Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು.!

ದರ್ಶನ್ ಅಭಿನಯದ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ'. 3Dಯಲ್ಲಿ ಚಿತ್ರೀಕರಣವಾಗುತ್ತಿರುವ ಈ ಚಿತ್ರದ ಸೆಟ್ ನಿಂದ 'ಗುಸುಗುಸು-ಪಿಸುಪಿಸು' ಅಂತ ಮಾತನಾಡುವಂತಹ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಮೊದಲಿಗೆ ಫೀಚರ್ ಸಿನಿಮಾ ಮಾಡಲು ಮಾತ್ರ ಪ್ಲಾನ್ ಮಾಡಿದ್ದ ಸಿನಿಮಾ ತಂಡ ಕೆಲ ದಿನಗಳ ನಂತ್ರ 3Dಯಲ್ಲಿ ಚಿತ್ರೀಕರಿಸುವುದಕ್ಕೆ ಪ್ಲಾನ್ ಮಾಡ್ತು. ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದ ಪ್ರತಿ ಕಲಾವಿದರೂ ಎರಡೆರಡು ಬಾರಿ ಚಿತ್ರೀಕರಣದಲ್ಲಿ ಭಾಗಿಯಾಗುವಂತಾಯ್ತು. ಇದೇ ಕಾರಣದಿಂದ ಕೆಲ ಕಲಾವಿದರು ಸಿಟ್ಟಾಗಿದ್ದಾರಂತೆ. ಅದ್ರಲ್ಲಿ ಅಂಬರೀಶ್ ಕೂಡ ಒಬ್ಬರು.! ಮುಂದೆ ಓದಿರಿ...

'ಕುರುಕ್ಷೇತ್ರ' ಸೆಟ್ ನಲ್ಲಿ ಕೋಪಗೊಂಡ ಅಂಬಿ
'3D' ಸಿನಿಮಾದ ಚಿತ್ರೀಕರಣ ಆದ್ದರಿಂದ ಕೆಲ ಸೀನ್ ಗಳನ್ನ ಎರಡು ಬಾರಿ ಚಿತ್ರೀಕರಿಸಬೇಕಾಯ್ತಂತೆ. ಈ ಸಂದರ್ಭದಲ್ಲಿ ಅಂಬಿ, ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೈಡ್ ಶಾಟ್ ನಲ್ಲಿ ಅಂಬಿ ಪಾತ್ರಕ್ಕೆ ಡ್ಯೂಪ್ ಹಾಕಿಸಲಾಗಿದೆ.

ನಾಗಣ್ಣನ ಮೇಲೆ ಮುನಿರತ್ನರಿಗೆ ಸಿಟ್ಟು
'ಕುರುಕ್ಷೇತ್ರ' ಸಿನಿಮಾಗಾಗಿ ಚಿತ್ರೀಕರಿಸಿದ್ದ ಸೀನ್ ಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಅರ್ಜುನ್ ಸರ್ಜಾ ನೋಡಿದ್ದಾರೆ. ಕೆಲ ಸೀನ್ ಗಳು ಇನ್ನೂ ಚೆನ್ನಾಗಿ ಬರಬೇಕೆಂದು ಇಬ್ಬರೂ ಅಭಿಪ್ರಾಯ ಪಟ್ಟು, ಮರು ಚಿತ್ರೀಕರಿಸುವಂತೆ ಸಲಹೆ ನೀಡಿದ್ದಾರೆ. ಈ ಮಾತು ಅಂಬಿ ಕಿವಿಗೆ ಬಿದ್ದಿದ್ದೇ ತಡ ಮೇಕಪ್ ತೆಗೆದು ಸೆಟ್ ನಿಂದ ಹೊರಬಂದಿದ್ರಂತೆ. ಇದರಿಂದ ನಿರ್ದೇಶಕರ ಮೇಲೆ ನಿರ್ಮಾಪಕರಾದ ಮುನಿರತ್ನ ಗರಂ ಆಗಿದ್ದಾರೆ.

ಚಿತ್ರೀಕರಣದ ಸ್ಥಳದಲ್ಲಿ 'ನಾಗೇಂದ್ರ ಪ್ರಸಾದ್ 'ಉಪಸ್ಥಿತಿ
ಆರಂಭದಿಂದಲೂ ಟಾಲಿವುಡ್ ಸಂಭಾಷಣಾಕಾರ 'ಭಾರವಿ' ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದರು. ತೆಲುಗಿನ ಡೈಲಾಗ್ಸ್ ಅನ್ನ ಬೆಂಗಳೂರಿನಲ್ಲಿ ಕೂತು 'ನಾಗೇಂದ್ರ ಪ್ರಸಾದ್' ಕನ್ನಡಕ್ಕೆ ಅನುವಾದ ಮಾಡಿ ಕಳುಹಿಸುತ್ತಿದ್ದರು. ಆದ್ರೆ ಇತ್ತೀಚಿನ ಸುದ್ದಿ ಪ್ರಕಾರ 'ಭಾರವಿ' ಚಿತ್ರತಂಡದಿಂದ ಹೊರನಡೆದದ್ದು, ಈಗ ವಿ.ನಾಗೇಂದ್ರ ಪ್ರಸಾದ್ ಅವ್ರೇ ಹೈದ್ರಾಬಾದ್ ನಲ್ಲಿ ಉಳಿದುಕೊಂಡು ಸಂಭಾಷಣೆ ಬರೆಯುತ್ತಿದ್ದಾರಂತೆ.

ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ
ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕುರುಕ್ಷೇತ್ರ ಸಿನಿಮಾ ತಂಡ '3D' ಸಿನಿಮಾಗೆ ಬೇಕಿರುವಂತೆ ಶೂಟಿಂಗ್ ಮಾಡುತ್ತಿದೆ. ಒಂದಿಷ್ಟು ಇರುಸು ಮುರಿಸಿನ ಜೊತೆಯಲ್ಲೇ ಒಳ್ಳೆ ಚಿತ್ರವನ್ನ ಪ್ರೇಕ್ಷಕರಿಗೆ ನೀಡಬೇಕು ಅನ್ನೋದು ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಅವ್ರ ಪ್ರಯತ್ನ.