»   » ವೀಣಾ ಮಲಿಕ್ ಮದುವೆಗೆ ರೆಡಿ; ಕಂಡೀಷನ್ಸ್ ಅಪ್ಲೈ

ವೀಣಾ ಮಲಿಕ್ ಮದುವೆಗೆ ರೆಡಿ; ಕಂಡೀಷನ್ಸ್ ಅಪ್ಲೈ

Posted By:
Subscribe to Filmibeat Kannada

ಐಟಂ ಗರ್ಲ್ಸ್, ನೀಲಿ ತಾರೆಗಳ ಸಾಲಿನಲ್ಲೇ ಸೇರುವ ವೀಣಾ ಮಲಿಕ್ ಕುಳಿತರೂ ನಿಂತರೂ ಸುದ್ದಿ. ಮಾಡೆಲ್ ಹಾಗೂ ನಟಿಯರಾದ ಸನ್ನಿ ಲಿಯೋನ್, ಪೂನಮ್ ಪಾಂಡೆ, ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರಂತೆ ವೀಣಾ ಕೂಡ ದೇಹ ಪ್ರದರ್ಶನಕ್ಕೆ ಹೆಸರಾದವರು. ಈಗ ಹೊಸದೊಂದು ಸುದ್ದಿಯನ್ನು ವೀಣಾ ಮಲಿಕ್ ಹರಡಿಬಿಟ್ಟಿದ್ದಾರೆ.

ವೀಣಾ ಮಲಿಕ್ ಅವರಿಗೆ ಗಂಡ ಬೇಕಂತೆ. ಮದುವೆನೂ ಆಗಿ ಸಂಸಾರ ನಡೆಸ್ತಾರಂತೆ. ಆದರೆ ಕೆಲವೊಂದು ಕಂಡೀಷನ್ಸ್ ಇದೆ. ಅದನ್ನು ಒಪ್ಪೋದಾದ್ರೆ ಮಾತ್ರ ವೀಣಾರಿಗೆ ಗಂಡನಾಗಬಹುದು. ಅದೇನಾಗಿರಬಹುದು ಅಂತಹ ಕಂಡೀಷನ್ಸ್ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳುವುದೇನೂ ಬೇಡ. ಯಾಕಂದ್ರೆ ಅವರೇ ಕಂಡೀಷನ್ಸ್ ಪಟ್ಟಿ ನೀಡಿದ್ದಾರೆ.

ವೀಣಾ ಮಲಿಕ್ ವಿಧಿಸಿರುವ ಷರತ್ತುಗಳು:
*ಮನೆಗೆ ಬರುತ್ತಿದ್ದಂತೆ ಮೇಕಪ್ ತೆಗೆಯಬೇಕು
*ದಿನಚರಿ ಎಲ್ಲವನ್ನೂ ಮಾಡಬೇಕು.
*ಬಾಯಿಗೆ ತುತ್ತು ಕೊಡಬೇಕು
*ಶೂಗಳನ್ನು ಹಾಕಲು ಸಹಾಯ ಮಾಡಬೇಕು
*ದಿನಾ ಬೆಳಗ್ಗೆ ನಿದ್ದೆಯಿಂದ ಎಬ್ಬಿಸಬೇಕು

ಇಷ್ಟೆಲ್ಲಾ ಷರತ್ತುಗಳು ಅನ್ವಯಿಸುತ್ತವೆ ಎಂದಿರುವ ವೀಣಾ, ತಮಗೆ ಈ ಕಾರಣಕ್ಕಾಗಿಯೇ ಗಂಡ ಬೇಕೆಂಬ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ. ರಾಖಿ ಸಾವಂತರಂತೆ ವೀಣಾ ಯಾವುದೇ ಸ್ವಯಂವರ ಏರ್ಪಡಿಸಿಲ್ಲ ಅನ್ನುವುದೇ ವಿಶೇಷ ಸಂಗತಿ ಎನ್ನಬೇಕು. ಅವರಿಗೆ ಸ್ವಯಂವರ ಏರ್ಪಡಿಸಲು ಕಷ್ಟ ಎಂದಲ್ಲ, ಇಷ್ಟವಿರಲಿಕ್ಕಿಲ್ಲ ಅಷ್ಟೇ.

ಇತ್ತೀಚಿಗೆ ಕನ್ನಡದ ಚಿತ್ರ 'ಡರ್ಟಿ ಪಿಕ್ಚರ್, ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರೀಕರಣ ಮುಗಿಸಿರುವ ವೀಣಾ ಮಲಿಕ್ ತಮ್ಮ ಹುಟ್ಟೂರು ಪಾಕಿಸ್ತಾನಕ್ಕೆ ಮರಳಿದ್ದಾರೆ. ಟಾಕಿ ಪೋರ್ಶನ್ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳ ಶೂಟಿಂಗ್ ಮಾತ್ರ. ಇನ್ನೊಂದು ತಿಂಗಳು ನಂತರ ಮತ್ತೆ ಬೆಂಗಳೂರಿಗೆ ಬರಲಿರುವ ವೀಣಾ, ಚಿತ್ರತಂಡದೊಂದಿಗೆ ಗೋವಾ ಮತ್ತು ಶ್ರೀಲಂಕಾಗಳಿಗೆ ಪ್ರಯಾಣಮಾಡಲಿದ್ದಾರೆ.

ನಿರ್ಮಾಪಕ ವೆಂಕಟಪ್ಪ ಮಗ ಅಕ್ಷಯ್ ನಾಯಕನಾಗಿರುವ ಡರ್ಟಿ ಪಿಕ್ಚರ್ ಚಿತ್ರವನ್ನು ನಿರ್ದೇಶಿಸುತ್ತಿರುವುದು ತ್ರಿಶೂಲ್. ನಿರ್ದೇಶಕರು "ವೀಣಾ ಯಾವುದೇ ಕಿರಕ್ ಮಾಡದೇ ನಮ್ಮ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಯಾವ ದೃಶ್ಯಕ್ಕೂ ಅವರಿಂದ ತಕರಾರು ಎದುರಾಗಿಲ್ಲ. ತುಂಬಾ ಚೆನ್ನಾಗಿಯೇ ಸಹಕರಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Veena Malik told that she wants to marry. But some conditions apply. Here, her conditions are mentioned. Another thing is, her Kannada movie 'Dirty Picture' shooting completed and she returned to her native Pakistan. 
 
Please Wait while comments are loading...