»   » ಒಂದೇ ರೂಮಿನಲ್ಲಿ 3ದಿನ ಕಳೆದ ಬಾಲಿವುಡ್ ನಟ, ನಟಿ!

ಒಂದೇ ರೂಮಿನಲ್ಲಿ 3ದಿನ ಕಳೆದ ಬಾಲಿವುಡ್ ನಟ, ನಟಿ!

Posted By:
Subscribe to Filmibeat Kannada

ಇದೊಂದು ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸದಾದ, ವಿಭಿನ್ನವಾದ ಅಥವಾ ವಿಚಿತ್ರವಾದ ಪ್ರಯತ್ನ ಎಂದರೆ ತಪ್ಪಾಗಲಾರದು.

ಸೆಟ್ಟೇರಲಿರುವ ತನ್ನ ಮುಂದಿನ ಚಿತ್ರಕ್ಕೆ ನಾಯಕ ಮತ್ತು ನಾಯಕಿಯ ನಡುವೆ ಕೆಮೆಸ್ಟ್ರಿ ಚೆನ್ನಾಗಿರಲಿ ಎಂದು ನಿರ್ದೇಶಕ ಮಹೋದಯ ಇಬ್ಬರನ್ನೂ ಮೂರು ದಿನ ರೂಮಿನೊಳಗೆ ಕೂಡಿಹಾಕಿದ್ದರು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಬಾಲಿವುಡ್ ಚಿತ್ರರಂಗದ ಸ್ಪುರದ್ರೂಪಿ ನಟ, ನಟಿಯರಾರದ ಸುಶಾಂತ್ ಸಿಂಗ್ ರಜಪೂತ್ ಮತ್ತು ಪರಿಣೀತಿ ಚೋಪ್ರಾ ಇಬ್ಬರೂ ಆದಿತ್ಯ ಚೋಪ್ರಾ ನಿರ್ಮಾಣದ ಮುಂದಿನ ಚಿತ್ರದ ನಾಯಕ ಮತ್ತು ನಾಯಕಿಯರು.

ಈ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ನವಿರಾದ ಪ್ರೀತಿ, ಪ್ರೇಮ, ಪ್ರಣಯದ ಕಥೆಯನ್ನು ಹೊಂದಿರುವ ಈ ಚಿತ್ರದ ಹೆಸರು 'ಶುದ್ದ್ ದೇಸಿ ರೊಮ್ಯಾನ್ಸ್' ಎಂದು.

ಚಿತ್ರದಲ್ಲಿ ಡ್ಯೂಟ್ ಹಾಡೊಂದಿದೆಯಂತೆ, 'ತೆರೆ ಮೆರೆ ಬೀಚ್ ಮೈನ್ ಕ್ಯಾ ಹೇ' ಎಂದು ಆರಂಭವಾಗುವ ಈ ಹಾಡಿಗೆ ನಾಯಕ ಮತ್ತು ನಾಯಕಿಯ ನಡುವೆ ಆನ್ ಸ್ಕ್ರೀನ್ ಕೆಮೆಸ್ಟ್ರಿ ಚೆನ್ನಾಗಿರ ಬೇಕೆನ್ನುವುದು ನಿರ್ದೇಶಕರ ಚಿಂತನೆ.

ಮುಂದೆ ಓದಿ..

ಶುದ್ದ್ ದೇಸಿ ರೊಮ್ಯಾನ್ಸ್

ಚಿಂತನೆ ತಲೆಗೆ ಹೊಳೆದ ಕೂಡಲೇ ಭಯಂಕರ ಮಂಡೆ ಉಪಯೋಗಿಸಿದ ನಿರ್ದೇಶಕರು, ನಾಯಕ ಮತ್ತು ನಾಯಕಿ ಇಬ್ಬರನ್ನೂ ಮಾತ್ರ ಮೂರು ದಿನ ರೂಮಿನೊಳಗೆ ಹಗಲಿರುಳು ಕಳೆಯಲು ಕೂಡಿಹಾಕಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ.

ಆನ್ ಸ್ಕ್ರೀನ್ ಕೆಮೆಸ್ಟ್ರಿ

ಹೀರೋ ಮತ್ತು ಹಿರೋಯಿನ್ ನಡುವೆ ನಿರ್ದೇಶಕರು ಬಯಸಿದ 'ಕೆಮೆಸ್ಟ್ರಿ' ವರ್ಕೌಟ್ ಆಗಿದೆಯೋ ಇಲ್ಲವೋ ಚಿತ್ರ ತೆರೆಗೆ ಬಂದ ಮೇಲೆ ಪ್ರೇಕ್ಷಕರು ಅದಕ್ಕೆ ಮಾರ್ಕ್ಸ್ ನೀಡುತ್ತಾನೆ ಬಿಡಿ, ಆದರೆ ಕಲಾಜಗತ್ತಿನಲ್ಲಿ ಎಂಥಹಾ ಸಾಹಸಕ್ಕೆ ಕೈಹಾಕುತ್ತಾರೆ ನೋಡಿ.

ತಾರಾಗಣದಲ್ಲಿ

ಚಿತ್ರದ ಪ್ರಮುಖ ತಾರಾಗಣದಲ್ಲಿ ಸುಶಾಂತ್ ಸಿಂಗ್ ರಜಪೂತ್, ಪರಿಣೀತಿ ಚೋಪ್ರಾ, ವಾಣಿ ಕಪೂರ್ ಮತ್ತು ರಿಷಿ ಕಪೂರ್ ಇದ್ದಾರೆ.

ಆದಿತ್ಯ ಚೋಪ್ರಾ

ಬಾಲಿವುಡ್ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಜೈದೀಪ್ ಸಹಾನಿ ಅವರ ಕಥೆಯಿದೆ. ಸಚಿನ್ - ಜಿಗರ್ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರದ ಬಗ್ಗೆ

ವಿದೇಶದಲ್ಲಿ ರಾಂಡಮ್ ದೇಸಿ ರೊಮ್ಯಾನ್ಸ್ ಎನ್ನುವ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಸೆಪ್ಟಂಬರ್ ಆರರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

English summary
Bollywood star Sushant Singh Rajput and Parineeti Chopra spend time together almost 3 days in a room to build up the required chemistry for the Aditya Chopra's upcoming movie 'Shudd Desi Romance'.
Please Wait while comments are loading...