿಪ್‌ನಿಂದ ತಮನ್ನಾ ದೂರ

  ತಮನ್ನಾ ಬಾಲಿವುಡ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು ಸಕ್ಸಸ್ ಸಿಕ್ಕಿದ್ದು ಮಾತ್ರ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಮಿಲ್ಕಿ ಬ್ಯೂಟಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಯಾವುದೇ ಹಿಂಟ್ ಬಿಟ್ಟುಕೊಟ್ಟಿಲ್ಲ. ಸಿನಿಮಾ ನಟಿಯರು ಅಂದು ಡೇಟಿಂಗ್ ಗಾಸಿಪ್ ಕಾಮನ್. ಆದರೆ ಇದರಿಂದ ತಮನ್ನಾ ದೂರವೇ ಉಳಿದಿದ್ದಾರೆ. ಕೆಲ ವರ್ಷಗಳ ಹಿಂದೆ ಕ್ರಿಕೆಟಿಗನೊಬ್ಬನ ಜೊತೆ ತಮನ್ನಾ ಹೆಸರು ತಳುಕು ಹಾಕಿಕೊಂಡಿದ್ದರು. ಆ ನಂತರ ತಾನಾಯ್ತು ತನ್ನ ಸಿನಿಮಾಗಳಾಯ್ತು ಅಂತ ತಮನ್ನಾ ಇದ್ದಾರೆ.

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ

  ತೆಲುಗು ಹಾಗೂ ತಮಿಳಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದ ತಮನ್ನಾಗೆ ನಂತರ ಬಾಲಿವುಡ್ ಮಂದಿ ಕರೆದು ಅವಕಾಶ ಕೊಟ್ಟರು. ದಕ್ಷಿಣ ಭಾರತದಲ್ಲಿ ದಳಪತಿ ವಿಜಯ್, ಸೂಪರ್ ಸ್ಟಾರ್ ಮಹೇಶ್ ಬಾಬು, ಪವನ್ ಕಲ್ಯಾಣ್, ಚಿರಂಜೀವಿ, ಪ್ರಭಾಸ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆಗೆ ತಮನ್ನಾ ತೆರೆ ಹಂಚಿಕೊಂಡಿದ್ದಾರೆ. ಗ್ಲಾಮರಸ್ ರೋಲ್‌ಗಳ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.

  ಟಾಪ್ ನಟಿಯಾದರೂ ಐಟಂ ಸಾಂಗ್ಸ್

  ಟಾಪ್ ನಟಿಯಾದರೂ ಐಟಂ ಸಾಂಗ್ಸ್

  ಬಾಲಿವುಡ್‌ನಲ್ಲಿ ಟಾಪ್ ಹೀರೊಯಿನ್ಸ್ ಐಟಂ ಸಾಂಗ್ಸ್‌ಗೆ ಕುಣಿಯುವ ಟ್ರೆಂಡ್ ಇತ್ತು. ಆದರೆ ತಮನ್ನಾ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಡ್ಯಾನ್ಸಿಂಗ್‌ ನಂಬರ್‌ಗಳಿಗೆ ಕುಣಿದು ರಂಗೇರಿಸಿದರು. ನಾಯಕಿಯಾಗಿ ಬೇಡಿಕೆ ಇದ್ದಾಗಲೇ ಐಟಂ ಸಾಂಗ್ಸ್‌ನಲ್ಲಿ ಕುಣಿದು ಭರ್ಜರಿ ಸಂಭಾವನೆ ಪಡೆದುಕೊಂಡಿದ್ದರು. ಕನ್ನಡದ 'KGF ಚಾಪ್ಟರ್-1' ಹಾಗೂ 'ಜಾಗ್ವಾರ್' ಸಿನಿಮಾಗಳಲ್ಲೂ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು.

  4 ಸಿನಿಮಾಗಳಲ್ಲಿ ಬ್ಯುಸಿ

  4 ಸಿನಿಮಾಗಳಲ್ಲಿ ಬ್ಯುಸಿ

  ಸದ್ಯ ಮಿಲ್ಕಿ ಬ್ಯೂಟಿ ತಮನ್ನಾ 4 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2 ತೆಲುಗು ಹಾಗೂ 1 ಹಿಂದಿ ಜೊತೆಗೆ ಮತ್ತೊಂದು ಮಲಯಾಳಂ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಭೋಳಾ ಶಂಕರ್' ತೆಲುಗು ಚಿತ್ರದಲ್ಲಿ ಚಿರುಗೆ ಜೋಡಿ ಆಗಿದ್ದಾರೆ. 'ಬೊಲೆ ಚುಡಿಯಾ' ಎನ್ನುವ ಹಿಂದಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡದ 'ಲವ್‌ ಮಾಕ್ಟೇಲ್' ತೆಲುಗು ರೀಮೆಕ್ 'ಗುರ್ತುಂದಾ ಸೀತಾಕಾಲಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. 'ಬಾಂದ್ರಾ' ಎನ್ನುವ ಸಿನಿಮಾ ಮೂಲಕ ಮಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ.

  English summary
  Actress Tamanna Bhatia All Set To Tie The Knot With This Mumbai Based Businessman. latest reports that have been doing rounds across the internet, milky beauty may soon be tying a knot to a businessman of her parents’ choice. Know more.
  Tuesday, November 15, 2022, 23:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X