For Quick Alerts
  ALLOW NOTIFICATIONS  
  For Daily Alerts

  ದಿಗಂತ್ ಜೊತೆ ಮದುವೆ ಸುದ್ದಿ ಬಗ್ಗೆ ಐಂದ್ರಿತಾ ಕೊಟ್ಟ ಪರೋಕ್ಷ ಪ್ರತಿಕ್ರಿಯೆ!

  By Naveen
  |

  ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಆದರೆ ಈ ವಿಷಯದ ಬಗ್ಗೆ ಇದೀಗ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  ಪ್ರತಿ ಬಾರಿಯಂತೆ ಈ ಬಾರಿಯೂ ದಿಗಂತ್ ಮತ್ತು ಐಂದ್ರಿತಾ ಮದುವೆ ಸುದ್ದಿ ಹರಿದಾಡಿತ್ತು. ದಿಗಂತ್ ಮತ್ತು ಐಂದ್ರಿತಾ ಮದುವೆ ಮುಂದಿನ ವರ್ಷ ನಡೆಯಲಿದೆ ಎಂದು ಕೆಲವು ದಿನಪತ್ರಿಕೆಗಳು ವರದಿ ಮಾಡಿವೆ. ಜೊತೆಗೆ ದಿಗಂತ್ ಅವರೇ ಐಂದ್ರಿತಾ ಜೊತೆ ಮದುವೆಯಾಗುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಟಿ ಐಂದ್ರಿತಾ ಟ್ವಿಟ್ಟರ್ ಖಾತೆಯ ಮೂಲಕ ಪರೋಕ್ಷವಾಗಿ ಉತ್ತರಿಸಿದ್ದಾರೆ. ಮುಂದೆ ಓದಿ...

  ಏನಿದು ಸುದ್ದಿ..?

  ಏನಿದು ಸುದ್ದಿ..?

  ''ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಇಬ್ಬರು ಮುಂದಿನ ವರ್ಷ ಮದುವೆಯಾಗುತ್ತಾರೆ. ಈ ಬಗ್ಗೆ ಸ್ವತಃ ದಿಗಂತ್ ಸ್ಪಷ್ಟಪಡಿಸಿದ್ದು, ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ'' ಎನ್ನುವ ಸುದ್ದಿ ಇದೀಗ ಕೇಳಿಬಂದಿದೆ.

  'ಐಂದ್ರಿತಾ ಫ್ಯಾನ್ಸ್ ಪೇಜ್'

  'ಐಂದ್ರಿತಾ ಫ್ಯಾನ್ಸ್ ಪೇಜ್'

  ಈ ಸುದ್ದಿ ಬಗ್ಗೆ ಐಂದ್ರಿತಾ ಅಭಿಮಾನಿಗಳು ತಮ್ಮ 'ಐಂದ್ರಿತಾ ರೇ ಫ್ಯಾನ್ಸ್' ಟ್ವಿಟ್ಟರ್ ಖಾತೆಯಲ್ಲಿ 'ಇದು ಸುಳ್ಳು ಸುದ್ದಿ' ಎಂದು ಪೋಸ್ಟ್ ಹಾಕಿದ್ದರು.

  ಐಂದ್ರಿತಾ ಪ್ರತಿಕ್ರಿಯೆ

  ಐಂದ್ರಿತಾ ಪ್ರತಿಕ್ರಿಯೆ

  'ಐಂದ್ರಿತಾ ರೇ ಫ್ಯಾನ್ಸ್' ಟ್ವಿಟ್ಟರ್ ಖಾತೆಯಲ್ಲಿ 'ಇದು ಸುಳ್ಳು ಸುದ್ದಿ' ಎಂದು ಹಾಕಿರುವುದು ವಿಶೇಷವಾಗದೆ ಇರಬಹುದು. ಆದರೆ ಈ ಫ್ಯಾನ್ಸ್ ಪೋಸ್ಟ್ ಅನ್ನು ಐಂದ್ರಿತಾ ರೇ ಕೂಡ ರೀ-ಟ್ವೀಟ್ ಮಾಡಿದ್ದಾರೆ.

  ಪರೋಕ್ಷವಾಗಿ ಉತ್ತರ

  ಪರೋಕ್ಷವಾಗಿ ಉತ್ತರ

  ಐಂದ್ರಿತಾ ತಾವು ನೇರವಾಗಿ ಮದುವೆ ಸುದ್ದಿ ಬಗ್ಗೆ ಏನು ಹೇಳಿಲ್ಲ. ಆದರೆ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಟ್ವೀಟ್ ಅನ್ನು ತಾವು ರೀ-ಟ್ವೀಟ್ ಮಾಡುವ ಮೂಲಕ ಇದು 'ಸುಳ್ಳು ಸುದ್ದಿ' ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

  ದಿಗಂತ್ ಮೌನ

  ದಿಗಂತ್ ಮೌನ

  ಮದುವೆ ಬಗ್ಗೆ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ದಿಗಂತ್ ಮಾತ್ರ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಇದುವರೆಗೆ ಯಾವುದೇ ರಿಯಾಕ್ಷನ್ ನೀಡಿಲ್ಲ.

  ಇತ್ತೀಚಿನ ಬೆಳವಣಿಗೆ

  ಇತ್ತೀಚಿನ ಬೆಳವಣಿಗೆ

  ಇತ್ತೀಚಿಗಷ್ಟೆ ನಡೆದ ಕೆಲ ಕಾರ್ಯಕ್ರಮದಲ್ಲಿ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಜೊತೆಗೆ ಭಾಗವಹಿಸಿದ್ದರು. ಅಲ್ಲದೆ ಡ್ರಗ್ಸ್ ಆರೋಪ ವಿಷಯವಾಗಿ ದಿಗಂತ್ ಬಗ್ಗೆ ಟ್ವೀಟ್ ಮಾಡಿ ಐಂದ್ರಿತಾ ಸಾಥ್ ನೀಡಿದ್ದರು.

  ದಿಗಂತ್-ಐಂದ್ರಿತಾ ಬಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ ನಿಜವೋ? ಸುಳ್ಳೋ?

  'ಸೂಪರ್ ಟಾಕ್ ಟೈಂ' ನಲ್ಲಿ

  'ಸೂಪರ್ ಟಾಕ್ ಟೈಂ' ನಲ್ಲಿ

  'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಬಂದಿದ್ದ ಸಮಯದಲ್ಲಿ ಐಂದ್ರಿತಾ ರೇ ''ದಿಗಂತ್ ನನ್ನ ಬಾಯ್ ಫ್ರೆಂಡ್'' ಎಂದು ಒಪ್ಪಿಕೊಂಡಿದ್ದರು.

  ಐಂದ್ರಿತಾ ರೇ ಜೊತೆ 'ಮಿಸ್ಸಿಂಗ್' ಆದ ದೂದ್ ಪೇಡ ದಿಗಂತ್

  ಇಬ್ಬರ ಸಿನಿಮಾಗಳು

  ಇಬ್ಬರ ಸಿನಿಮಾಗಳು

  ದಿಗಂತ್ ಮತ್ತು ಐಂದ್ರಿತಾ 'ಮನಸಾರೆ' ಮತ್ತು 'ಪರಿಜಾತ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಜೊತೆಗೆ ದಿಗಂತ್ ಅವರ 'ಶಾರ್ಪ್ ಶೂಟರ್' ಚಿತ್ರದ ಒಂದು ಹಾಡಿನಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ದರು.

  English summary
  Aindrita Ray has taken her twitter account to gave reaction about Diganth and her marriage gossip. ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆ ಸುದ್ದಿ ಬಗ್ಗೆ ಇದೀಗ ಐಂದ್ರಿತಾ ರೇ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X