»   » ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ!

ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ!

Posted By:
Subscribe to Filmibeat Kannada

ತಮಿಳುನಾಡಿನಲ್ಲಿ ರಜನಿಕಾಂತ್ ಮತ್ತು ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿಗಳು ಸಿನಿಲೋಕದಲ್ಲಿ ಚರ್ಚೆಯಾಗುತ್ತಿದೆ. ಹೀಗಿರುವಾಗ, ಟಾಲಿವುಡ್ ಸೂಪರ್ ಸ್ಟಾರ್ ನಟರೊಬ್ಬರು ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ ಎಂಬ ಹೊಸ ಸುದ್ದಿ ಬಹಿರಂಗವಾಗಿದೆ.

ಹೌದು, ತೆಲುಗಿನ ಖ್ಯಾತ ನಟ ಕಮ್ ಉದ್ಯಮಿ ಅಕ್ಕಿನೇನಿ ನಾಗಾರ್ಜುನ ರಾಜಕೀಯ ಅಖಾಡಕ್ಕೆ ಧುಮುಕುತ್ತಿದ್ದು, ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರಂತೆ. ಈ ಬಗ್ಗೆ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಚರ್ಚೆ ಕೂಡ ಆಗಿದೆಯಂತೆ.

'ರಾಜಕೀಯ' ಸುದ್ದಿಗೆ ಪೂರ್ಣ ವಿರಾಮವಿಟ್ಟ ಸೆಂಚುರಿಸ್ಟಾರ್

Akkineni Nagarjuna to join YS Jagan’s party

ಅಂದ್ಹಾಗೆ, ಅಕ್ಕಿನೇನಿ ನಾಗಾರ್ಜುನ ಅವರು ಮತ್ತು ಜಗನ್ ಮೋಹನ್ ರೆಡ್ಡಿ ತಂದೆ ವೈ.ಎಸ್.ರಾಜಶೇಖರ್ ರೆಡ್ಡಿ ಅವರು ತುಂಬಾ ಆಪ್ತರಾಗಿದ್ದರು. ವೈ.ಎಸ್.ರಾಜಶೇಖರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಸರ್ಕಾರಿ ಯೋಜನೆಗಳಿಗೆ ನಾಗಾರ್ಜುನ ಅವರು ರಾಯಭಾರಿ ಆಗಿದ್ದರು. ಹೀಗಾಗಿ, ವೈ.ಎಸ್.ಆರ್ ಕುಟುಂಬದ ಜೊತೆ ನಾಗಾರ್ಜುನ ಅವರ ಬಾಂಧವ್ಯ ಕೂಡ ಉತ್ತಮವಾಗಿದೆ.

ಸದ್ಯ, 'ರಾಜು ಗಾರಿ ಗಾಡಿ-2' ಚಿತ್ರದಲ್ಲಿ ನಾಗಾರ್ಜುನ ಅಭಿನಯಿಸುತ್ತಿದ್ದಾರೆ. ಸಿನಿಮಾ ನಟನೆ, ಮತ್ತು ನಿರ್ಮಾಣದ ಜೊತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ನಾಗಾರ್ಜುನ ರಾಜಕೀಯಕ್ಕೆ ಸೇರುತ್ತಾರ ಎಂಬುದು ಸದ್ಯದ ಕುತೂಹಲ.

English summary
According to Source Film Actor Akkineni Nagarjuna Could Be Joining the YSR Congress Party led by YS Jagan Mohan Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada