»   » ಬ್ರೇಕಿಂಗ್ ನ್ಯೂಸ್; ಕಟ್ಟಾ ಪಾತ್ರದಲ್ಲಿ ರಂಗಾಯಣ ರಘು

ಬ್ರೇಕಿಂಗ್ ನ್ಯೂಸ್; ಕಟ್ಟಾ ಪಾತ್ರದಲ್ಲಿ ರಂಗಾಯಣ ರಘು

Posted By:
Subscribe to Filmibeat Kannada

ರಂಗಾಯಣ ರಘು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಗಿದ್ದಾರಾ? ಈ ಪ್ರಶ್ನೆಗೆ ಹೌದೆನ್ನುತ್ತಿವೆ ಬ್ರೇಕಿಂಗ್ ನ್ಯೂಸ್ ಸುದ್ದಿಮೂಲಗಳು. ಬ್ರೇಕಿಂಗ್ ನ್ಯೂಸ್ ಚಿತ್ರದಲ್ಲಿ ರಂಗಾಯಣ ರಘು ಕಟ್ಟಾರನ್ನು ಹೋಲುವ ಪಾತ್ರ ಮಾಡಿದ್ದಾರಂತೆ. ಅವರ ಪೋಷಾಕು, ವೇಷ-ಭೂಷಣ ಎಲ್ಲವೂ ಥೇಟ್ ಕಟ್ಟಾರಂತೆಯೇ ಇದೆ. ರಂಗಾಯಣ ರಘು ಈ ಮೊದಲು 'ಧಮ್' ಹಾಗೂ 'ಕಳ್ಳರ ಸಂತೆ'ಯಲ್ಲೂ ಕೂಡ ರಾಜಕಾರಣಿ ಪಾತ್ರ ಮಾಡಿದ್ದಾರೆ. ಆದರೆ ಅದು ಯಾರನ್ನೂ ಹೋಲುತ್ತಿರಲಿಲ್ಲ.

"ನನ್ನ ಚಿತ್ರದಲ್ಲೊಬ್ಬ ಭ್ರಷ್ಟ ರಾಜಕಾರಣಿಯಿದ್ದಾರೆ. ಆ ಪಾತ್ರವನ್ನು ರಂಗಾಯಣ ರಘು ಪೋಷಿಸಿದ್ದಾರೆ. ಅದು ಕೇವಲ ಒಬ್ಬ ರಾಜಕಾರಣಿ ಪಾತ್ರ. ಅದಕ್ಕೆ ಕಟ್ಟಾ ಹೋಲಿಕೆಯಿದ್ದರೆ ಅದು ಆಕಸ್ಮಿಕ" ಎಂದು ಆ ಚಿತ್ರದ ನಿರ್ದೇಶಕ ನಾಗತಿಹಳ್ಳಿ ಹೇಳಿದ್ದಾರೆ. ಆದರೆ ಚಿತ್ರತಂಡದ ಹಲವರ ಅಭಿಪ್ರಾಯದ ಪ್ರಕಾರ ಅದು ಕಟ್ಟಾರನ್ನು ಹೋಲುವ ಪಾತ್ರ ಎಂಬುದು ಸುಳ್ಳಲ್ಲ.
ಅಂದಹಾಗೆ, ಈ ಚಿತ್ರದ ನಾಯಕ ಅಜಯ್ ರಾವ್ ಹಾಗೂ ನಾಯಕಿ ರಾಧಿಕಾ ಪಂಡಿತ್.

ಅಷ್ಟೇ ಅಲ್ಲ, ಬ್ರೇಕಿಂಗ್ ನ್ಯೂಸ್ ನಲ್ಲಿ ಅನಂತ್ ನಾಗ್ ಪಾತ್ರ ಯೋಕಾಯುಕ್ತರದು. ಅದೂ ಕೂಡ ಮಾಜಿ ಲೋಕಾಯುಕ್ತ ಸಂತೋಷ ಹೆಗಡೆಯವರನ್ನು ಹೋಲುತ್ತದೆಯಂತೆ. ನಾಗತಿಹಳ್ಳಿ ಹೇಳಿಕೊಂಡಂತೆ ಸಂಪೂರ್ಣ ವಿಡಂಬನಾತ್ಮಕ ಚಿತ್ರವಾದ ಬ್ರೇಕಿಂಗ್ ನ್ಯೂಸ್ ನಲ್ಲಿ ವರ್ತಮಾನದ ಘಟನೆಗಳಾದ ಭೂಕಬಳಿಕೆ, ಜೈಲುವಾಸ ಮುಂತಾದವುಗಳ ಸುತ್ತಲೇ ಕಥೆ ಸುತ್ತುತ್ತದೆಯಂತೆ. ಒಟ್ಟಿನಲ್ಲಿ ನಿಜವಾಗಿಯೂ ಚಿತ್ರದಲ್ಲೇನಿದೆ ಎಂದು ತಿಳಿಯಲು ಮೇ 18, 2012ರವೆರೆಗೆ ಕಾಯಲೇಬೇಕು. (ಒನ್ ಇಂಡಿಯಾ ಕನ್ನಡ)

English summary
There is a cmparision role of Katta Subramanya Naidu in upcoming movie Break News, which to release on May 18, 2012. According to the Nagathihalli Chandrashekhar, the director of the movie Breaking News, that comparision is by an accident and not intentional. Wait up to release.
Please Wait while comments are loading...