Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕುರುಕ್ಷೇತ್ರ' ನಂತರ ಮತ್ತೊಂದು ಪೌರಾಣಿಕ ಸಿನಿಮಾದಲ್ಲಿ ದರ್ಶನ್.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಈ ಸಿನಿಮಾ ತೆರೆಮೇಲೆ ಬರಲಿದೆ. ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಈಗ ಲೇಟೆಸ್ಟ್ ವಿಷ್ಯ ಏನಪ್ಪಾ ಅಂದ್ರೆ, ಕುರುಕ್ಷೇತ್ರ ಮುಗಿಸಿರುವ ದರ್ಶನ್ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ನಟಿಸಲು ತಯಾರಿ ನಡೆಸಿಕೊಳ್ಳುತ್ತಿದ್ದಾರಂತೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ.
ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ
''ಪೌರಾಣಿಕ ಚಿತ್ರಗಳನ್ನ ಮಾಡಲು ಮುಂದೆ ಬರುವ ನಿರ್ಮಾಪಕರಿಗೆ ಮೊದಲು ಕಾಲ್ ಶೀಟ್'' ನೀಡುವುದಾಗಿ ಬಹಿರಂಗವಾಗಿ ಹೇಳಿದ್ದ ದರ್ಶನ್ ಅವರ ಮಾತನ್ನ ಕೇಳಿ, ಕನ್ನಡದ ಕಥೆಗಾರರು, ನಿರ್ಮಾಪಕರುಗಳು ದರ್ಶನ್ ಬಳಿ ಪೌರಾಣಿಕ ಕಥೆಗಳನ್ನ ತೆಗೆದುಕೊಂಡು ಬರ್ತಿದ್ದಾರಂತೆ. ಅಷ್ಟಕ್ಕೂ, ದಾಸನ ಬಳಿ ಬಂದಿರುವ ಆ ಪೌರಾಣಿಕ ಕಥೆ ಯಾವುದು.? ಏನಿದು ಹೊಸ ಸುದ್ದಿ ಎಂದು ತಿಳಿಯಲು ಮುಂದೆ ಓದಿ.....

ಪೌರಾಣಿಕ ಚಿತ್ರಗಳಿಗೆ ಹೆಚ್ಚಿದ ಬೇಡಿಕೆ
ದರ್ಶನ್ ಅದ್ಯಾವಾಗ ಪೌರಾಣಿಕ ಚಿತ್ರಗಳ ಬಗ್ಗೆ ಹೆಚ್ಚು ಒಲವು ತೋರಿದರೋ ಆಗಲೇ ನಿರ್ಮಾಪಕರು ಹಾಗೂ ಕಥೆಗಾರರು ಪೌರಾಣಿಕ ಕಥೆಗಳ ಮೇಲೆ ಕಣ್ಣಿಟ್ಟರು ಅಂದ್ರೆ ತಪ್ಪಾಗಲಾರದು. ಅದರಂತೆ ದರ್ಶನ್ ಗಾಗಿ ಈಗ ರಾವಣನ ಕಥೆ ದಾಸನ ಮನೆ ಬಾಗಿಲಿಗೆ ಬಂದಿದೆಯಂತೆ.
'ಕುರುಕ್ಷೇತ್ರ' ಸಿನಿಮಾ ಬಗ್ಗೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ

'ರಾವಣ' ಆಗ್ತಾರಾ ಡಿ-ಬಾಸ್
'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ಮಿಂಚಿರುವ ದಾಸನಿಗೆ ಈಗ ರಾವಣ ಆಗಲು ಅವಕಾಶ ಬಂದಿದೆಯಂತೆ. ಕನ್ನಡದ ಹಿರಿಯ ನಟರೊಬ್ಬರು ದರ್ಶನ್ ಗೆ ರಾವಣನ ಕಥೆ ಓದಲು ಸ್ಕ್ರಿಪ್ಟ್ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ದರ್ಶನ್ ಗೆ ಸೂಕ್ತ ರಾವಣ ಪಾತ್ರ
'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಗೆಟಪ್ ನೋಡಿದ ಮೇಲೆ ರಾವಣನ ಪಾತ್ರಕ್ಕೂ ಚಾಲೆಂಜಿಂಗ್ ಸ್ಟಾರ್ ಸೂಕ್ತವಾಗ್ತಾರೆ ಎನ್ನೋದ್ರಲ್ಲಿ ಎರಡು ಮಾತಿಲ್ಲ. ಮಹಾಭಾರತದಲ್ಲಿ ದುರ್ಯೋಧನನ ಪಾತ್ರ ಹೇಗೋ, ರಾಮಾಯಣದಲ್ಲಿ ರಾವಣನ ಪಾತ್ರ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಹಾಗಾಗಿ, ರಾವಣನ ಕಥೆಯನ್ನ ಸಿನಿಮಾ ಮಾಡಲು ಸ್ಯಾಂಡಲ್ ವುಡ್ ಸಜ್ಜಾಗುತ್ತಿದೆಯಾ.? ಎಂಬ ಪ್ರಶ್ನೆ ಮೂಡುತ್ತಿದೆ.
'ಡಿ-ಬಾಸ್' ಅಭಿಮಾನಕ್ಕೆ ಸಿಕ್ತು ಮತ್ತೊಂದು ಹೊಸ ಬಿರುದು

ನಿಜವಾದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ
ಸದ್ಯ, ದರ್ಶನ್ ಬಳಿ ರಾವಣ ಸ್ಕ್ರಿಪ್ಟ್ ನೀಡಲಾಗಿದೆ ಎಂಬ ಸುದ್ದಿಯಷ್ಟೇ ಚರ್ಚೆಯಾಗುತ್ತಿದೆ. ಒಂದು ವೇಳೆ ಇದು ನಿಜವಾದ್ರೆ, ತೆರೆಮೇಲೆ ರಾವಣ ಬರೋದು ಪಕ್ಕಾ. ನಂತರ ಡಿ ಬಾಸ್ ಅಭಿಮಾನಿಗಳು ಸೇರಿದಂತೆ ಕನ್ನಡದ ಕಲಾಭಿಮಾನಿಗಳು ಹಬ್ಬವನ್ನ ಆಚರಿಸುವುದಂತು ಪಕ್ಕಾ. ಸದ್ಯಕ್ಕೆ ಇದನ್ನ ನಂಬುವಂತಿಲ್ಲ. ಆದ್ರೆ, ಇದು ನಿಜವಾಗಲಿ ಎನ್ನುವುದಷ್ಟೇ ಅಭಿಮಾನಿಗಳ ಆಶಯ.