For Quick Alerts
  ALLOW NOTIFICATIONS  
  For Daily Alerts

  ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವರ್ಷವೆ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದರ ಬೆನ್ನಲೆ ಈಗ ದೇವಸೇನಾ ಕೈ ಹಿಡಿಯುವ ಹುಡುಗ ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

  ಇತ್ತೀಚಿಗಷ್ಟೆ ಅನುಷ್ಕ ಖ್ಯಾತ ಕ್ರಿಕೆಟರ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಇದರ ಬೆನ್ನಲ್ಲೆ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಹೌದು, ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಅನುಷ್ಕಾ ತೆಲುಗಿನ ಖ್ಯಾತ ನಿರ್ದೇಶಕರ ಮಗನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಹಾಗಾದರೆ ಆ ಲೆಜೆಂಡರಿ ನಿರ್ದೇಶಕ ಯಾರು? ಅನುಷ್ಕಾ ಮದುವೆ ಆಗುತ್ತಿರುವ ಹುಡುಗ ಯಾರು ಮುಂದೆ ಓದಿ..

  ಸ್ಟಾರ್ ಕ್ರಿಕೆಟರ್ ಜೊತೆ ಮದುವೆ ವದಂತಿ: ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ.!ಸ್ಟಾರ್ ಕ್ರಿಕೆಟರ್ ಜೊತೆ ಮದುವೆ ವದಂತಿ: ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ.!

  ಲೆಜೆಂಡರಿ ನಿರ್ದೇಶಕ ಯಾರು?

  ಲೆಜೆಂಡರಿ ನಿರ್ದೇಶಕ ಯಾರು?

  ಅನುಷ್ಕಾ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿರುವ ಆ ಹುಡುಗ ಮತ್ಯಾರು ಅಲ್ಲ ಲೆಜೆಂಡರಿ ನಿರ್ದೇಶಕರ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಎಂದು ಹೇಳಾಗುತ್ತಿದೆ. ಇಬ್ಬರು ಕೂಡ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ.

  ಪ್ರಕಾಶ್ ಗೆ ಎರಡನೆ ಮದುವೆ

  ಪ್ರಕಾಶ್ ಗೆ ಎರಡನೆ ಮದುವೆ

  ಪ್ರಕಾಶ್ 2014ರಲ್ಲಿ ಕನ್ನಿಕಾ ಧಿಲ್ಲಾನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ವಿಚ್ಛೇದನ ಪಡೆದಿದ್ದಾರೆ. ನಂತರ ಅನುಷ್ಕಾ ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಾಗುತ್ತಿದೆ. ಪ್ರಕಾಶ್ ಕೊವೆಲಮುಡಿ ಸಹ ನಿರ್ದೇಶಕರು.

  ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

  ವಿಚ್ಛೇದನದ ನಂತರ ಅನುಷ್ಕಾ ಜೊತೆ ಪ್ರೀತಿ

  ವಿಚ್ಛೇದನದ ನಂತರ ಅನುಷ್ಕಾ ಜೊತೆ ಪ್ರೀತಿ

  ಪ್ರಕಾಶ್ ಪತ್ನಿಯಿಂದ ದೂರ ಆಗಿ ವಿಚ್ಛೇದನದ ಪಡೆದ ನಂತರ ಅನುಷ್ಕಾ ಶೆಟ್ಟಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು, ಯಾರಿಗೂ ಗೊತ್ತಾಗದ ಹಾಗೆ ಪಾಕಾಡಿಕೊಂಡು ಬಂದಿದ್ದಾರಂತೆ. ಈ ಬಗ್ಗೆ ಅನುಷ್ಕಾ ಆಪ್ತ ಮೂಲಗಳನ್ನು ವಿಚಾರಿಸಿದರೆ ಯಾವುದೆ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ತೆಲುಗಿನ ಅನೇಕ ವೆಬ್ ಸೈಟ್ ಗಳು ವರದಿ ಮಾಡಿವೆ.

  ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್ಅನುಷ್ಕಾ ಮದುವೆ ಸುದ್ದಿ ಬೆನ್ನಲ್ಲೇ ಅಭಿಮಾನಿಗಳಿಂದ ಸರ್ಪ್ರೈಸ್

  ಅನುಷ್ಕಾ ಕಡೆಯಿಂದ ಪ್ರತಿಕ್ರಿಯೆ ನೀಡಿಲ್ಲ

  ಅನುಷ್ಕಾ ಕಡೆಯಿಂದ ಪ್ರತಿಕ್ರಿಯೆ ನೀಡಿಲ್ಲ

  ಸದ್ಯ ಅನುಷ್ಕಾ ಮತ್ತು ಪ್ರಕಾಶ್ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಕುಟುಂಬವಾಗಲಿ ಯಾವುದು ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕ್ರಿಕೆಟರ್ ಮದುವೆ ಆಗುತ್ತಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದ ಹಾಗೆ ಇದು ಕೂಡ ಗಾಳಿ ಸುದ್ದಿಯ ಅಥವಾ ನಿಜಕ್ಕು ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರಾ ಎನ್ನುವುದು ಕಾದುನೋಡಬೇಕು.

  English summary
  Another rumors about Anushka Shetty. She will getting married to son of famous director. This news viral in Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X