Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಷಬ್ ಶೆಟ್ಟಿ ಚಿತ್ರದಲ್ಲಿ ಶೈನ್ ಶೆಟ್ಟಿ: ಬಿಗ್ ಬಾಸ್ ವಿನ್ನರ್‌ಗೆ ಒಲಿದ ಪ್ರಮುಖ ಪಾತ್ರ?
ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಶೈನ್ ಶೆಟ್ಟಿ ವಿಶಿಷ್ಟ ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಲಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ 'ರುದ್ರಪ್ರಯಾಗ' ಚಿತ್ರದಲ್ಲಿ ಶೈನ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟ ಅನಂತ್ ನಾಗ್ ನಟಿಸುತ್ತಿದ್ದಾರೆ.
Recommended Video
ಮೀರಾ ಮಾಧವ, ಲಕ್ಷ್ಮೀ ಬಾರಮ್ಮ ಧಾರಾವಾಹಿಗಳಿಂದ ಖ್ಯಾತಿ ಗಳಿಸಿರುವ ಶೈನ್ ಶೆಟ್ಟಿ, ಬಿಗ್ ಬಾಸ್ ಬಳಿಕ ಮನೆಮಾತಾಗಿದ್ದಾರೆ. ಜಯಣ್ಣ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ಶೈನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ನಟನೆ ಮತ್ತು ನಿರ್ದೇಶನ ಎರಡರಲ್ಲಿಯೂ ತೊಡಗಿರುವ ರಿಷಬ್ ಶೆಟ್ಟಿ 'ಗರುಡ ಗಮನ ವೃಷಭ ವಾಹನ', 'ನಾಥೂರಾಮ್', 'ಬೆಲ್ ಬಾಟಂ 2', 'ಕೌಬಾಯ್ ಕೃಷ್ಣ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ...
'ಹರಿಕಥೆ
ಅಲ್ಲ
ಗಿರಿ
ಕಥೆ'
ಹೇಳಲು
ಬರ್ತಿದ್ದಾರೆ
ರಿಷಬ್:
ಏನಿದು
ಶೆಟ್ರಾ
ಹೊಸ
ಕಥೆ?

ಶೈನ್ ಶೆಟ್ಟಿ ಆಯ್ಕೆ
ಈ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಅನೇಕ ಕಲಾವಿದರ ಹೆಸರನ್ನು ತಡಕಾಡಿದ್ದಾರೆ. ಕೊನೆಗೆ ಈ ಪಾತ್ರಕ್ಕೆ ಶೈನ್ ಶೆಟ್ಟಿ ಸೂಕ್ತವಾದ ನಟ ಎಂದು ಅವರಿಗೆ ಅನಿಸಿದೆ. ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ಹೀಗಾಗಿ ಚಿತ್ರತಂಡದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಚಿತ್ರೀಕರಣ ಆರಂಭವಾದ ಬಳಿಕ ಚಿತ್ರದಲ್ಲಿ ಯಾರು ಇರಲಿದ್ದಾರೆ ಎಂಬುದು ಖಾತರಿಯಾಗಲಿದೆ.

ಬೆಳಗಾವಿಯಲ್ಲಿ ಚಿತ್ರೀಕರಣ
ರಿಷಬ್ ಶೆಟ್ಟಿ 'ರುದ್ರಪ್ರಯಾಗ'ದ ಕಥೆ ಬರೆದಿದ್ದಾರೆ. ಶ್ರೀಪಾದ ಜೋಶಿ ಮತ್ತು ತ್ರಿಲೋಕ ತ್ರಿವಿಕ್ರಮ ಸಂಭಾಷಣೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದೆ. ಎರಡು ತಿಂಗಳ ಹಿಂದೆಯೇ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ಸದ್ಯಕ್ಕೆ ಚಿತ್ರೀಕರಣ ಆರಂಭಿಸಲು ಸಾಧ್ಯವಿಲ್ಲ. ಶೇ 80ರಷ್ಟು ಚಿತ್ರೀಕರಣ ಬೆಳಗಾವಿಯಲ್ಲಿ ನಡೆಯಲಿದೆ. ಉಳಿದ ಭಾಗ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಅನಂತ್ ನಾಗ್ ಜತೆ ಎರಡನೇ ಸಿನಿಮಾ
ನಿರ್ದೇಶಕರಾಗಿ ಇದು ರಿಷಬ್ ಶೆಟ್ಟಿ ಅವರ ನಾಲ್ಕನೆಯ ಸಿನಿಮಾ. ಅನಂತ್ ನಾಗ್ ಅವರ ಜತೆ ಎರಡನೆಯ ಚಿತ್ರ. 'ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಕಥೆ ಬಗ್ಗೆ ನೀಡದ ಸುಳಿವು
'ರುದ್ರಪ್ರಯಾಗ' ಎಂದಾಕ್ಷಣ 'ರುದ್ರಪ್ರಯಾಗದ ನರಭಕ್ಷಕ' ಪುಸ್ತಕದ ನೆನಪಾಗುತ್ತದೆ. ಚಿತ್ರದ ಫಸ್ಟ್ ಲುಕ್ ಕೂಡ ಅದನ್ನು ನೆನಪಿಸುತ್ತದೆ. ದಾಂಡೇಲಿಯ ಕಾಡುಗಳಲ್ಲಿ ಚಿತ್ರೀಕರಣದ ಸ್ಥಳಕ್ಕೆ ಹುಡುಕಾಟ ನಡೆಸಲಾಗಿತ್ತು. ಚಿತ್ರದ ಕಥೆ ಯಾವ ರೀತಿಯದ್ದು ಎಂಬುದನ್ನು ರಿಷಬ್ ಇನ್ನೂ ಗುಟ್ಟಾಗಿ ಇರಿಸಿದ್ದಾರೆ.