»   » ತೆಲುಗಿನಲ್ಲಿ ಬರ್ತಿದೆ 'ಚಮಕ್' : ಗಣೇಶ್ ಪಾತ್ರದಲ್ಲಿ ಯಾರು ನಟಿಸ್ತಾರೆ ?

ತೆಲುಗಿನಲ್ಲಿ ಬರ್ತಿದೆ 'ಚಮಕ್' : ಗಣೇಶ್ ಪಾತ್ರದಲ್ಲಿ ಯಾರು ನಟಿಸ್ತಾರೆ ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಸಿನಿಮಾ ನೋಡುಗರಿಗೆ ಕಿಕ್ ನೀಡುತ್ತಿದೆ. ಎಲ್ಲ ಕಡೆಯಿಂದ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿತ್ತು. ಆದರೆ ಕನ್ನಡದ ನಂತರ ಈಗ ಈ ಸಿನಿಮಾ ಟಾಲಿವುಡ್ ನಲ್ಲಿ ಕೂಡ ಬರುತ್ತಿರುವುದು ವಿಶೇಷವಾಗಿದೆ.

'ಚಮಕ್' ಸಿನಿಮಾ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. 'ಚಮಕ್' ಚಿತ್ರವನ್ನು ಕನ್ನಡದಲ್ಲಿ ಮಾಡಿ ಹಣ ಗಳಿಸಿದ ನಿರ್ಮಾಪಕ ಚಂದ್ರಶೇಖರ್ ಅವರೇ ಈ ಸಿನಿಮಾವನ್ನು ತೆಲುಗಿನಲ್ಲಿ ಮಾಡುವ ತಯಾರಿ ನಡೆಸಿದ್ದಾರೆ. ಇನ್ನು ತೆಲುಗು ಅವತರಣಿಕೆಯ 'ಚಮಕ್' ಸಿನಿಮಾದಲ್ಲಿ ನಾಯಕನಾಗಿ ನಟ ನಾನಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಗಣೇಶ್ ನಟಿಸಿದ್ದ ಪಾತ್ರಕ್ಕೆ ಅಲ್ಲಿ ನಾನಿ ಸೂಕ್ತ ಎನ್ನುವುದು ನಿರ್ಮಾಪಕರ ಅಭಿಪ್ರಾಯ.

ಕೆನಡಾ -ಯು.ಎಸ್ ಸುತ್ತಲು ಹೊರಟರು ರಶ್ಮಿಕಾ ಮತ್ತು ಗಣೇಶ್

'Chamak' movie telugu remake

ಹಾಗಾದರೆ, ನಾಯಕಿ ಪಾತ್ರದಲ್ಲಿ ತೆಲುಗಿನ ಯಾವ ನಟಿ ನಟಿಸುತ್ತಾರೆ ಎನ್ನುವ ಕುತೂಹಲ ಹುಟ್ಟುವುದು ಸಾಮಾನ್ಯವಾಗಿರುತ್ತದೆ. ಆದರೆ ಟಾಲಿವುಡ್ ನಲ್ಲಿ ಬರುತ್ತಿರುವ 'ಚಮಕ್' ಸಿನಿಮಾಗೆ ಸಹ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರಂತೆ. ಚಿತ್ರದ ತಮ್ಮ ಖುಷಿ ಪಾತ್ರವನ್ನು ಅಲ್ಲಿಯೂ ಅವರೇ ನಿರ್ವಹಿಸಲಿದ್ದಾರಂತೆ.

ಅಂದಹಾಗೆ, 'ಚಮಕ್' ಚಿತ್ರಕ್ಕೆ ಸುನಿ ನಿರ್ದೇಶಕ ಮಾಡಿದ್ದರು. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗಿತ್ತು. ಹೊಸದಾಗಿ ಮದುವೆ ಆದ ಗಂಡ ಹೆಂಡತಿಯ ಕಥೆಯನ್ನು ಸಖತ್ ಮಜವಾಗಿ ಸಿನಿಮಾದಲ್ಲಿ ಹೇಳಲಾಗಿತ್ತು.

English summary
Kannada producer Chandrashekar planning to do remake 'Chamak' movie to telugu. 'Chamak' movie starring Golden star Ganesh and Rashmika Mandanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X