For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್'ಗೆ ಅನುಷ್ಕಾ ಶೆಟ್ಟಿ

  By Rajendra
  |

  ರಾಕಿಂಗ್ ಸ್ಟಾರ್ ಯಶ್ ಅವರ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಬಿದ್ದಿದೆ. ಅವರ ಹೊಸ ಚಿತ್ರಕ್ಕೆ 'ಮಾಸ್ಟರ್ ಪೀಸ್' ಎಂದು ಹೆಸರಿಡಲಾಗಿದ್ದು, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗುತ್ತಿದ್ದಾರೆ ಸಂಭಾಷಣೆಕಾರ ಮಂಜು ಮಾಂಡವ್ಯ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ನಿನ್ನಿಂದಲೇ' ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ (ವಿಜಯ್ ಕಿರಗಂದೂರು) ಅವರ ಹೊಸ ಪ್ರಾಜೆಕ್ಟ್ ಇದು. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಮಂಜು ಮಾಂಡವ್ಯ ಹೊತ್ತಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ 'ಕೆಜಿಎಫ್']

  ಈಗಾಗಲೆ ಸಂಭಾಷಣೆಯಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು ಮಂಜು ಮಾಂಡವ್ಯ. ಇನ್ನು ಅವರ ಚೊಚ್ಚಲ ನಿರ್ದೇಶನ ಹೇಗಿರುತ್ತದೋ ಏನೋ ಎಂಬ ಕುತೂಹಲವಂತೂ ಸ್ಯಾಂಡಲ್ ವುಡ್ ನಲ್ಲಿ ಇದ್ದೇ ಇದೆ.

  ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನಲಾಗಿದೆ. ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ಹಾಗೂ ಮತ್ತೊಬ್ಬ ಮಲ್ಲಿಗೆಯಂತಹ ಬೆಡಗಿ ಪ್ರಿಯಾ ಆನಂದ್ ಅವರನ್ನು ಕನ್ನಡಕ್ಕೆ ಕರೆತರಲು ಮಾತುಕತೆ ನಡೆಯುತ್ತಿದೆ.

  'ರುದ್ರಮದೇವಿ' ಹಾಗೂ 'ಬಾಹುಬಲಿ' ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ ಬಿಜಿಯಾಗಿದ್ದಾರೆ. ಇನ್ನೊಬ್ಬ ಬೆಡಗಿ ಪ್ರಿಯಾ ಆನಂದ್ ಸಹ ಹಲವಾರು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಇವರಿಬ್ಬರು 'ಎಸ್' ಎನ್ನುತ್ತಾರೋ 'ನೋ' ಎನ್ನುತ್ತಾರೋ ಎಂಬುದನ್ನು ಕಾದುನೋಡಬೇಕು.

  ಜಯಣ್ಣ ಕಂಬೈನ್ಸ್ ನ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. 'ಗಜಕೇಸರಿ' ಚಿತ್ರದ ಬಳಿಕ ರಾಮಾಚಾರಿ ಚಿತ್ರದ ಬಗೆಗೂ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಸಂದರ್ಭದಲ್ಲಿ 'ಮಾಸ್ಟರ್ ಪೀಸ್' ಸುದ್ದಿ ಬಂದಿರುವುದು ಅವರ ಅಭಿಮಾನಿಗಳಿಗೆ ದೀಪಾವಳಿ, ಯುಗಾದಿ ಒಟ್ಟಿಗೆ ಬಂದಂತಾಗಿದೆ. (ಫಿಲ್ಮಿಬೀಟ್ ಕನ್ನಡ)

  English summary
  Bangalore based Tollywood actress Anushka Shetty to be making her Sandalwood debut. According to reports, Anushka to romance with Rocking Star Yash in his next project Masterpiece. This is the debut direction for dialogue writer Manju Mandavya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X