»   » ಶಿವಣ್ಣ ಜೊತೆ ಐಶ್ವರ್ಯ ರೈ ಚಿತ್ರ ಕನ್ಫರ್ಮ್

ಶಿವಣ್ಣ ಜೊತೆ ಐಶ್ವರ್ಯ ರೈ ಚಿತ್ರ ಕನ್ಫರ್ಮ್

By: ಹರಾ
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಕನ್ನಡಕ್ಕೆ ಬರುವುದು ಖಚಿತವಾಗಿದೆ. ಕನ್ನಡ ಬಾರದ 'ಕನ್ನಡತಿ', ಬಚ್ಚನ್ ಸೊಸೆ ಕಡೆಗೂ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಒಂದು ವರ್ಷದಿಂದ 'ನೋಡೋಣ' ಅಂತ ಕಾಲ ಹಾಕಿದ್ದ ಐಶು 'ಇಂದು' ಗಾಂಧಿನಗರಕ್ಕೆ ಕಾಲಿಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅದು ಯಾವ ಚಿತ್ರಕ್ಕೆ ಅಂದ್ರೆ, ನಿಮ್ಗೆಲ್ಲಾ ಈಗಾಗಲೇ ಗೊತ್ತಿರುವ ಹಾಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಮನಮೋಹಕ' ಚಿತ್ರಕ್ಕೆ. ಕಳೆದ ಒಂದು ವರ್ಷದಿಂದ ಐಶ್ವರ್ಯ ರೈ ಡೇಟ್ಸ್ ಗಾಗಿ ಕಾದುಕುಳಿತ್ತಿದ್ದ ಶಿವಣ್ಣ ಮತ್ತು ನಿರ್ದೇಶಕ 'ಸಿಂಪಲ್' ಸುನಿ ಕಡೆಗೂ ನಿಟ್ಟುಸಿರು ಬಿಟ್ಟಿದ್ದಾರೆ.


Shivarajkumar's Manamohaka

ಬಿಗ್ ಬಿ ಬಹು ಈಗಾಗಲೇ ಬಾಲಿವುಡ್ ನ 'ಜಝ್ಬಾ' ಚಿತ್ರಕ್ಕೆ ಬಣ್ಣ ಹಚ್ಚಿದ್ದಾಗಿದೆ. ಸೆಕೆಂಡ್ ಇನ್ನಿಂಗ್ಸ್ ಗೆ ಚಾಲನೆ ಕೊಟ್ಟಿರುವ ಐಶ್ವರ್ಯ, ಸ್ಯಾಂಡಲ್ ವುಡ್ ಕಡೆ ಮುಖ ಮಾಡುವುದಕ್ಕೆ ಮನಸ್ಸು ಮಾಡಿದ್ದಾರೆ.


ಶಿವಣ್ಣ ಅಭಿನಯದ 'ಕಬೀರ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮಾವ ಕೂಡ ಬೆಂಗಳೂರಿಗೆ ಬರುತ್ತಿರುವುದರಿಂದ ಸೊಸೆಯನ್ನ ಒಪ್ಪಿಸುವುದು 'ಮನಮೋಹಕ' ಚಿತ್ರತಂಡಕ್ಕೆ ಕಷ್ಟವಾಗಲಿಲ್ಲವಂತೆ. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ]


Shivarajkumar's Manamohaka

ಒಂದು ವರ್ಷದಿಂದ ಸ್ಕ್ರಿಪ್ಟ್ ನ ತಿದ್ದಿ-ತೀಡಿರುವ ನಿರ್ದೇಶಕ 'ಸಿಂಪಲ್' ಸುನಿ, ನಾಯಕಿ ಐಶು ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶಿವಣ್ಣನಿಗೆ ವಿಭಿನ್ನ ಲುಕ್ ಕೊಟ್ಟಂತೆ, ಮಾಜಿ ವಿಶ್ವಸುಂದರಿ ಕೂಡ ಇಲ್ಲಿ 'ಸುರಸುಂದರಾಂಗಿ'ಯಂತೆ ಕಾಣಲಿದ್ದಾರೆ. ಶಿವಣ್ಣನ ಫೋಟೋಶೂಟ್ ಝಲಕ್ ನೋಡಿ ಮತ್ತು ಸುನಿ ಹೇಳಿದ ಕಥೆ ಕೇಳಿ 'ಹ್ಹೂಂ' ಅಂದಿದ್ದಾರಂತೆ ಐಶು.


ಸದ್ಯಕ್ಕೆ 'ಜಝ್ಬಾ' ಶೂಟಿಂಗ್ ನಲ್ಲಿ ಬಿಜಿಯಿರುವ ಐಶ್ವರ್ಯ, ಅದು ಕಂಪ್ಲೀಟ್ ಆದ ಬಳಿಕ 'ಮನಮೋಹಕ' ತಂಡಕ್ಕೆ ಸೇರಿಕೊಳ್ಳಲಿದ್ದಾರಂತೆ. ಅಂತೆ-ಕಂತೆ ನಂಬುವುದಕ್ಕೂ ಮುನ್ನ ಇಂದು 'ಮೂರ್ಖರ ದಿನಾಚರಣೆ' ಅನ್ನೋದನ್ನ ನೆನಪಿಡಿ.!!!

English summary
Bollywood Actress Aishwarya Rai has confirmed her Sandalwood Debut. Aishwarya Rai has agreed to pair opposite Hat-trick Hero Shivarajkumar in Simple Suni directorial 'Manamohaka'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada