For Quick Alerts
  ALLOW NOTIFICATIONS  
  For Daily Alerts

  RRR ಚಿತ್ರದಲ್ಲಿ ಆಲಿಯಾ ದೃಶ್ಯ ಬರೀ 15 ನಿಮಿಷ: ಸಿಕ್ಕ ಸಂಭಾವನೆ ಒಂದು ಸಿನಿಮಾದಷ್ಟು!

  |

  ಹೆಚ್ಚು ಕಡಿಮೆ ಇನ್ನೊಂದು ತಿಂಗಳು RRR ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸಲು ಶುರುವಿಟ್ಟುಕೊಂಡಿರುತ್ತೆ. ರಾಜಮೌಳಿಯ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕದ್ದಲ ಎಬ್ಬಿಸಿರುತ್ತೆ. ಕೇವಲ ತೆಲುಗು ಭಾಷೆಯಲ್ಲಷ್ಟೇ ಅಲ್ಲ. ಕನ್ನಡದಲ್ಲೂ RRR ಹವಾ ಎಬ್ಬಿಸಿರುತ್ತೆ. ಅದಕ್ಕೆ ಒಂದು ತಿಂಗಳಿಗೂ ಮುಂಚೆನೇ ಜಕ್ಕಣ್ಣನ ಮೆಗಾ ಸಿನಿಮಾ ಭರ್ಜರಿ ಸೌಂಡು ಮಾಡುತ್ತಿದೆ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ತೆರೆಮೇಲೆ ನೋಡುವುದಕ್ಕೆ ಕಾದು ಕೂತಿದೆ.

  ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಬಿಟ್ಟು ಇನ್ನೂ ಇಬ್ಬರು ನಟರನ್ನು ತೆರೆಮೇಲೆ ನೋಡಲು ಸಿನಿಪ್ರಿಯರು ಕಾದು ಕೂತಿದ್ದಾರೆ. ಅವರು ಮತ್ಯಾರೂ ಅಲ್ಲ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಅಜಯ್ ದೇವಗನ್. ಇಬ್ಬರಲ್ಲೂ ಆಲಿಯಾ ಭಟ್ ದಕ್ಷಿಣ ಭಾರತಕ್ಕೆ ಕಾಲಿಟ್ಟಿರುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಸೀತೆ ಪಾತ್ರವನ್ನು ರಾಜಮೌಳಿ ಹೇಗೆ ಕಟ್ಟಿಕೊಟ್ಟಿರಬಹುದು ಅನ್ನುವ ಕುತೂಹಲವಿದೆ. ಆದ್ರೀಗ ಆಲಿಯಾ ಪಾತ್ರದ ಬಗ್ಗೆ ಹೊಸ ಸುದ್ದಿಯೊಂದು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

  15 ನಿಮಿಷದ RRR ದೃಶ್ಯಕ್ಕೆ ಬಂದ ಆಲಿಯಾ ಭಟ್?

  15 ನಿಮಿಷದ RRR ದೃಶ್ಯಕ್ಕೆ ಬಂದ ಆಲಿಯಾ ಭಟ್?

  ರಾಜಮೌಳಿಯ RRR ಸಿನಿಮಾದಲ್ಲಿ ಆಲಿಯಾ ಭಟ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ನಟಿಸಿರುವ ಅಲ್ಲೂರಿ ಸೀತಾರಾಮ ರಾಜು ಪಾತ್ರದ ಮನದನ್ನೆಯಾಗಿ ಆಲಿಯಾ ಕಂಗೊಳಿಸಲಿದ್ದಾರೆ. ಹೀಗಾಗಿ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಪಾತ್ರಗಳಂತೆ ಸೀತೆಯ ಪಾತ್ರ ಕೂಡ ಕುತೂಹಲ ಕೆರಳಿಸಿದೆ. ಆದರೆ, ಇತ್ತೀಚೆಗೆ ಟಾಲಿವುಡ್‌ನಲ್ಲಿ ಓಡಾಡುತ್ತಿರುವ ಸುದ್ದಿ ಏನಂದರೆ, ಆಲಿಯಾ ಭಟ್ RRR ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕೇವಲ 15 ನಿಮಿಷ ಮಾತ್ರ. ಇಡೀ ಸಿನಿಮಾದಲ್ಲಿ ಬರೀ 15 ನಿಮಿಷ ಮಾತ್ರ ಆಲಿಯಾ ದೃಶ್ಯವಿರುತ್ತೆ ಎನ್ನಲಾಗಿದೆ.

  15 ನಿಮಿಷದ ದೃಶ್ಯದಲ್ಲಿ ನಟಿಸಲು 5 ಕೋಟಿ ಸಂಭಾವನೆ

  15 ನಿಮಿಷದ ದೃಶ್ಯದಲ್ಲಿ ನಟಿಸಲು 5 ಕೋಟಿ ಸಂಭಾವನೆ

  ಆಲಿಯಾ ಭಟ್ ಸೀತೆ ಪಾತ್ರ ಎಷ್ಟು ಚರ್ಚೆ ಆಗುತ್ತಿದೆಯೋ, ಅಷ್ಟೇ ಚರ್ಚೆ ಆಗುತ್ತಿರುವ ಮತ್ತೊಂದು ಸಂಗತಿ ಅಂದರೆ ಅದು ಸಂಭಾವನೆ. ಆಲಿಯಾ ಭಟ್ RRR ಸಿನಿಮಾದಲ್ಲಿ ಸೀತೆ ಪಾತ್ರ ಮಾಡಲು ಬರೋಬ್ಬರಿ 5 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಬರೀ 15 ನಿಮಿಷದ ದೃಶ್ಯ ಇಷ್ಟೊಂದು ಸಂಭಾವನೆ ಕೊಟ್ಟಿ ಬಾಲಿವುಡ್‌ನಿಂದ ಕರೆದುಕೊಂಡು ಅಗತ್ಯವೇನಿತ್ತು? ಅನ್ನುವುದು ಟಾಲಿವುಡ್‌ನಲ್ಲಿ ಭಾರೀ ಚರ್ಚೆಯಾಗುತ್ತಿರುವ ಪ್ರಶ್ನೆ.

  ಸಿನಿಮಾಗೆ 10 ಕೋಟಿ ಪಡೆಯುವ ಆಲಿಯಾಗೆ ಯಾಕಿಷ್ಟ ಸಂಭಾವನೆ?

  ಸಿನಿಮಾಗೆ 10 ಕೋಟಿ ಪಡೆಯುವ ಆಲಿಯಾಗೆ ಯಾಕಿಷ್ಟ ಸಂಭಾವನೆ?

  ಆಲಿಯಾ ಭಟ್ ಒಂದು ಬಾಲಿವುಡ್ ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಹೀಗಿರುವಾಗ RRR ಸಿನಿಮಾದಲ್ಲಿ ಕೇವಲ 15 ನಿಮಿಷದ ದೃಶ್ಯಕ್ಕೆ 4 ಕೋಟಿ ಸಂಭಾವನೆ ಪಡೆದಿದ್ದು ಏಕೆ? ಎಂಬ ಪ್ರಶ್ನೆಗಳು ಎದ್ದಿವೆ. ಒಂದು ಬಾಲಿವುಡ್ ಸಿನಿಮಾಗೆ ಎರಡು ಮೂರು ತಿಂಗಳು ನಟಿಸುವ ನಟಿ, RRR ಚಿತ್ರಕ್ಕೆ ಕೇವಲ 10 ದಿನ ಮಾತ್ರ ಕಾಲ್‌ಶೀಟ್ ಕೊಟ್ಟಿದ್ದರು. ಆದರೂ, ರಾಜಮೌಳಿಯಂತಹ ನಿರ್ದೇಶಕನ ಸಿನಿಮಾದಲ್ಲಿ ಇಷ್ಟೊಂದು ಸಂಭಾವನೆ ಕೊಡುವ ಅಗತ್ಯವಿತ್ತಾ? ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

  ರಾಜಮೌಳಿ 5 ಕೋಟಿಯ ಲೆಕ್ಕಾಚಾರವೇನು?

  ರಾಜಮೌಳಿ 5 ಕೋಟಿಯ ಲೆಕ್ಕಾಚಾರವೇನು?

  ಆಲಿಯಾ ಭಟ್‌ಗೆ 5 ಕೋಟಿ ಕೊಟ್ಟು ಕರೆ ತಂದಿದ್ದರ ಹಿಂದೆ ರಾಜಮೌಳಿಯ ದೊಡ್ಡ ಲೆಕ್ಕಾಚಾರವಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ತೆಲುಗಿನಷ್ಟೇ ಹಿಂದಿ ಮಾರುಕಟ್ಟೆ ಕೂಡ ಅಷ್ಟೇ ಮುಖ್ಯ. ಆಲಿಯಾ ಸದ್ಯ ಬಾಲಿವುಡ್‌ನ ಮೋಸ್ಟ್‌ ಸಕ್ಸಸ್ ಫುಲ್ ನಟಿ. ಹೀಗಾಗಿ ಆಲಿಯಾ ಸಿನಿಮಾದಲ್ಲಿದ್ರೆ, ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯಬಹುದು ಅನ್ನುವುದು ಲೆಕ್ಕಾಚಾರ. ರಾಜಮೌಳಿ ಇದೂವರೆಗೂ ಆಲಿಯಾ ಪಾತ್ರದ ಝಲಕ್ ಅನ್ನು ಪರಿಚಯಿಸಿದ್ದಾರೆ. ಆದರೆ, ಎಲ್ಲೂ ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತಾರೆ ಅನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಸಿನಿಮಾ ನೋಡಿದ ಮೇಲೆ ಆಲಿಯಾ ಭಟ್ ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತಾರೆ ಅನ್ನುವುದು ತಿಳಿಯಲಿದೆ.

  English summary
  Bollywood actress Alia Bhatt will make her screen presence only for 15 minutes in RRR. She is charging Rs 5 Cr remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X