For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಿರ್ಮಾಪಕರು ನಾಪತ್ತೆ?

  |

  ಚಾಲೆಂಜಿಂಗ್ ಸ್ಟಾರ್ ಮತ್ತು ಬಾಕ್ಸ್ ಆಫೀಸ್ ಸುಲ್ತಾನ್ ಬಿರುದಾಂಕಿತ ದರ್ಶನ್ ತೂಗುದೀಪ್ ಪ್ರಮುಖ ಭೂಮಿಕೆಯಲ್ಲಿದ್ದ ವಿರಾಟ್ ಚಿತ್ರದ ನಿರ್ಮಾಪಕರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಸುಂಟರಗಾಳಿಯಂತೆ ಹರಿದಾಡುತ್ತಿದೆ.

  ಚಿತ್ರದ ನಿರ್ಮಾಪಕರಾದ ರತ್ನ ಕುಮಾರ್ ಶೂಟಿಂಗ್ ಮುಗಿಸಲಾಗದೆ ಹೈದರಾಬಾದಿಗೆ ಓಡಿ ಹೋಗಿದ್ದಾರೆ ಎನ್ನುವುದು ಸದ್ಯಕ್ಕೆ ಗಾಂಧಿನಗರದಿಂದ ಲಭ್ಯವಾಗಿರುವ ಮಾಹಿತಿ. ವಿರಾಟ್ ಚಿತ್ರದ ಮಹೂರ್ತ ಅದ್ದೂರಿಯಾಗಿ ನೆರವೇರಿ ದೊಡ್ಡ ಸುದ್ದಿಯನ್ನೇ ಮಾಡಿತ್ತು.

  ಎಚ್ ವಾಸು ಚಿತ್ರದ ನಿರ್ದೇಶಕರಾಗಿದ್ದರು ಮತ್ತು ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿತ್ತು. ಇಷಾ ಚಾವ್ಲಾ, ವಿದಿಷಾ ಶ್ರೀವಾಸ್ತವ್ ಮತ್ತು ಚೈತ್ರ ಚಂದ್ರನಾಥ್ ಹೀಗೆ ಮೂವರು ನಾಯಕಿಯರು ಆಯ್ಕೆಯಾಗಿದ್ದರು.

  ಸುಹಾಸಿನಿ ಮಣಿರತ್ನಂ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದೆಂದು ಅಂತಿಮವಾಗಿತ್ತು. ಮುಂದೆ ಓದಿ..

  ಅರ್ದಕ್ಕೇ ನಿಂತ ವಿರಾಟ್

  ಅರ್ದಕ್ಕೇ ನಿಂತ ವಿರಾಟ್

  ಮೂವರು ನಾಯಕಿಯರೊಂದಿಗೆ ದರ್ಶನ್ ಅವರ ಫೋಟೋಶೂಟ್ ಕೂಡಾ ನೆರವೇರಿತ್ತು. ಚಿತ್ರಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ ಮತ್ತು ಎ ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿತ್ತು.

  ವಿರಾಟ್ ಚಿತ್ರದ ನಿರ್ಮಾಪಕರೆಲ್ಲಿ?

  ವಿರಾಟ್ ಚಿತ್ರದ ನಿರ್ಮಾಪಕರೆಲ್ಲಿ?

  ಹೈದರಾಬಾದ್ ಮೂಲದವರಾದ ನಿರ್ಮಾಪಕರು ದರ್ಶನ್ ಕಾಲ್ ಶೀಟ್ ಸಿಕ್ಕ ಕೂಡಲೇ ಅದ್ದೂರಿಯಾಗಿ ಚಿತ್ರೀಕರಣ ಆರಂಭಿಸಿದ್ದರು. ಆಮೇಲೆ ಚಿತ್ರದ ನೆಗೆಟಿವ್ ರೈಟ್ಸ್ ಮೇಲೆ ಹಣ ಎತ್ತಿ ಶೂಟಿಂಗ್ ಕೂಡಾ ಆರಂಭಿಸಿದ್ದರು.

  ಹೈದಾರಾಬಾದಿನಲ್ಲಿ ನಿರ್ಮಾಪಕರು

  ಹೈದಾರಾಬಾದಿನಲ್ಲಿ ನಿರ್ಮಾಪಕರು

  ನಂತರ ಶೂಟಿಂಗ್ ನಡೆಸಲಾಗದೇ ಚಿತ್ರೀಕರಣ ಅರ್ಥಕ್ಕೇ ನಿಂತಿತು. ಚಿತ್ರವನ್ನು ಯಾರಾದರೂ ಟೇಕ್ ಓವರ್ ಮಾಡಿ ಎಂದು ಗಾಂಧಿನಗರದ ಹಲವು ನಿರ್ಮಾಪಕರಲ್ಲಿ ರತ್ನಕುಮಾರ್ ವಿನಂತಿಸಿಕೊಂಡಿದ್ದರು ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

  ಈಗಾಗಲೇ ಚಿತ್ರಕ್ಕೆ ಭಾರೀ ಖರ್ಚು

  ಈಗಾಗಲೇ ಚಿತ್ರಕ್ಕೆ ಭಾರೀ ಖರ್ಚು

  ಆದರೆ ಚಿತ್ರಕ್ಕೆ ಈಗಾಗಲೇ ಸುಮಾರು ಐದು ಕೋಟಿ ಖರ್ಚಾಗಿದ್ದು, ಚಿತ್ರ ಸಂಪೂರ್ಣ ಮುಗಿಸಲು ಕಮ್ಮಿಯೆಂದರೂ ಆರರಿಂದ ಏಳು ಕೋಟಿ ಬೇಕು ಎನ್ನಲಾಗುತ್ತಿದೆ. ಹಾಗಾಗಿ ಚಿತ್ರವನ್ನು ಟೇಕ್ ಓವರ್ ಮಾಡಲು ಯಾರೂ ಮುಂದೆ ಬಂದಿಲ್ಲ.

  ದರ್ಶನ್ ಬೃಂದಾವನ

  ದರ್ಶನ್ ಬೃಂದಾವನ

  ದರ್ಶನ ಸದ್ಯ ಬೃಂದಾವನ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಅವರ ಹೋಂ ಬ್ಯಾನರಿನ 'ಒಂದೂರಲ್ಲಿ ಒಬ್ಬ ರಾಜಯಿದ್ದ' ಎನ್ನುವ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಅವರ ಸಹೋದರ ದಿನಕರ್ ನಿರ್ದೇಶಕ.

  English summary
  Rumour spreading in Gandhinagar that, Darshan starer 'Virat' movie producer Ratna Kumar absconding. If reports are believed producer requesting Sandalwood Producers to take over the Virat movie. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X