For Quick Alerts
  ALLOW NOTIFICATIONS  
  For Daily Alerts

  Big Buzz: ಸುದೀಪ್ ಮತ್ತು ಪವನ್ ಕಲ್ಯಾಣ್ ಕುರಿತಾದ ಸುದ್ದಿ ನಿಜನಾ?

  |

  ಅಕ್ಟೋಬರ್ ಆರಂಭದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಿದ್ದರು. ಜನಾ ಸೇನಾ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದರು. ಆ ಭೇಟಿ ಬಳಿಕ ಈಗ ಇವರಿಬ್ಬರ ಬಗ್ಗೆ ಹೊಸ ಸುದ್ದಿಯೊಂದನ್ನು ಕೇಳಿ ಬರುತ್ತಿದೆ.

  ಎರಡು ವರ್ಷದ ಬಳಿಕ ಟಾಲಿವುಡ್‌ಗೆ ಕಂಬ್ಯಾಕ್ ಮಾಡಿರುವ ಪವನ್ ಕಲ್ಯಾಣ್ ಜೊತೆ ಸುದೀಪ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಲಯಾಳಂ ಚಿತ್ರದ ರೀಮೇಕ್‌ನಲ್ಲಿ ಪಿಕೆ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್‌ಗೆ ಪ್ರಮುಖ ಪಾತ್ರಕ್ಕಾಗಿ ಆಫರ್ ಮಾಡಲಾಗಿದೆಯಂತೆ. ಮುಂದೆ ಓದಿ...

  ಜನಸೇನಾ ನಾಯಕ ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್

  ಅಯ್ಯಪ್ಪನುಮ್ ಕೋಶಿಯುಮ್ ರೀಮೇಕ್‌ನಲ್ಲಿ ಸುದೀಪ್!

  ಅಯ್ಯಪ್ಪನುಮ್ ಕೋಶಿಯುಮ್ ರೀಮೇಕ್‌ನಲ್ಲಿ ಸುದೀಪ್!

  ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದ 'ಅಯ್ಯಪ್ಪನುಮ್ ಕೋಶಿಯುಮ್' ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದು, ಪವನ್ ಕಲ್ಯಾಣ್ ಜೊತೆ ಸುದೀಪ್ ನಟಿಸಬಹುದು ಎಂದು ಹೇಳಲಾಗುತ್ತಿದೆ. ಬಿಜು ಮೆನನ್ ಪತ್ರದಲ್ಲಿ ಪವನ್ ಕಾಣಿಸಿಕೊಳ್ಳಬಹುದು, ಪೃಥ್ವಿರಾಜ್ ಪಾತ್ರಕ್ಕೆ ಸುದೀಪ್ ಅವರನ್ನು ಪರಿಗಣಿಸಲಾಗಿದೆಯಂತೆ.

  ರಾಣಾ ದಗ್ಗುಬಾಟಿಗೆ ಅವಕಾಶ!

  ರಾಣಾ ದಗ್ಗುಬಾಟಿಗೆ ಅವಕಾಶ!

  ಪವನ್ ಕಲ್ಯಾಣ್ ಜೊತೆ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಕುರಿತು ಮಾತುಕತೆ ಸಹ ಆಗಿದೆಯಂತೆ. ಒಂದು ವೇಳೆ ರಾಣಾ ಈ ಸಿನಿಮಾ ಮಾಡಲ್ಲ ಅಂದ್ರೆ ಸುದೀಪ್ ಅವರಿಂದ ಈ ಪಾತ್ರ ಮಾಡಿಸುವ ಬಗ್ಗೆ ಚಿಂತಿಸಲಾಗಿದೆಯಂತೆ.

  ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಚಿರಂಜೀವಿ ಸಿನಿಮಾ ಹೆಸರು!

  ಪಿಕೆ ಜೊತೆ ಸಾಯಿ ಪಲ್ಲವಿ?

  ಪಿಕೆ ಜೊತೆ ಸಾಯಿ ಪಲ್ಲವಿ?

  ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಈ ಪಾತ್ರವನ್ನು ತೆಲುಗಿನಲ್ಲಿ ಸಾಯಿ ಪಲ್ಲವಿ ಮಾಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸಹ ಇನ್ನು ಅಧಿಕೃತವಾಗಿಲ್ಲ.

  ಮುನಿರತ್ನ ಈ ದೊಡ್ಡ ಗುಣಕ್ಕೆ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ | Filmibeat Kannada
  ಫ್ಯಾಂಟಮ್ ಚಿತ್ರದಲ್ಲಿ ಸುದೀಪ್

  ಫ್ಯಾಂಟಮ್ ಚಿತ್ರದಲ್ಲಿ ಸುದೀಪ್

  ಕೋಟಿಗೊಬ್ಬ-3 ಸಿನಿಮಾ ಮುಗಿಸಿರುವ ಸುದೀಪ್ 'ಫ್ಯಾಂಟಮ್' ಸಿನಿಮಾ ಮಾಡುತ್ತಿದ್ದಾರೆ. ಇದಾದ ಬಳಿಕ ಬಿಗ್ ಬಾಸ್ ಆರಂಭಿಸುವ ಲೆಕ್ಕಾಚಾರ ಇದೆ. 'ಫ್ಯಾಂಟಮ್' ಸಿನಿಮಾ ಶೂಟಿಂಗ್ ನಡುವೆಯೇ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದರು.

  English summary
  Buzz: Kichcha Sudeep may lock horns with Pawan Kalyan in the remake of Ayyappanum Koshiyum.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X