Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ, ವಿಜಯ್‌ಗೆ ವಿಶ್ ಮಾಡದೇ ಇರಲು ಕಾರಣ ಅನನ್ಯಾ ಪಾಂಡೆ ಅಂತೆ!
ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಹೋದ ಬಳಿಕ ಹೆಚ್ಚಾಗಿ ಸುದ್ದು ಆಗಿದ್ದು ನಟ ವಿಜಯ್ ದೇವರಕೊಂಡ ಜೊತೆಗೆ. ಅವರು ಉತ್ತಮ ಸ್ನೇಹಿತರು ಎನ್ನುವ ಸುದ್ದಿ ಒಂದು ಕಡೆ ಆದರೆ. ಇವರ ನಡುವೆ ಲವ್ವಿ- ಡವ್ವಿ ಇದೆ ಎನ್ನುವ ಗಾಸಿಪ್ ಮತ್ತೊಂದು ಕಡೆ. ಈ ಗಾಸಿಪ್ ಹಲವು ದಿನಗಳು ಜೀವಂತಾಗಿತ್ತು, ಈಗಲೂ ಹಾಗೆ ಇದೆ. ಆದರೆ ವಿಜಯ್ ದೇವರಕೊಂಡ ಹುಟ್ಟು ಹಬ್ಬದಂದು ಈ ವಿಚಾರ ಮತ್ತೆ ಸುದ್ದಿ ಆಯಿತು.
ದೊಡ್ಡ ಬೆಳವಣಿಗೆ ಏನು ಆಗಿಲ್ಲ. ನಟಿ ರಶ್ಮಿ ಮಂದಣ್ಣ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬಕ್ಕೆ ಶುಭಕೋರಲಿಲ್ಲ. ಅಂದರೆ ಸಾಮಾಜಿಕ ಜಾಲತಾಣದ ಮೂಲಕ ನಾಲ್ಕು ಜನರ ಕಣ್ಣಿಗೆ ಬೀಳುವ ಹಾಗೆ ವಿಜಯ್ ದೇವರಕೊಂಡಗೆ ಹುಟ್ಟು ಹಬ್ಬಕ್ಕೆ ರಶ್ಮಿಕಾ ಶುಭಕೋರಿಲ್ಲ. ಇದುವೇ ಈಗ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನೆಚ್ಚಿನ
ಗೆಳೆಯನ
ಹುಟ್ಟುಹಬ್ಬಕ್ಕೆ
ವಿಶ್
ಮಾಡಿಲಿಲ್ಲ
ರಶ್ಮಿಕಾ:
ತಲೆ
ಕೆಡಿಸಿಕೊಂಡ
ಫ್ಯಾನ್ಸ್
ರಶ್ಮಿಕಾ ವಿಶ್ ಮಾಡದೆ ಇರುವ ಬೆನ್ನಲ್ಲೆ ಹಲವು ಬಗೆಯ ಗಾಸಿಪ್‌ಗಳಿಗೆ ಜೀವ ಬಂದು ಬಿಟ್ಟಿದೆ. ಸದಾ ಒಂದಲ್ಲಾ ವಿಚಾರಗಳಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ, ಒಬ್ಬರಿಗೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಕಾಳೆದು ಕೊಳ್ಳುತ್ತಿದ್ದ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎನ್ನು ಸುದ್ದಿಯ ಜೊತೆಗೆ ಈಗ ಇದಕ್ಕೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಕಾರಣ ಎನ್ನಲಾಗಿದೆ.

ರಶ್ಮಿಕಾ, ವಿಜಯ್ ಮುನಿಸಿಗೆ ಅನನ್ಯಾ ಕಾರಣ?
ಇದೇ ಮೇ 9ರಂದು ನಟ ವಿಜಯ್ ದೇವರಕೊಂಡ ಹುಟ್ಟು ಹಬ್ಬ ಇತ್ತು. ಸಿನಿಮಾರಂಗದ ಹಲವರು ವಿಜಯ್‌ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದರೆ ಎಲ್ಲರಿಗೂ ನಿರೀಕ್ಷೆ ಇದ್ದಿದ್ದು ಮಾತ್ರ, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡಗೆ ಏನೆಂದು ಶುಭಕೋರುತ್ತಾರೆ ಎನ್ನುವ ಬಗ್ಗೆ. ಆದರೆ ಕೊನೆಗೂ ರಶ್ಮಿಕಾ ಸೋಷಿಯಲ್ ಮೀಡಿಯಾದ ಮೂಲಕ ವಿಜಯ್‌ಗೆ ವಿಶ್ ಮಾಡಲಿಲ್ಲ. ಇದಕ್ಕೆ ಕಾರಣ ಅನನ್ಯಾ ಪಾಂಡೆ ಎನ್ನುವ ಹೊಸ ಸುದ್ದಿ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಹಬ್ಬಿದೆ.
ಮದುವೆ
ಮುಗಿಯುತ್ತಿದ್ದಂತೆ
ರಶ್ಮಿಕಾ
ಜೊತೆ
ಮನಾಲಿಯಲ್ಲಿ
ಪ್ರತ್ಯಕ್ಷನಾದ
ರಣ್ಬೀರ್

ನನ್ನ ಪ್ರೀತಿ ಸದಾ ನಿನಗಾಗಿ ಎಂದ ಅನನ್ಯಾ ಪಾಂಡೆ!
ಅನನ್ಯಾ ಪಾಂಡೆ ಮತ್ತು ವಿಜಯ್ ದೇವಕೊಂಡ ಇಬ್ಬರೂ ಸದ್ಯ ಒಂದೆ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೈಗರ್ ಸಿನಿಮಾದಲ್ಲಿ ಈ ಜೋಡಿ ಒಂದಾಗಿದೆ. ಹಾಗಾಗಿ ಅನನ್ಯಾ ಪಾಂಡೆ ವಿಜಯ್ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ್ದರು "ಹುಟ್ಟು ಹಬ್ಬದ ಶುಭಾಶಯಗಳು, ಈ ವರ್ಷವನ್ನು ಮುಗಿಸಿ ಬಿಡೋಣ, ನನ್ನ ಪ್ರೀತಿ ಸದಾ ನಿನಗಾಗಿ." ಎಂದು ಬರೆದು ವಿಜಯ್ ದೇವರಕೊಂಡ ಜೊತೆಗಿನ ಫೊಟೊ ಹಂಚಿಕೊಂಡಿದ್ದರು.

ಇಶಾನ್ ಜೊತೆಗೆ ಬ್ರೇಕಪ್ ಮಾಡಿಕೊಂಡಿರುವ ಅನನ್ಯಾ!
ಇನ್ನು ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಒಟ್ಟಿ ನಟಿಸುತ್ತಿರುವ ವಿಚಾರ ಗೊತ್ತೇ ಇದೆ. ಆದರೂ ಕೂಡ ವಿಜಯ್ ಜೊತೆಗೆ ಅನನ್ಯ ಪಾಂಡೆ ಹೆಸರು ಕೇಳಿ ಬರುತ್ತಿದೆ. ಇನ್ನು ಅನನ್ಯಾ ಪಾಂಡೆ ಅತ್ತ ಇಶಾನ್ ಕಟ್ಟರ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಹಾಗಾಗಿ ಇದು ವಿಜಯ್‌ಗಾಗಿ ಇರಬಹುದು ಎನ್ನುವ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.
Pooja
Hegde-Rashmika:
ಪೂಜಾ
ಹೆಗ್ಡೆಗೆ
ದೊಡ್ಡ
ತಲೆನೋವಾದ
ರಶ್ಮಿಕಾ
ಮಂದಣ್ಣ
!

ನಿಜವಾಗಿಯೋ ರಶ್ಮಿಕಾ, ವಿಜಯ್ ಮೇಲೆ ಮುನಿಸಿಕೊಂಡರಾ?
ಆದರೆ ಇದೆಲ್ಲವೂ ಗಾಳಿ ಸುದ್ದಿ ರೂಪದಲ್ಲಿಯೇ ಇದೆ. ನಿಜವಾಗಿಯೂ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನಿಗೆ ವಿಶ್ ಮಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ವೈಯಕ್ತಿಕವಾಗಿ ಶುಭಕೋರಿರಬಹುದು ಎಂಬುದನ್ನು ತಳ್ಳಿ ಹಾಕುವ ಹಾಗಿಲ್ಲ. ಈ ಬಗ್ಗೆ ಅವರೇ ಕ್ಲ್ಯಾರಿಟಿ ಕೊಡಬೇಕು ಅಥವಾ ಮತ್ತೇ ಇವರು ಒಟ್ಟಿಗೆ ಕಾಣಿಸಿಕೊಳ್ಳುವವರೆಗೂ ಈ ಸುದ್ದಿ ಹಾಗೆ ಇರುತ್ತೆ.