For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಮೈಲ್ ಕ್ವೀನ್ ಸಮಂತಾ ಹೊಸ ಕಿರಿಕ್

  By ಜೇಮ್ಸ್ ಮಾರ್ಟಿನ್
  |

  ಶ್ರೀದೇವಿ, ಮಾಧುರಿ ದೀಕ್ಷಿತ್, ಕಾಜೋಲ್, ಐಶ್ವರ್ಯಾ ರೈ, ಕರೀನಾ ಕಪೂರ್, ಆಸಿನ್, ಕತ್ರೀನಾ ಕೈಫ್, ಶಾರುಖ್ ಖಾನ್ ಸಾಲಿಗೆ ದಕ್ಷಿಣ ಭಾರತದ ಸೂಪರ್ ಸ್ಮೈಲ್ ವುಳ್ಳ ನಟಿ ಸಮಂತಾ ಸೇರ್ಪಡೆಗೊಂಡ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಲಕ್ಸ್ ಸಾಬೂನಿಗೆ ರಾಯಭಾರಿಯಾದ ಸಮಂತಾಗೆ ಒಳ್ಳೆ ಆಫರ್ ಗಳು ಬರುತ್ತಿರುವ ಜತೆಗೆ ವಿವಾದಗಳು ಬೆನ್ನಿಗಂಟಿಕೊಳ್ಳುತ್ತಿದೆ.

  ಪವನ್ ಕಲ್ಯಾಣ್ ಜತೆ ನಟಿಸಿರುವ ಅತ್ತರಿಂಟಿಕಿ ದಾರೆಡಿ ಹಾಗೂ ಜ್ಯೂನಿಯರ್ ಎನ್ಟಿಆರ್ ಜತೆ ರಾಮಯ್ಯ ವಸ್ತಾವಯ್ಯ ಚಿತ್ರದ ನಂತರ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಜತೆ ಆಟೋ ನಗರ್ ಸೂರ್ಯ ಚಿತ್ರದಲ್ಲಿ ಸಮಂತಾ ನಟಿಸುತ್ತಿದ್ದಾಳೆ. ಈ ನಡುವೆ ಸಮಂತಾ ಮಾಡಿರುವ ಟ್ವೀಟ್ ಗಳು ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿವೆ.

  ನಾಗಾರ್ಜುನ -ಅಮಲಾ ಪುತ್ರ ಹಾಲುಗೆನ್ನೆಯ ಯುವಕ ಅಖಿಲ್ ಅವರ ಚೊಚ್ಚಲ ಚಿತ್ರದ ಬಗ್ಗೆ ಟ್ವೀಟ್ ಮಾಡಿ ನಾಗ್ ಕುಟುಂಬದ ಕೋಪಕ್ಕೆ ಸಮಂತಾ ಸಿಕ್ಕಿಬಿದ್ದಿದ್ದಾಳೆ. ಜತೆಗೆ ನೀಳ ಕಾಯದ ಚೆಲುವೆ ಅನುಷ್ಕಾ ಶೆಟ್ಟಿ ಬಗ್ಗೆ ಏನೋ ಕಾಮೆಂಟ್ ಮಾಡಿದ್ದಾಳೆ ಎಂಬ ಸುದ್ದಿ ಪ್ರಕಟವಾಗಿ ಸಮಂತಾ ನಿದ್ದೆಗೆಡಿಸಿದೆ.

  ಸಿದ್ದಾರ್ಥ್ ಜತೆ ಸಖ್ಯವೊಂದೇ ಸಾಕು ಎನ್ನುತ್ತಿದ್ದ ಸಮಂತಾಳನ್ನು ವಿವಾದಗಳ ರಾಣಿ ಮಾಡಲು ಕೆಲ ಮಾಧ್ಯಮಗಳು ಹೊರಟಿವೆ ಎಂದು ಸುದ್ದಿಯೂ ಇದೆ. ಜ್ಯೂ. ಎನ್ಟಿಆರ್ ಜತೆ ಮತ್ತೊಂದು ಚಿತ್ರ ಸೇರಿದಂತೆ ಕಾಲಿವುಡ್ ನಲ್ಲಿ ಅಜಿತ್ ಹಾಗೂ ಸೂರ್ಯ ಜತೆ ಸಮಂತಾ ಕಾಣಿಸಿಕೊಳ್ಳುತ್ತಿದ್ದು, ಸದ್ಯಕ್ಕಂತೂ ಗಾಸಿಪ್ ಗಲ್ಲಿಯಲ್ಲಿ ಸುತ್ತಲು ಆಕೆಗೆ ಪುರಸೊತ್ತಿಲ್ಲ. ಆದರೂ, ಸಮಂತಾ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ್ದಾಳೆ.. ಸಮಂತಾ ಹೇಳಿದ್ದೇನು? ಮುಂದೆ ಓದಿ...

  ಅಖಿಲ್ ಚಿತ್ರದ ಬಗ್ಗೆ ಟ್ವೀಟ್

  ಅಖಿಲ್ ಚಿತ್ರದ ಬಗ್ಗೆ ಟ್ವೀಟ್

  ಅಕ್ಕಿನೇನಿ ಕುಟುಂಬದ ಮೂರು ಪೀಳಿಗೆ ನಟಿಸಿರುವ ಮನಮ್ ಚಿತ್ರದಲ್ಲಿ ಅಜ್ಜ ನಾಗೇಶ್ವರ್ ರಾವ್ ಮಗ ನಾಗಾರ್ಜುನ, ಮೊಮ್ಮಗ ನಾಗ ಚೈತನ್ಯ ಜತೆಗೆ ಅಖಿಲ್ ಕೂಡಾ ನಟಿಸಿದ್ದಾರೆ ಎಂದು ಚಿತ್ರದ ಪ್ರಮುಖ ಪಾತ್ರಧಾರಿಯಾಗಿರುವ ಸಮಂತಾ ಟ್ವೀಟ್ ಮಾಡಿದ್ದಳು.

  ನಾಗಾರ್ಜುನಗೆ ಶ್ರೀಯಾ ಸರನ್ ಜೋಡಿಯಾದರೆ, ನಾಗಾ ಚೈತನ್ಯ ಜೋಡಿಯಾಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಅಕ್ಕಿನೇನಿ ಕುಟುಂಬದ ಅನ್ನಪೂರ್ಣ ಸ್ಟುಡಿಯೋ ನಿರ್ಮಾಣದ ಈ ಚಿತ್ರದಲ್ಲಿ ಅಖಿಲ್ ನಟಿಸಿರುವುದನ್ನು ಗುಟ್ಟಾಗಿ ಇಡಲಾಗಿತ್ತು. ಆದರೆ, ಸೀಕ್ರೆಟ್ ಹೊರ ಹಾಕಿದ ಸಮಂತಾ ಈಗ ಅಕ್ಕಿನೇನಿ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

  ಅನುಷ್ಕಾ ಹೊಗಳಿದ ಪ್ರಭು

  ಅನುಷ್ಕಾ ಹೊಗಳಿದ ಪ್ರಭು

  ಶ್ರುತಿ ಹಾಸನ್ ಚಿತ್ರಗಳು ಸೋಲುತ್ತಿರುವುದು ಹಾಗೂ ಅನುಷ್ಕಾ ಶೆಟ್ಟಿ ವಿಶಿಷ್ಟ ಪಾತ್ರಗಳಿಗೆ ಫಿಟ್ ಆಗಿರುವುದು ನನಗೆ ಅನುಕೂಲವಾಗಿದೆ ಎಂದು ಸಮಂತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ವರದಿಯಾಗಿತ್ತು.

  ಆದರೆ, ನಾನು ಅನುಷ್ಕಾ ಆಗಲಿ, ಶ್ರುತಿ ಬಗ್ಗೆಯಾಗಲಿ ಹೇಳಿಕೆ ನೀಡೇ ಇಲ್ಲ ಇದು ಸುಳ್ಳು ವರದಿ ದಯವಿಟ್ಟು ನಂಬಬೇಡಿ ಎಂದು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಸಮಂತಾ ಮನವಿ ಮಾಡಿಕೊಂಡಿದ್ದಾಳೆ.

  ಸಮಂತಾ ಕ್ವಿಕ್ ಪ್ರೊಫೈಲ್

  ಸಮಂತಾ ಕ್ವಿಕ್ ಪ್ರೊಫೈಲ್

  ಮಲೆಯಾಳಿ ಅಮ್ಮ, ತೆಲುಗು ಅಪ್ಪನ ಮುದ್ದಿನ ಕೂಸಾದ ಸಮಂತಾ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ, ಬಿಕಾಂ ಓದಿರುವ ಸಮಂತಾ ಮಾಡೆಲಿಂಗ್, ಜಾಹೀರಾತು ಕ್ಷೇತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಳು.

  ನಾಗಾ ಚೈತನ್ಯ ಜೋಡಿಯಾಗಿ ಗೌತಮ್ ಮೆನನ್ ನಿರ್ದೇಶನದ 'ಯೇ ಮಾಯ ಚೇಸವೆ' ಚಿತ್ರದ ಮೂಲಕ ಬಂದ ಸಮಂತಾ ನಂತರ ಬೃಂದಾವನಂ, ದೂಕುಡು, ಈಗ, ನೀಥಾನೆ ಏನ್ ಪೂವಸಂತಂ, ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು ಚಿತ್ರಗಳ ಮೂಲಕ ಗಮನ ಸೆಳೆದಳು. ಆಟೋನಗರ ಸೂರ್ಯ, ಮನಂ ಸೇರಿದಂತೆ ನಾಲ್ಕಾರು ಚಿತ್ರಗಳು ಬಿಡುಗಡೆಗೆ ಕಾದಿವೆ.

  ಸಮಂತಾ ಟ್ವೀಟ್

  ಸಂದರ್ಶನಗಳ ಸತ್ಯಾಸತ್ಯತ್ತೆ ಬಗ್ಗೆ ಅಭಿಮಾನಿಗಳಿಗೆ ಟ್ವೀಟ್ ಸಂದೇಶ ನೀಡಿದ ಸಮಂತಾ

  ಸಿದ್ದಾರ್ಥ್ ಜತೆ ಸ್ನೇಹ, ಪ್ರೇಮ

  ಸಿದ್ದಾರ್ಥ್ ಜತೆ ಸ್ನೇಹ, ಪ್ರೇಮ

  ತೆಲುಗು, ತಮಿಳು ಚಿತ್ರರಂಗದ ಆಗಾಗ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳುವ ಲವರ್ ಬಾಯ್ ಸಿದ್ದಾರ್ಥ್ ಜತೆ ಕುಟುಂಬ ಸಮೇತ ಸಮಂತಾ ಕಾಳಹಸ್ತಿ ದೇಗುಲದಲ್ಲಿ ದೋಷ ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಮೇಲೆ ಇಬ್ಬರ ನಡುವಿನ ಪ್ರೇಮ ಮದುವೆ ಬಂಧನಕ್ಕೆ ಒಳಪಡುವ ಸುದ್ದಿಗಳು ದಟ್ಟವಾಯಿತು.

  ಸೋಹಾ ಅಲಿ ಖಾನ್, ಶ್ರುತಿ ಹಾಸನ್, ಪ್ರಿಯಾ ಆನಂದ್ ಪಟ್ಟಿಗೆ ಸಮಂತಾ ಸೇರ್ಪಡೆಯಾಗಿದ್ದು, ಸಿದ್ದಾರ್ಥ್ ಎಂಬ ಪ್ಲೇಬಾಯ್ ಗೆ ಸಮಂತಾ ಕಿರು ಬೆರಳ ಹಿಡಿದು ಸಪ್ತಪದಿ ತುಳಿಯುವ ಮನಸು ಮೂಡುವುದೇ ಕಾದು ನೋಡಬೇಕಿದೆ.

  ಅಂದ ಹಾಗೆ ಸಮಂತಾಗೆ ಇನ್ನೂ ವಯಸ್ಸು ಇನ್ನೂ 26ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು. ಮದುವೆ ವಿಷಯದಲ್ಲಿ ಅನುಭವಿ

  English summary
  Controversy Queen of Tollywood : After being in the industry for four years,for the first time that South Beauty Samantha Ruth Prabhu has come forward to express her anger over fake interviews of her published online. Samantha is irked about media highlighting her tweets and C

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X