For Quick Alerts
  ALLOW NOTIFICATIONS  
  For Daily Alerts

  'ಲೆಜೆಂಡ್' ಬಾಲಕೃಷ್ಣಗೆ ಆಕ್ಷನ್ ಕಟ್ ಹೇಳಲು ಹೊರಟ ಕೊರಟಾಲ ಶಿವ!

  |

  ನಂದಮೂರಿ ಬಾಲಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಅಖಂಡ' ಸಿನಿಮಾದ ಬಳಿಕ ಬಾಲಕೃಷ್ಣಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಅದರಲ್ಲೂ ಅಖಂಡ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಗಳಿಸಿದ ಬಳಿಕ ಬಾಲಯ್ಯ ಬೇಡಿಕೆ ಹೆಚ್ಚಾಗಿದೆ. ಸದ್ಯ ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ 107ನೇ ಸಿನಿಮಾದಲ್ಲಿ ಬಾಲಕೃಷ್ಣ ನಟಿಸುತ್ತಿದ್ದಾರೆ.

  107 ಸಿನಿಮಾ ಫಸ್ಟ್ ಲುಕ್ ಟೀಸರ್ ಕೂಡ ಬಾಲಯ್ಯ ಅಭಿಮಾನಿಗಳಲ್ಲಿ ಸಖತ್ ಥ್ರಿಲ್ ಕೊಟ್ಟಿದೆ. 107ನೇ ಸಿನಿಮಾ ಮುಗಿಯುತ್ತಿದ್ದಂತೆ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಆರಂಭ ಆಗಲಿದೆ. ಅಷ್ಟರಲ್ಲೇ ಕೊರಟಾಲ ಶಿವ ಸಿನಿಮಾ ಬಗ್ಗೆನೂ ಟಾಕ್ ಶುರುವಾಗಿದೆ.

  ಹುಟ್ಟುಹಬ್ಬಕ್ಕೆ NBK107 ಟೀಸರ್ ರಿಲೀಸ್ ಆದರೂ 'ಬ್ರೋ ಐ ಡೋಂಟ್ ಕೇರ್' ಎಂದ ಬಾಲಕೃಷ್ಣ!ಹುಟ್ಟುಹಬ್ಬಕ್ಕೆ NBK107 ಟೀಸರ್ ರಿಲೀಸ್ ಆದರೂ 'ಬ್ರೋ ಐ ಡೋಂಟ್ ಕೇರ್' ಎಂದ ಬಾಲಕೃಷ್ಣ!

  ಬಾಲಕೃಷ್ಣ ಎರಡ್ಮೂರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾಗಳಿಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ. ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಡೈರೆಕ್ಟರ್‌ಗಳು ಕೆಲವು ತಿಂಗಳಿಂದ ಬಾಲಯ್ಯ ಜೊತೆ ಸಂಪರ್ಕದಲ್ಲಿದ್ದಾರಂತೆ. ಅಲ್ಲದೆ ಅವರೊಂದಿಗೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

  ಇನ್ನೊಂದು ಕಡೆ ಸ್ಕ್ರಿಪ್ಟ್ ಬಾಲಕೃಷ್ಣ ಸಿಕ್ಕಾ ಪಟ್ಟೆ ಸ್ಟ್ರಿಕ್ಟ್ ಆಗಿದ್ದಾರೆ ಎನ್ನಲಾಗಿದೆ. ಸಿನಿಮಾ ಕಥೆ ಇಷ್ಟ ಆಗದೆ ಹೊರತು ಯಾರಿಗೂ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ ಅನ್ನೋ ಮಾತು ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ.

  ಸದ್ಯದಲ್ಲೇ ಬಿಗ್ ಡೈರೆಕ್ಟರ್ ಒಬ್ಬರಿಗೆ ಬಾಲಕೃಷ್ಣ ಗ್ರೀನ್ ಸಿಗ್ನಲ್ ನೀಡಲಿದ್ದಾರಂತೆ. ಅವರು ಮತ್ಯಾರೂ ಅಲ್ಲ ಜೂನಿಯರ್ ಎನ್‌ಟಿಆರ್‌ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಲು ಹೊರಟಿರುವ ಕೊರಟಾಲ ಶಿವ. ಈಗಾಗಲೇ ಜೂ. ಎನ್ ಟಿಆರ್ ಜೊತೆ ಕೊರಟಾಲ ಶಿವ 'ಜನತಾ ಗ್ಯಾರೇಜ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗ ಮತ್ತೊಮ್ಮೆ ಜೂ.ಎನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

  ಅದೂ ಅಲ್ಲದೆ ಮತ್ತೊಬ್ಬ ನಂದಮೂರಿ ಹೀರೊ ಜೊತೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿದೆ. ಅದು ಮತ್ಯಾರೂ ಅಲ್ಲ ಬಾಲಕೃಷ್ಣ. ಬಹಳ ದಿನಗಳ ಬಳಿಕ ಟಾಲಿವುಡ್ ಲೆಜೆಂಡ್ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಕೊರಟಾಲ ಶಿವ ಅವಕಾಶ ಸಿಕ್ಕಿರಲಿಲ್ಲ. ಅದು ಈಗ ಸಾಧ್ಯವಾಗಿದೆ ಎನ್ನಲಾಗಿದೆ.

  ಟಾಲಿವುಡ್‌ನ ಮೆಗಾ ಬ್ಯಾನರ್ ಗೀತಾ ಆರ್ಟ್ಸ್ ಇವರಿಬ್ಬರ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆ ಇದೆಯಂತೆ. ಜೊತೆ ಬಾಲಕೃಷ್ಣ ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ, ಅಲ್ಲು ಅರವಿಂದ್ ಕೂಡ ನಿರ್ಮಾಣ ಮಾಡಲಿದ್ದಾರೆ ಅನ್ನೋ ಸುದ್ದಿಯಿದೆ.

  English summary
  After Akhanda Nandamuri Balakrishna New Project With Koratala Siva, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X