For Quick Alerts
ALLOW NOTIFICATIONS  
For Daily Alerts

  ಅಮಲಾ ಪೌಲ್ ವಿಚ್ಛೇದನ: ಆಕೆಯ ತಾಯಿಯೇ ಮೇನ್ ವಿಲನ್?

  By Harshitha
  |

  ಕಾಲಿವುಡ್, ಮಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಖ್ಯಾತಿ ಗಳಿಸಿ ಇದೀಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿರುವ ನಟಿ ಅಮಲಾ ಪೌಲ್ ಸದ್ಯ ವಿವಾದದ ಕೇಂದ್ರ ಬಿಂದು ಆಗಿರುವುದು 'ವಿಚ್ಛೇದನ'ದ ಸುದ್ದಿಯಿಂದ.

  ತಮಿಳು ಸಿನಿ ಅಂಗಳದ ಪ್ರಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಜೊತೆಗಿನ ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ನಟಿ ಅಮಲಾ ಪೌಲ್ ಪೂರ್ಣ ವಿರಾಮ ಇಟ್ಟಿದ್ದಾರೆ.

  ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ಕೋರ್ಟ್ ಮೆಟ್ಟಿಲೇರಿದ್ದಾಗಿದೆ. [ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟಿ ಅಮಲಾ ಪೌಲ್ ದಂಪತಿ]

  ಮದುವೆ ನಂತರವೂ ನಟಿ ಅಮಲಾ ಪೌಲ್ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿರುವುದೇ ಎ.ಎಲ್.ವಿಜಯ್ ಜೊತೆಗಿನ ಮನಸ್ತಾಪಕ್ಕೆ ಕಾರಣ ಅಂತ ಈ ಹಿಂದೆ ಗುಲ್ಲೆದ್ದಿತ್ತು. ಈಗ ಮಗಳ ಮದುವೆ ಮುರಿದು ಬೀಳುವುದಕ್ಕೆ ಸ್ವತಃ ಅಮಲಾ ಪೌಲ್ ತಾಯಿ ಕಾರಣ ಎನ್ನಲಾಗಿದೆ. ಮುಂದೆ ಓದಿ....

  ವಿಲನ್ ಸ್ಥಾನದಲ್ಲಿ ಅಮಲಾ ಪೌಲ್ ತಾಯಿ?

  ನಟಿ ಅಮಲಾ ಪೌಲ್ ಸಂಸಾರ ದೋಣಿ ಎರಡೇ ವರ್ಷಗಳಲ್ಲಿ ಮುಳುಗುವುದರ ಹಿಂದೆ ಆಕೆಯ ತಾಯಿ Annice Paul (ಅನ್ನೀಸ್ ಪೌಲ್) ಪಾತ್ರ ಹೆಚ್ಚಿದೆ ಅಂತ ಕೆಲ ತಮಿಳು ಆನ್ ಲೈನ್ ವೆಬ್ ತಾಣಗಳು ವರದಿ ಮಾಡಿವೆ. [ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?]

  ತಾಯಿ ಮಾತು ಮೀರಿ ಮದುವೆ ಆಗಿದ್ರಾ.?

  ವರದಿಗಳ ಪ್ರಕಾರ, ಎ.ಎಲ್.ವಿಜಯ್ ಜೊತೆ ನಟಿ ಅಮಲಾ ಪೌಲ್ ಬಹು ಬೇಗ ಮದುವೆ ಆಗಿದ್ದು ಆಕೆಯ ತಾಯಿ ಅನ್ನೀಸ್ ಪೌಲ್ ಗೆ ಇಷ್ಟವಿರಲಿಲ್ಲ. [ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

  ಮದುವೆ ಆದಾಗ ಅಮಲಾ ವಯಸ್ಸು.?

  ನಿರ್ದೇಶಕ ಎ.ಎಲ್.ವಿಜಯ್ ಜೊತೆ 2014, ಜೂನ್ 12 ರಂದು ಅಮಲಾ ಪೌಲ್ ಮದುವೆ ನಡೆದಿತ್ತು. ಆಗಿನ್ನೂ, ನಟಿ ಅಮಲಾಗೆ 23 ವರ್ಷ.

  ಬೇಗ ಮದುವೆ ಆಗಿದ್ದು ವೃತ್ತಿ ಜೀವನಕ್ಕೆ ಹೊಡೆತ ಬಿತ್ತು.!

  ವೃತ್ತಿ ಜೀವನದಲ್ಲಿ ಆಗಷ್ಟೇ ಅಮಲಾ ಪೌಲ್ ಯಶಸ್ಸಿನ ಏಣಿ ಹತ್ತುತ್ತಿದ್ದರು. ಹೀಗಿರುವಾಗಲೇ, ಮಗಳು ಮದುವೆ ಆಗಿದ್ದು ತಾಯಿ ಅನ್ನೀಸ್ ಪೌಲ್ ಗೆ ಇಷ್ಟ ಆಗ್ಲಿಲ್ಲ. ಆಕೆಗೆ ಮಗಳು ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗ್ಬೇಕೆಂಬ ಆಸೆ ಇತ್ತು ಎನ್ನಲಾಗಿದೆ.

  ಮದುವೆಗೆ ಎರಡೂ ಕುಟುಂಬಗಳ ವಿರೋಧ ಇತ್ತು

  ಮೊದಮೊದಲು ಅಮಲಾ ಪೌಲ್ ಮತ್ತು ಎ.ಎಲ್.ವಿಜಯ್ ಮದುವೆಗೆ ಉಭಯ ಕುಟುಂಬಗಳ ವಿರೋಧ ಇತ್ತು. ನಂತರ, ಎಲ್ಲರನ್ನ ಒಪ್ಪಿಸಿ ಹಿರಿಯರ ಸಮ್ಮುಖದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. [ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?]

  ಸಿನಿಮಾ ಬಿಡಲಿಲ್ಲ.!

  ಮದುವೆ ನಂತರ ಸಿನಿಮಾ ನಂಟನ್ನ ಅಮಲಾ ಕಳೆದುಕೊಳ್ಳಲಿಲ್ಲ.

  ತಾಯಿ ಬ್ರೇನ್ ವಾಶ್ ಮಾಡಿದ್ರಾ?

  ವೃತ್ತಿ ಜೀವನದ ಕಡೆ ಗಮನ ಕೊಡುವಂತೆ ನಟಿ ಅಮಲಾ ಪೌಲ್ ಗೆ ತಾಯಿ ಅನ್ನೀಸ್ ಪೌಲ್ ಬ್ರೇನ್ ವಾಶ್ ಮಾಡಿದರ ಪರಿಣಾಮ ಇಷ್ಟೆಲ್ಲಾ ಅವಾಂತರ ಆಗಿದ್ದು ಎಂಬುದು ಸದ್ಯದ ಖಾಸ್ ಖಬರ್.

  ಕಾಲಿವುಡ್ ನಲ್ಲಿ ಬ್ಯಾನ್?

  ವಿಚ್ಛೇದನದ ಪರಿಣಾಮ, ನಟಿ ಅಮಲಾ ಪೌಲ್ ಕಾಲಿವುಡ್ ನಲ್ಲಿ ಅನ್ ಆಫೀಶಿಯಲ್ ಬ್ಯಾನ್ ಎದುರಿಸುತ್ತಿದ್ದಾರೆ. [ವಿಚ್ಛೇದನ ಪಡೆದ್ರೆ ಏನಂತೆ, ಅಮಲಾ ಪೌಲ್ ಗೆ ಸಿನಿಮಾಗಳು ಸಿಗ್ಬೇಕಲ್ಲ.!]

  'ವಡಾ ಚೆನ್ನೈ' ಚಿತ್ರದಿಂದ ಔಟ್?

  ಅನ್ ಆಫೀಶಿಯಲ್ ಬ್ಯಾನ್ ಪರಿಣಾಮ ಧನುಷ್ ನಟನೆಯ 'ವಡಾ ಚೆನ್ನೈ' ಚಿತ್ರದಿಂದಲೂ ಅಮಲಾ ಪೌಲ್ ಔಟ್ ಆಗಿದ್ದಾರೆ ಅಂತ ವರದಿ ಆಗಿದೆ.

  ಕನ್ನಡದಲ್ಲಿ ನೆಲೆಯೂರುವ ಬಯಕೆ

  ಕನ್ನಡದಲ್ಲಿ 'ಹೆಬ್ಬುಲಿ' ಮತ್ತು ರವಿಚಂದ್ರನ್ ಪುತ್ರ ಮನರಂಜನ್ ಜೊತೆಗಿನ ಚಿತ್ರಗಳನ್ನ ಒಪ್ಪಿಕೊಂಡಿರುವ ಅಮಲಾ ಪೌಲ್ ಸ್ಯಾಂಡಲ್ ವುಡ್ ನಲ್ಲೇ ನೆಲೆಯೂರುವ ಸಾಧ್ಯತೆಗಳಿವೆ. ['ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?]

  ಅಮಲಾ ಪೌಲ್ ಮಾತನಾಡಿಲ್ಲ!

  ವಿಚ್ಛೇದನದ ಕುರಿತು ಇದುವರೆಗೂ ನಟಿ ಅಮಲಾ ಪೌಲ್ ತುಟಿ ಎರಡು ಮಾಡಿಲ್ಲ.

  English summary
  Even though there are several speculations about Actress Amala Paul - Director AL Vijay divorce reasons, Few Tamil Online Portals have reported that Amala Paul's mother Annice Paul has played major role in the separation.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more