»   » ಬಿಗ್ ಬಾಸ್ ನಿಂದ ಹೊರಬಂದ ಹರ್ಷಿಕಾ ಏನ್ಮಾಡ್ತಾರೆ?

ಬಿಗ್ ಬಾಸ್ ನಿಂದ ಹೊರಬಂದ ಹರ್ಷಿಕಾ ಏನ್ಮಾಡ್ತಾರೆ?

By: ಜೀವನರಸಿಕ
Subscribe to Filmibeat Kannada

ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ನಲ್ಲಿ ಮಿಂಚ್ತಾರೆ ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಯಾರೂ ಅಂದುಕೊಳ್ಳದ ಹಾಗೆ ಹರ್ಷಿಕಾ ಎರಡನೇ ವಾರಕ್ಕೇನೇ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಒಂದು ಎಪಿಸೋಡಿಗೆ ಪಡೆಯೋ ರು.70-80 ಸಾವಿರಕ್ಕಿಂತ ಮೂರು ತಿಂಗಳಾದ್ರೂ ಇದ್ದು ಭರ್ಜರಿ ಪ್ರಚಾರ ಪಡ್ಕೊಳ್ಳೋ ಯೋಚನೆ ಎಲ್ಲ ಸ್ಪರ್ಧಿಗಳದ್ದು. ಹರ್ಷಿಕಾ ಕೂಡ ಒಂದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಬಿಗ್ ಬಾಸ್ ಜೊತೆಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆಲ್ಲೋ ಉತ್ಸಾಹದಲ್ಲಿದ್ರು.

After Bigg Boss what next Harshika Poonacha?

ಸದ್ಯ ಇರೋ ಪರಿಸ್ಥಿತಿ ಅಂದ್ರೆ ಹರ್ಷಿಕಾ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ನಟಿಸಬೇಕಿದ್ದ ಸಿನಿಮಾ 'ಗುಲಾಬಿ ಸ್ಟ್ರೀಟ್' ಈಗಾಗ್ಲೇ ವಿವಾದದಿಂದ ನಿಂತು ಹೋಗಿದೆ. 'ಲವ್ ದರ್ಬಾರ್' ಅನ್ನೋ ಸಿನಿಮಾ ಶುರುವಾಗಬೇಕಿದೆ.

ಆದ್ರೆ ಇದೆಲ್ಲದರ ಜೊತೆಗೆ ಹರ್ಷಿಕಾ ಒಂದು ಜಾಬ್ ಕೂಡ ಮಾಡ್ತಿದ್ದಾರೆ. ಸಿನಿಮಾ ನಟನೆ ಇಲ್ಲದಿದ್ರೂ ಜಾಬ್ ಮಾಡೋದಂತೂ ಪಕ್ಕ. ಆದರೆ ಹರ್ಷಿಕಾಗೆ ಈಗಲೂ ಹಲವು ಆಫರ್ ಗಳಿವೆಯಂತೆ. ಒಪ್ಪಿಕೊಳ್ತಿರೋ ಆಫರ್ ಗಳು ಮಾತ್ರ ಕೆಲವೇ ಕೆಲವಂತೆ. ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಮತ್ತೆ ಆಫರ್ ಗಳು ಬರೋದ್ರಲ್ಲಿ ಅನುಮಾನವಿಲ್ಲ ಬಿಡಿ ಎನ್ನುತ್ತಿದೆ ಗಾಂಧಿನಗರ.

English summary
What will do actress Harshika Poonacha after evicted from Bigg Boss 2 show? Her latest movie 'Gulabi Street' stalled and 'Love Darbar' will start soon. Apart from acting, she is doing a job in prive organisation.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada