»   » ಯಶ್ ಮೇಲಿನ ದಾಳಿಗೆ 'ಬಾಸ್' ನಂಬರ್ ಕಾರಣವಾಯ್ತಾ?

ಯಶ್ ಮೇಲಿನ ದಾಳಿಗೆ 'ಬಾಸ್' ನಂಬರ್ ಕಾರಣವಾಯ್ತಾ?

By: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ನಡೆದಿದ್ದನ್ನ ಯಶ್ ಯಾರಲ್ಲಿಯೂ ಹೇಳಿಕೊಂಡಿಲ್ಲ. ಆದ್ರೆ ಇದ್ರ ಹಿಂದೆ ಇರೋದು 'ಬಾಸ್' ಅನ್ನೋದು ಮಾತ್ರ ಗಾಂಧಿನಗರದ ಗಲ್ಲಿ ಗಮಾರರೂ ಅರ್ಥ ಮಾಡಿಕೊಳ್ಳೋ ಸುದ್ದಿ.

ಇಷ್ಟಕ್ಕೂ ಯಶ್ ರ ಫೇವರೀಟ್ ಕಪ್ಪು ಕಾರಿನ ನಂಬರ್ 8055, ಇದನ್ನ ಸ್ಟೈಲಿಶ್ ಆಗಿ ಇಂಗ್ಲೀಷ್ ನಲ್ಲಿ 'ಬಾಸ್' ಅಂತ ಬರೆಸೋದು ಸಾಮಾನ್ಯ. ಇನ್ನು ಈ ನಂಬರಿಗಾಗಿ ಅದೆಷ್ಟೋ ವಾಹನ ಸವಾರರು ಲಕ್ಷಾಂತರ ರುಪಾಯಿ ಸುರಿದು ಆರ್ ಟಿಓ ಕಡೆಯಿಂದ ನಂಬರ್ ಪಡೀತಾರೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

'Boss' number causes Attack on Rocking Star?

ಹಾಗೇ ಯಶ್ ಕೂಡ ಬಾಸ್ (8055) ನಂಬರನ್ನೇ ಪಡ್ಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗೆ ಒಬ್ಬರೇ ಬಾಸ್ ಇರ್ಬೇಕು ಅನ್ನೋ ಸ್ಟಾರ್ ನಟರೊಬ್ಬರ ಅಭಿಮಾನಿಗಳು ನಮ್ ಬಾಸ್ ಮಾತ್ರ ಬಾಸು, ಇವರ್ಯಾವ ಬಾಸ್ ಅಂತ ಗಾಡಿ ಮೇಲೆ ಅಟ್ಯಾಕ್ ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

ಆದ್ರೆ ಈ ಅಟ್ಯಾಕ್ ಮಾಡಿಸಿದ್ದೇ ಬಾಸ್ ಅಂತಿದ್ದಾರೆ ಮತ್ತೆ ಕೆಲವರು. ಆದ್ರೆ ಯಶ್ ಮಾತ್ರ ಯಾವುದಕ್ಕೂ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಈ ವಿಷಯ ಇನ್ನಷ್ಟು ದೊಡ್ಡದಾಗುವುದು ಅವರಿಗೆ ಇಷ್ಟವಿಲ್ಲ. ಆದರೆ ಅಭಿಮಾನಿಗಳ ಎಡವಟ್ಟಿಗೆ ಸ್ಟಾರ್ ನಟರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗುವಂತಿದೆ.

English summary
The Sandalwood grapevine is buzzing with Rocking Star Yash's car was attacked some time ago in Sheshadripuram, Bengaluru. Yash car had a '8005' number, which had also written in style as 'Boss'. Sourecss says that, which is the real cause for the attack on the car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada