»   » ಕನ್ನಡದಲ್ಲಿ ನಟಿಸಲು ನೋ ಎಂದ ಕೃಷ್ಣ ಸುಂದರಿ ಬಿಪ್ಸ್

ಕನ್ನಡದಲ್ಲಿ ನಟಿಸಲು ನೋ ಎಂದ ಕೃಷ್ಣ ಸುಂದರಿ ಬಿಪ್ಸ್

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಅಷ್ಟೇನೂ ಬೇಡಿಕೆ ಇಲ್ಲದೇ ಹೆಚ್ಚುಕಮ್ಮಿ ಓತ್ಲಾ ಹೊಡ್ಕೊಂಡು ಡೇಟಿಂಗ್ ಮಾಡ್ಕೊಂಡಿರುವ 35 ವರ್ಷದ ಕೃಷ್ಣ ಸುಂದರಿ ಬಿಪ್ಸ್ ಯಾನೇ ಬಿಪಾಶಾ ಬಸು ಕನ್ನಡದ ಲಕ್ಷಾಂತರ ರೂಪಾಯಿ ಆಫರಿಗೆ 'ನೋ' ಎಂದಿದ್ದಾಳೆ ಎನ್ನುವುದು ಸದ್ಯ ಹರಿದಾಡುತ್ತಿರುವ ಸುದ್ದಿ.

ಪರಮೇಶ್ ನಿರ್ದೇಶಿಸುತ್ತಿರುವ 'ಮಾಮು ಟೀ ಅಂಗಡಿ'ಯಲ್ಲಿ ಬಿಪಾಶಾ ನಟಿಸುತ್ತಾಳೆ ಎನ್ನುವುದು ಈ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕಗಳು ಸೇರಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಸ್ವಚ್ಛಂದವಾಗಿ ಹರಿದಾಡುತ್ತಿತ್ತು. (ಮಾಮೂ ಟೀ ಅಂಗಡಿಯಲ್ಲಿ ಬಿಪಾಶಾ)

ಆದರೆ, ಈ ಸುದ್ದಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬರೋಬ್ಬರಿ 28 ಲಕ್ಷ ರೂಪಾಯಿ ಸಂಭಾವನೆ ನೀಡಲು ಮಾಮೂ ಚಿತ್ರತಂಡ ಮುಂದಾಗಿದ್ದರೂ ಬಿಪಾಶಾ ಕನ್ನಡದ ಚಿತ್ರ ನಿರ್ಮಾಪಕರಿಗೆ 'ತುಮ್ಹಾರಾ ಆಫರ್ ನಹೀ ಚಾಯಿಯೆ' ಎಂದು ಮುಖ ತಿರುಗಿಸಿ ಕೊಂಡು ಹೋಗಿದ್ದಾಳಂತೆ ಸುದ್ದಿಯಾಗಿದೆ.

'ಮಾಮು ಟೀ ಅಂಗಡಿ' ನಾಲ್ಕು ನಾಯಕರು ಹಾಗೂ ಮೂರು ನಾಯಕಿಯರ ನಡುವೆ ಸುತ್ತುವ ಕಥೆ. ಟೀ ಅಂಗಡಿ ಬಳಿ ಗೆಳೆಯರು ಸೇರುವುದು, ಮಾಮು ಜೊತೆ ಹರಟೆ, ಜಗಳ, ತಮಾಷೆ ಅಲ್ಲದೆ ಮನಮಿಡಿಯುವ ದೃಶ್ಯಗಳಿವೆ. ಚಿತ್ರದಲ್ಲಿ ಒಂದು ಹಾಡಿಗೆ ಕನ್ನಡ ಸಿನಿಮಾದ ಜನಪ್ರಿಯ ನಾಯಕರುಗಳಾದ ಶ್ರೀನಗರ ಕಿಟ್ಟಿ, ಅಜಯ್ ರಾವ್, ನೆನಪಿರಲಿ ಪ್ರೇಮ್ ಹಾಗೂ ಯೋಗೀಶ್ ಅವರು ಧ್ವನಿಗೂಡಿಸಲಿದ್ದಾರೆ.

ಬಿಪಾಶ ಬಸು ಡೇಟಿಂಗ್ ಬಗ್ಗೆ ಸಾರಿ ಡೇಟಿಂಗ್ಸ್ ಬಗ್ಗೆ, ಸ್ಲೈಡಿನಲ್ಲಿ..

ಏನಿರಬಹುದು ಕಾರಣ?

ಚಿತ್ರದ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಲು ಬಿಪಾಶಾ ನಿರಾಕರಿಸಿದ್ದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಬಿಪಾಶಾ ಕನ್ನಡ ಚಿತ್ರದಲ್ಲಿ ನಟಿಸಲು ನಿರಾಕರಿಸಿದಳೋ ಅಥವಾ ಮಾಧ್ಯಮದ ಮುಂದೆ ಮಾತನಾಡಲು ನಿರಾಕರಿಸಿದ್ದಕ್ಕೆ ಚಿತ್ರತಂಡ ಇವಳನ್ನು ಹೊರಕ್ಕೆ ಕಳುಹಿಸಿತೋ ಮುಂದಿನ ದಿನದಲ್ಲಿ ಸ್ಪಷ್ಟವಾಗಲಿದೆ.

ನಮ್ಮವರಿಗೆ ಇದೆಲ್ಲಾ ಬೇಕಿತ್ತಾ?

ಅದೆಲ್ಲಾ ಏನೇ ಇರಲಿ, ನಮ್ಮವರಿಗೆ ಇದೆಲ್ಲಾ ಬೇಕಾ? ಬಿಪಾಶಾ ಬಂದು ಕುಣಿದಿಲ್ಲಾಂದ್ರ ಕನ್ನಡಿಗರು ಚಿತ್ರಮಂದಿರಕ್ಕೆ ಬರೋಲ್ವಾ? 28 ಲಕ್ಷ ಏನು ಒಸಿ ದುಡ್ಡಾ ಸ್ವಾಮಿ?

ಫಸ್ಟ್ ಡೇಟಿಂಗ್ ವಿದ್ whom?

2002ರಲ್ಲಿ ರಾಜ್ ಚಿತ್ರದ ಸಹನಟ ಡಿನೋ ಮೋರಿಯಾ ಜತೆ ಡೇಟಿಂಗ್ಸ್ ನಡೆಸುತ್ತಿದ್ದಳು. ಆದರೆ ಇಬರಿಬ್ಬರ ಒಡನಾಟ ಹೆಚ್ಚಿನ ದಿನ ಚಾಲ್ತಿಯಲ್ಲಿರಲಿಲ್ಲ.

ಸೆಕೆಂಡ್ ಡೇಟಿಂಗ್

ಮರಿಯೋ ಜೊತೆ ಸಂಬಂಧ ಮುರಿದ ನಂತರ ಅಂದರೆ 2003ರಲ್ಲಿ ಜಾನ್ ಅಬ್ರಹಾಂ ಜೊತೆ ಬಿಪಾಶಾ ಡೇಟಿಂಗ್ ಆರಂಭಿಸಿದಳು. ಮದುವೆಯಾಗುವ ತನಕ ಬಂದಿದ್ದ ಇವರಿಬ್ಬರ ಸಂಬಂಧ ನಂತರದ ದಿನಗಳಲ್ಲಿ ಮುರಿದು ಬಿತ್ತು.

ರಾಣಾ ದಗ್ಗುಬಾಟಿ

ಜಾನ್ ಅಬ್ರಹಾಂ ನಂತರ ಧಮ್ ಮಾರೋ ಧಮ್ ಚಿತ್ರದ ಸಹನಟ ರಾಣಾ ದಗ್ಗುಬಾಟಿ ಜೊತೆ ಬಿಪಾಶಾ ಹೆಸರು ಕೇಳಿ ಬರುತ್ತಿತ್ತು.

ಅದಾದ ನಂತರ ಈಗ

ಸದ್ಯ ಬಿಪಾಶಾ, ಬಾಲಿವುಡ್ ನಟ ಹರ್ಮನ್ ಬವೇಜಾ ಜೊತೆ ಡೇಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾಳೆ. 19.02.2014ರಂದು ಹರ್ಮನ್ ಜೊತೆಗಿನ ಡೇಟಿಂಗ್ಸಿಗೆ ಬಿಪಾಶಾ ಅಧಿಕೃತ ಮುದ್ರೆ ಒತ್ತಿದ್ದಳು.

English summary
Bollywood actress Bipasha Basu rejected Sandalwood offer. She is refused to be a part of movie 'Mamu Tea Angadi'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada