»   » ಚಂದನ್ ಶೆಟ್ಟಿಗೆ ಸಿಕ್ಕಿದ್ಯಂತೆ ಬಂಪರ್ ಆಫರ್.! ಅದು ದರ್ಶನ್ ಕಡೆಯಿಂದ..

ಚಂದನ್ ಶೆಟ್ಟಿಗೆ ಸಿಕ್ಕಿದ್ಯಂತೆ ಬಂಪರ್ ಆಫರ್.! ಅದು ದರ್ಶನ್ ಕಡೆಯಿಂದ..

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಚಂದನ್ ಶೆಟ್ಟಿಗೆ ಸಿಕ್ತು ಬಂಪರ್ ಆಫರ್ | Filmibeat Kannada

'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಯಾರಿಗೆ ಉಪಯೋಗ ಆಗಿದ್ಯೋ, ಇಲ್ವೋ.. ಗೊತ್ತಿಲ್ಲ. ಆದ್ರೆ, ಚಂದನ್ ಶೆಟ್ಟಿಗೆ ಮಾತ್ರ ಅಭಿಮಾನಿ ಬಳಗ ದೊಡ್ಡದಾಗಿ ಬೆಳೆದಿದೆ. ಪ್ರತಿಭಾವಂತ ಚಂದನ್ ಶೆಟ್ಟಿ ಹಾಡುಗಳಿಗೆ ಕನ್ನಡಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.

'ಬಿಗ್ ಬಾಸ್ ಕನ್ನಡ-5' ವಿನ್ನರ್ ಆದ್ಮೇಲೆ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಜಡ್ಜ್ ಆಗಿರುವ ಚಂದನ್ ಶೆಟ್ಟಿಗೆ ಸದ್ಯ ದೊಡ್ಡ ಆಫರ್ ಒಂದು ಹುಡುಕಿಕೊಂಡು ಬಂದಿದ್ಯಂತೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಅನ್ನೋದು ಇಂಟ್ರೆಸ್ಟಿಂಗ್ ನ್ಯೂಸ್.

ಏನದು ಆಫರ್ ಅಂದ್ರಾ.? ವಿವರವಾಗಿ ಹೇಳ್ತೀವಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ದರ್ಶನ್ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್.?

'ಸೀಜರ್' ಹಾಗೂ 'ಗಾಂಚಲಿ' ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡ Rapper ಚಂದನ್ ಶೆಟ್ಟಿಗೆ ಇದೀಗ ಸುವರ್ಣಾವಕಾಶ ಸಿಕ್ಕಿದ್ಯಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಮ್ಯೂಸಿಕ್ ಮಾಡುವ ಚಾನ್ಸ್ ಚಂದನ್ ಶೆಟ್ಟಿ ಪಾಲಾಗಿದ್ಯಂತೆ. ಹಾಗಂತ ಗಾಂಧಿನಗರದ ತುಂಬೆಲ್ಲಾ ಗುಲ್ಲೋ ಗುಲ್ಲು.

ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !

ಗಾಂಧಿನಗರ ಗುಲ್ಲಿನ ಪ್ರಕಾರ...

'ದಾಸ' ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಶೂಟಿಂಗ್ ಕಂಪ್ಲೀಟ್ ಆಗಿದೆ. ತಮ್ಮ 51 ಸಿನಿಮಾದ ಚಿತ್ರೀಕರಣಕ್ಕೆ ದರ್ಶನ್ ಸದ್ಯದಲ್ಲೇ ಚಾಲನೆ ಕೊಡ್ತಾರೆ. ಅದು ಮುಗಿದ ಬಳಿಕ ಶುರುವಾಗುವ ದರ್ಶನ್ ಅವರ 52ನೇ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡ್ತಾರಂತೆ ಎಂಬ ಅಂತೆ-ಕಂತೆ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.

'ಬಿಗ್ ಬಾಸ್' ವಿಜೇತ ಚಂದನ್ ಶೆಟ್ಟಿ ಅವರ ಮುಂದಿನ ಹಾಡು ಯಾವುದು?

ಎಲ್ಲೆಲ್ಲೂ ಇದೇ ಗಾಸಿಪ್

ದರ್ಶನ್ ಅವರ 52ನೇ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಾರಂತೆ. ಇದೇ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಡೈರೆಕ್ಟರ್ ಎನ್ನಲಾಗಿದೆ.

ಯಾರೂ ಕನ್ಫರ್ಮ್ ಮಾಡಿಲ್ಲ

ಸದ್ಯಕ್ಕೆ ಇದೆಲ್ಲವೂ ಗಾಳಿಸುದ್ದಿ ಆಗಿದ್ದು, ಯಾವುದೂ ಕನ್ಫರ್ಮ್ ಆಗಿಲ್ಲ. 50ನೇ ಸಿನಿಮಾ ರಿಲೀಸ್ ಆಗುವವರೆಗೂ ಮುಂದಿನ ಸಿನಿಮಾದ ಬಗ್ಗೆ ಮಾತನಾಡಲ್ಲ ಅಂತ ದರ್ಶನ್ ಹೇಳಿದ್ದಾರೆ. ಇನ್ನೂ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮದಲ್ಲಿ ಬಿಜಿಯಾಗಿರುವ ಚಂದನ್ ಶೆಟ್ಟಿ ಕೂಡ ಈ ಗಾಸಿಪ್ ಬಗ್ಗೆ ಕಾಮೆಂಟ್ ಮಾಡಿಲ್ಲ. ಒಂಧ್ವೇಳೆ ಇದೇ ಗಾಸಿಪ್ ನಿಜ ಆದ್ರೆ, ದರ್ಶನ್ ಅಭಿಮಾನಿಗಳು ಹಾಗೂ ಚಂದನ್ ಶೆಟ್ಟಿ ಫ್ಯಾನ್ಸ್ ಗೆ ಇದಕ್ಕಿಂತ ಖುಷಿ ಬೇಕಾ.?

English summary
According to the latest Grapevine, Kannada Rapper, Bigg Boss Kannada 5 Winner Chandan Shetty to compose music for Challenging Star Darshan's 52nd Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada