»   » ಸಂಸಾರ ನೌಕೆ ಹತ್ತಲಿರುವ ಮಲ್ಲು ಬೆಡಗಿ ಅಸಿನ್

ಸಂಸಾರ ನೌಕೆ ಹತ್ತಲಿರುವ ಮಲ್ಲು ಬೆಡಗಿ ಅಸಿನ್

Posted By:
Subscribe to Filmibeat Kannada

ದಕ್ಷಿಣ ಭಾರತದ ಹೆಸರಾಂತ ತಾರೆ ಅಸಿನ್ ತೊಟ್ಟುಂಕಲ್ ಗೆ ಕಂಕಣಬಲ ಕೂಡಿಬಂದಿದೆ. ಬಾಲಿವುಡ್ ಗೆ ಜಿಗಿದಿರುವ ಈ ತಾರೆ ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆಕೆ ಅಭಿನಯದ ಆರು ಬಾಲಿವುಡ್ ಚಿತ್ರಗಳಲ್ಲಿ ನಾಲ್ಕು ರು.100 ಕೋಟಿ ಕ್ಲಬ್ ಸೇರಿವೆ.

ಇಪ್ಪತ್ತೇಳರ ಹರೆಯದ ಈ ತಾರೆ ಈಗ ಮದುವೆ ಮೂಡ್ ನಲ್ಲಿದ್ದಾರೆ. ಮದುವೆಯಾಗುತ್ತಿರುವ ಕಾರಣ ಸದ್ಯಕ್ಕೆ ಬಂದ ಯಾವುದೇ ಆಫರ್ ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಬಾಳಿನ ಜೀವನ ಸಂಗಾತಿಯನ್ನೂ ಹುಡುಕಿಕೊಂಡಿದ್ದಾರೆ. ಆತ ಯುಎಸ್ ಮೂಲದವನು ಎನ್ನಲಾಗಿದ್ದು ಮದುವೆ ಬಳಿಕ ಜೋಡಿ ಹಕ್ಕಿಗಳು ಅಲ್ಲಿಗೆ ವಲಸೆ ಹೋಗಲು ನಿರ್ಧರಿಸಿವೆ.

ಬಹಳ ದಿನಗಳಿಂದ ಇವರಿಬ್ಬರು ಕದ್ದುಮುಚ್ಚಿ ಜೂಟಾಟ ಆಡುತ್ತಿದ್ದರು. ಆಗಾಗ ಅಮೆರಿಕಕ್ಕೂ ಹೋಗಿ ಬರುತ್ತಿದ್ದರು. ಆದರೆ ಎಷ್ಟು ದಿನ ಎಂದು ಕತ್ತಲಲ್ಲಿ ಜಾಮೂನು ತಿನ್ನಲಿಕ್ಕೆ ಸಾಧ್ಯ. ಕಡೆಗೂ ಇವರಿಬ್ಬರ ಐಸ್ ಪೈಸ್ ಆಟ ಗೊತ್ತಾಗಿದೆ.

ಈಗ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಬಾಯ್ ಫ್ರೆಂಡ್ ಮೇಲೆ ಅಸಿನ್ ಗೆ ಅಕ್ಕರೆಯಂತೆ. ಹಾಗಾಗಿ ಬಂದ ಅವಕಾಶಗಳನ್ನು ಕೈಯಾರೆ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಒಟ್ಟಿನಲ್ಲಿ ಮಲ್ಲು ಹುಡುಗಿ ಒಳ್ಳೆ ಮಲ್ಲನನ್ನೇ ಹಿಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇಷ್ಟಕ್ಕೂ ಮದುವೆ ಯಾವಾಗ?

ಈ ಬಾಲಿವುಡ್ ಸಿನಿಮಾ ತಾರೆಗಳ ಸುದ್ದಿ ಯಾವಾಗಲೂ ಪಕ್ಕ ಇರಲ್ಲ ಕಣ್ರಿ. ಎಲ್ಲರೂ ಹೇಳುವಂತೆ ಇದೇ ವರ್ಷ ಅಸಿನ್ ಸಂಸಾರ ನೌಕೆ ಹತ್ತಲಿದ್ದಾರೆ ಎನ್ನಲಾಗಿದೆ. ಧಾಂ ಧೂಂ ಎಂದು ಅದ್ದೂರಿಯಾಗಿ ಅಲ್ಲದೆ ಸಿಂಪಲ್ಲಾಗಿ ಮದುವೆಯಾಗುತ್ತಾರಂತೆ.

ಮದುವೆ ಬಳಿಕ ಸಿನಿಮಾಗೆ ಗುಡ್ ಬೈ?

ಮದುವೆ ಬಳಿಕ ಯಾರ್ ರೀ ಕೇಳ್ತಾರೆ. ಅವರು ಅಭಿನಯಿಸಿದರೆಷ್ಟು ಬಿಟ್ಟರೆಷ್ಟು. ಆದರೂ ಅಸಿನ್ ಮಾತ್ರ ಎಲ್ಲರೂ ಹೇಳುವ ಡೈಲಾಗನ್ನೇ ಹೇಳಿದ್ದಾರೆ. ಒಳ್ಳೆಯ ಸಬ್ಜೆಕ್ಟ್ ಸಿಕ್ರೆ ಬಿಡಲ್ಲ ಅಂದಿದ್ದಾರೆ.

ಮುಂದೆ ಯಾವ ರೀತಿ ಪಾತ್ರ ಮಾಡ್ತಾರಂತೆ

ಅಯ್ಯೋ ಅದೇ ರೀತಿ ಪಾತ್ರಗಳನ್ನು ಮಾಡಿ ಮಾಡಿ ಬೇಜಾರಾಗಿದೆ ಎನ್ನುವ ಅಸಿನ್, ಮುಂಬರುವ ದಿನಗಳಲ್ಲಿ ಹೀರೋ ಕೈಗೊಂಬೆಯಂತಹ ಪಾತ್ರಗಳನ್ನು ಮಾಡಲ್ಲವಂತೆ. ಅಭಿನಯಕ್ಕೆ ಸವಾಲೊಡ್ಡುವ ಪಾತ್ರಗಳಲ್ಲಿ ಮಾಡ್ತೀನಿ ಎಂದಿದ್ದಾರೆ.

ದಕ್ಷಿಣದ ಕಡೆಗೆ ಬರುತ್ತಾರೋ ಇಲ್ವೋ?

ಊರಿಗೆ ಬಂದವಳು ನೀರಿಗೆ ಬರದೆ ಇರ್ತಾಳಾ. ಅಸಿನ್ ಕೂಡ ಅಷ್ಟೇ ಉತ್ತರಕ್ಕೋದರೂ ದಕ್ಷಿಣಕ್ಕೆ ಬರಲೇಬೇಕು. ತಮಿಳು ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದಿದ್ದಾರೆ.

ಯಾರಾದರೂ ಸಂಪರ್ಕಿಸಿದ್ದಾರಂತಾ?

ಈಗಾಗಲೆ ತಮಿಳು ನಿರ್ಮಾಪಕರೊಬ್ಬರು ಕಾಲ್ ಶೀಟ್ ಹಿಡಿದು ಓಡಾಡುತ್ತಿದ್ದಾರಂತೆ. ಆದರೆ ಅಸಿನ್ ಮಾತ್ರ ಆತನ ಕೈಗೆ ಸಿಗದೆ ಎಸ್ಕೇಪ್ ಆಗುತ್ತಿದ್ದಾರೆ. ಅದ್ಯಾಕೋ ಏನೋ ಕಥೆ ಇಷ್ಟವಾಗಲಿಲ್ಲವೋ, ನಿರೀಕ್ಷಿಸಿದಷ್ಟು ಸಂಭಾವನೆ ಸಿಗಲಿಲ್ಲವೋ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
If reports are to be believed, Asin Thottumkal has found her true love. Her beau is said to be from the US and they are planning to settle down to marriage bliss soon. The actress is regularly visiting America to spend time with her secret lover.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada