Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?
ನಾಗಶೇಖರ್ ನಿರ್ದೇಶನದ 'ಅಮರ್' ಚಿತ್ರದ ಮೂಲಕ ಅಂಬರೀಷ್ - ಸುಮಲತಾ ದಂಪತಿ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಚಿತ್ರದ ಹಾಡುಗಳು ಹಿಟ್ ಆದರೂ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಅದರ ಬಳಿಕ ಅಭಿಷೇಕ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಯಾವುದೂ ಅಧಿಕೃತವಾಗಿರಲಿಲ್ಲ.
Recommended Video
ಇದೀಗ ಚಂದನವನದಲ್ಲಿ ಮತ್ತೊಂದು ಗುಲ್ಲು ಕೇಳಿಬಂದಿದೆ. ಅಭಿಷೇಕ್ ಅಂಬರೀಷ್, ನಿರ್ದೇಶಕ ದುನಿಯಾ ಸೂರಿ ಜತೆಗೂಡಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. 2019ರಲ್ಲಿ 'ಅಮರ್' ಚಿತ್ರದಿಂದ ಪಾದಾರ್ಪಣೆ ಮಾಡಿದ ಅಭಿಷೇಕ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಹಾಗೆಯೇ ಉಳಿದಿದೆ. ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ವಿವಿಧ ನಿರ್ದೇಶಕರ ಜತೆ ಹೆಸರು ಕೇಳಿಬಂದಿದ್ದರೂ ಅಭಿಷೇಕ್ ಇದಾವುದನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಲಾಕ್ ಡೌನ್ ಅವಧಿ ತೆರವುಗೊಂಡ ನಂತರ ಅವರು ಹೊಸ ಚಿತ್ರಕ್ಕೆ ಕೈ ಹಾಕಲಿದ್ದಾರೆ ಎಂದು ಹೇಳಲಾಗಿದೆ. ಮುಂದೆ ಓದಿ...
ಡಿ
ಬಾಸ್
ದರ್ಶನ್
ಸಿನಿಮಾದಲ್ಲಿ
ಅಭಿಷೇಕ್
ಅಂಬರೀಶ್
ವಿಲನ್?

ಅಭಿಷೇಕ್ ಮನೆಯಲ್ಲಿ ಚರ್ಚೆ
ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಷ್ ಸಿನಿಮಾ ಮಾಡುವ ಕುರಿತು ಮಾತುಕತೆಗಳು ನಡೆದಿವೆ. ಹಾಗೆಯೇ ಕಥೆಯೊಂದರ ಕುರಿತು ಸಹ ಚರ್ಚಿಸಲಾಗಿದೆ. ಇತ್ತೀಚೆಗೆ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿದ ಬಳಿಕ ಅಭಿಷೇಕ್ ಮನೆಯಲ್ಲಿ ಇಬ್ಬರೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಬ್ರೇಕ್‌ಗೆ ಕಾದಿರುವ ಅಭಿಷೇಕ್
ಅಪ್ಪ-ಅಮ್ಮ ಇಬ್ಬರೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದವರು. ಹಾಗೆಯೇ ರಾಜಕಾರಣದ ಹಾದಿಯನ್ನೂ ತುಳಿದಿದ್ದರು. ಅಭಿಷೇಕ್ ಕೂಡ ರಾಜಕೀಯದಲ್ಲಿ ಭವಿಷ್ಯ ಹುಡುಕುವ ಸಾಧ್ಯತೆ ಇದೆ. ಅದಕ್ಕೆ ಮುನ್ನ ಚಿತ್ರರಂಗದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದು ಅವರ ಬಯಕೆ. ಹೀಗಾಗಿ ಅವರಿಗೆ ಬ್ರೇಕ್ ಸಿಗಲು ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ಅಗತ್ಯವಿದೆ.
ಅಂಬಿ
ಪುತ್ರ
ಅಭಿಷೇಕ್
ಹಿಂದಿಕ್ಕಿದ
ಕೆ
ಮಂಜು
ಪುತ್ರ
ಶ್ರೇಯಸ್

ಸೂರಿಯ ಎರಡು ಸಿನಿಮಾಗಳು
'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಕೈಗೆತ್ತಿಕೊಳ್ಳಲಿರುವ ಚಿತ್ರಕ್ಕೆ ಅಭಿಷೇಕ್ ನಾಯಕರಾಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೂರಿ ಬಹಳ ಹಿಂದೆಯೇ ಪ್ರಕಟಿಸಿರುವ 'ಕಾಗೆ ಬಂಗಾರ' ಮತ್ತು 'ಸೈಲೆಂಟ್ ಸುನೀಲ' ಚಿತ್ರಗಳು ಇನ್ನೂ ಬಾಕಿ ಉಳಿದಿವೆ.

ಕಥೆ ಹೇಗಿರಲಿದೆ?
ಸದ್ಯಕ್ಕೆ ಅಭಿಷೇಕ್ ಮತ್ತು ಸೂರಿ ಜೋಡಿಯ ಸಿನಿಮಾ ಹೇಗಿರಬಹುದು ಎಂಬುದೇ ಕುತೂಹಲ ಕೆರಳಿಸಿದೆ. ರೌಡಿಸಂ, ಆಕ್ಷನ್‌ನ ಕಚ್ಚಾ ಕಥೆಗಳನ್ನು ಹೇಳುವುದರಲ್ಲಿ ನಿಸ್ಸೀಮರಾದ ಸೂರಿ, ಅಭಿಷೇಕ್‌ಗೆ ಕೂಡ ಅದೇ ರೀತಿಯ ಕಥೆ ಹೊಸೆಯಲಿದ್ದಾರೆಯೇ ಅಥವಾ ವಿಭಿನ್ನ ಪ್ರಯತ್ನಕ್ಕೆ ಕೈಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

ಮುನಿರತ್ನ ಚಿತ್ರ ಘೋಷಣೆ
'ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಸಂದರ್ಭದಲ್ಲಿ ದರ್ಶನ್ ಮತ್ತು ಅಭಿಷೇಕ್ ಅವರನ್ನು ಹಾಕಿಕೊಂಡು ಮುಂದಿನ ಚಿತ್ರ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಘೋಷಿಸಿದ್ದರು. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುರಿತಾದ ಚಿತ್ರ ಇದು ಎಂದು ಹೇಳಿದ್ದರು.