For Quick Alerts
  ALLOW NOTIFICATIONS  
  For Daily Alerts

  ಪುನೀತ್ ಸಿನಿಮಾದಲ್ಲಿ ಬಾಲಿವುಡ್ ನಟ ಬೊಮ್ಮನ್ ಇರಾನಿ!

  |
  ಪುನೀತ್ ಮೂಲಕ ಕನ್ನಡಕ್ಕೆ ಕಾಲಿಟ್ಟ ಬಾಲಿವುಡ್ ನಟ..! | FILMIBEAT KANNADA

  'ನಟಸಾರ್ವಭೌಮ' ಸಕ್ಸಸ್ ನ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಯುವರತ್ನ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಪ್ಪು ಅಭಿನಯದ 'ಯುವರತ್ನ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  'ಯುವರತ್ನ' ಸಿನಿಮಾ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದೊಡ್ಡ ದೊಡ್ಡ ಕಲಾವಿದರ ಹೆಸರುಗಳು ಕೇಳಿ ಬರುತ್ತಿದೆ. ಈಗಾಗಲೇ ಒಬ್ಬೊಬ್ಬರಾಗಿ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಪರಭಾಷೆಯಿಂದ ಖ್ಯಾತ ಕಲಾವಿದರನ್ನು ಕರೆತರುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಚಿತ್ರತಂಡ.

  'ನಟ ಸಾರ್ವಭೌಮ' ಸಕ್ಸಸ್ ಟೂರ್ : ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

  ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಯುವರತ್ನ' ಸಿನಿಮಾಗೆ ಮತ್ತೋರ್ವ ಖ್ಯಾತ ಬಾಲಿವುಡ್ ನಟನ ಹೆಸರು ಕೇಳಿ ಬರುತ್ತಿದೆ. ಹೌದು, ಬಾಲಿವುಡ್ ನ ಖ್ಯಾತ ನಟ ಬೊಮ್ಮನ್ ಇರಾನಿ ಅಭಿನಯಿಸುತ್ತಿದ್ದಾರೆ ಎನ್ನುವ ಮಾತು ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಂದೆ ಓದಿ...

  ಕನ್ನಡ ಸಿನಿಮಾದಲ್ಲಿ ಬೊಮ್ಮನ್ ಇರಾನಿ

  ಕನ್ನಡ ಸಿನಿಮಾದಲ್ಲಿ ಬೊಮ್ಮನ್ ಇರಾನಿ

  'ಯುವರತ್ನ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ಗೆ ಜೊತೆಯಾಗಿ ಬಾಲಿವುಡ್ ನಟ ಬೊಮ್ಮನ್ ಇರಾನಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ. ಮೂಲಗಳ ಪ್ರಕಾರ, ಈಗಾಗಲೇ ಬೊಮ್ಮನ್ ಇರಾನಿ ಜೊತೆ ಮಾತುಕತೆ ಕೂಡ ನಡೆಸಿದೆ ಚಿತ್ರತಂಡ. ತಮ್ಮ ಪಾತ್ರದ ಬಗ್ಗೆ ಕೇಳಿ ಇರಾನಿ ಕೂಡ 'ಯುವರತ್ನ' ಚಿತ್ರದಲ್ಲಿ ಅಭಿನಯಿಸುವ ಆಸಕ್ತಿ ತೋರಿದ್ದಾರಂತೆ. ಆದರೆ, ಡೇಟ್ ಕ್ಲ್ಯಾಶ್ ಆಗುವ ಸಾದ್ಯತೆ ಇಂದ ಬೊಮ್ಮನ್ ಇರಾನಿ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನುತ್ತಿವೆ ಮೂಲಗಳು.

  ಬೊಮ್ಮನ್ ಇರಾನಿಯ ಪಾತ್ರ ಯಾವುದು?

  ಬೊಮ್ಮನ್ ಇರಾನಿಯ ಪಾತ್ರ ಯಾವುದು?

  ಅಂದಹಾಗೆ, 'ಯುವರತ್ನ' ಕಾಲೇಜ್ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಅಪ್ಪು ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಯುವರತ್ನ ಚಿತ್ರದಲ್ಲಿ ಅಭಿನಯಿಸಲು ಬೊಮ್ಮನ್ ಇರಾನಿ ಗ್ರೀನ್ ಸಿಗ್ನಲ್ ನೀಡಿದ್ರೆ, ಚಿತ್ರದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಅಥವಾ ಪ್ರಾಧ್ಯಾಪಕರಾಗಿಯೂ ಕಾಣಿಸಿಕೊಳ್ಳುವ ಸಾದ್ಯತೆ ಇದೆ. ಈ ಹಿಂದೆ ಬೊಮ್ಮನ್ 'ತ್ರೀ ಇಡಿಯೇಟ್ಸ್' ಸಿನಿಮಾದ ಪ್ರಿನ್ಸಿಪಾಲ್ ಪಾತ್ರಕ್ಕೆ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.

  ಯುವರತ್ನ ಚಿತ್ರಕ್ಕೆ ನಾಯಕಿ ಫೈನಲ್: ಅಪ್ಪು ಅಭಿಮಾನಿಗಳಿಗೆ ನಿರಾಸೆ ಆಯ್ತಾ?

  ಯಾವಾಗ 'ಯುವರತ್ನ' ಚಿತ್ರತಂಡ ಸೇರಲಿದ್ದಾರೆ ಬೊಮ್ಮನ್?

  ಯಾವಾಗ 'ಯುವರತ್ನ' ಚಿತ್ರತಂಡ ಸೇರಲಿದ್ದಾರೆ ಬೊಮ್ಮನ್?

  ಈಗಾಗಲೇ ಚಿತ್ರದಲ್ಲಿ ಅಭಿನಯಿಸಲು ಬೊಮ್ಮನ್ ಇರಾನಿ ಆಸಕ್ತಿ ತೋರಿದ್ದಾರೆ. ಡೇಟ್ ಹೊಂದಾಣಿಕೆ ಆದರೆ ಬೊಮ್ಮನ್ ಮುಂದಿನ ಸ್ಕೆಡ್ಯೂಲ್ಡ್ ನಲ್ಲಿ ಅಂದರೆ ಮೈಸೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಶೇಷ ಅಂದರೆ, ಇದು ಬೊಮ್ಮನ್ ಇರಾನಿ ನಟನೆಯ ಮೊದಲ ಕನ್ನಡ ಸಿನಿಮಾ.

  'ಯುವರತ್ನ' ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡು

  'ಯುವರತ್ನ' ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡು

  ಈಗಾಗಲೇ, ಮುಂಬೈ ಬೆಡಗಿ ಸಯ್ಯೇಶಾ ಚಿತ್ರತಂಡ ಸೇರಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಯ್ಯೇಶಾ ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ವಿಲನ್ ಆಗಿ ಡಾಲಿ ಖ್ಯಾತಿಯ ಧನಂಜಯ್ ಮತ್ತು ಅರು ಗೌಡ ಸೇರ್ಪಡೆಯಾಗಿದ್ದಾರೆ. ಈಗ ಬೊಮ್ಮನ್ ಇರಾನಿಯ ಹೆಸರು ಕೇಳಿ ಬರುತ್ತಿದೆ.

  'ಯುವರತ್ನ' ಗ್ಯಾಂಗ್ ನಲ್ಲಿ ಮತ್ತೊಬ್ಬ ನಟ, ಅಪ್ಪುಗೆ ಅರು ವಿಲನ್?

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ

  ಅಂದಹಾಗೆ, 'ಯುವರತ್ನ' ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. 'ರಾಜಕುಮಾರ' ಸಿನಿಮಾ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಈ ಚಿತ್ರ ಬರುತ್ತಿದ್ದು, ಹೊಂಬಾಳೆ ಫಿಲ್ಮ್ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ.

  English summary
  Bollywood actor Boman Irani to make kannada debut with Puneeth Rajkumar's 'Yuarathnaa'. This movie is directing by Santhosh Ananddram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X