»   »  'ಮುಂಗಾರು ಮಳೆ'ಯ ದಿನವೇ ಬರಲಿದೆಯಾ 'ಚಮಕ್' ಸಿನಿಮಾ.?

'ಮುಂಗಾರು ಮಳೆ'ಯ ದಿನವೇ ಬರಲಿದೆಯಾ 'ಚಮಕ್' ಸಿನಿಮಾ.?

Posted By:
Subscribe to Filmibeat Kannada

ಈ ವರ್ಷ ಬಿಡುಗಡೆಯಾಗಲು ಸಿದ್ಧವಿರುವ ಸಿನಿಮಾಗಳಲ್ಲಿ 'ಚಮಕ್' ಸಿನಿಮಾ ಕೂಡ ಒಂದು. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಕೆಲಸಗಳು ಸದ್ಯ ನಡೆಯುತ್ತಿದೆ.

ವಿಷ್ಣು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಚಮಕ್' ಗಣೇಶ್.!

ವಿಶೇಷ ಅಂದರೆ ಈಗ ಗಣೇಶ್ ಅವರ 'ಚಮಕ್' ಸಿನಿಮಾ 'ಮುಂಗಾರು ಮಳೆ' ಸಿನಿಮಾ ಬಿಡುಗಡೆಯಾದ ದಿನದಂದೇ ರಿಲೀಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಚಿತ್ರವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದ್ದು, ಡಿಸೆಂಬರ್ 29ಕ್ಕೆ ಬಿಡುಗಡೆ ಆಗಬಹುದು.

'Chamak' movie Likely to release on december 29th

ಮತ್ತೊಂದು ವಿಶೇಷ ಅಂದರೆ 11 ವರ್ಷಗಳ ನಂತರ ಡಿಸೆಂಬರ್ 29ಕ್ಕೆ ಶುಕ್ರವಾರ ಬಂದಿದೆ. ಹೀಗಾಗಿ, ಈ ಎಲ್ಲ ಕಾರಣಗಳಿಂದ 'ಮುಂಗಾರು ಮಳೆ' ದಿನವೇ 'ಚಮಕ್' ಚಿತ್ರ ಬರುವ ಚಾನ್ಸ್ ಜಾಸ್ತಿ ಇದೆ. ಇನ್ನೂ 'ಚಮಕ್' ಚಿತ್ರವನ್ನು ಸುನಿ ನಿರ್ದೇಶನ ಮಾಡಿದ್ದು, ಗಣೇಶ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

English summary
'Chamak' movie is likely to release on December 29th. 'ಚಮಕ್' ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada