»   » 'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.!

'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.!

Posted By:
Subscribe to Filmibeat Kannada

'ಕುರುಕ್ಷೇತ್ರ' ಚಿತ್ರದಲ್ಲಿ ಒಂದೊಂದೆ ಪಾತ್ರಗಳು ಬಹಿರಂಗವಾಗುತ್ತಿದ್ದಂತೆ ಚಿತ್ರದ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಾಗುತ್ತಿದೆ. ದರ್ಶನ್ 'ದುರ್ಯೋಧನ', ರವಿಚಂದ್ರನ್ 'ಕೃಷ್ಣ' ಎಂದಾಗಲೇ ಕನ್ನಡ ಪ್ರೇಕ್ಷಕರು ಈ ಚಿತ್ರಕ್ಕಾಗಿ ಎಷ್ಟೇ ದಿನವಾದ್ರು ಕಾಯುತ್ತೀವಿ ಎನ್ನುವ ಮಟ್ಟಕ್ಕೆ ಕಮಿಟ್ ಆಗಿದ್ದಾರೆ. ಹೀಗಿರುವಾಗ, 'ಕುರುಕ್ಷೇತ್ರ' ಚಿತ್ರದ ಮತ್ತೊಂದು ದೊಡ್ಡ ಪಾತ್ರದ ಬಗ್ಗೆ ಸುದ್ದಿ ಹೊರ ಬಿದ್ದಿದೆ.

ಹೌದು, ದುರ್ಯೋಧನ, ಕೃಷ್ಣ, ದ್ರೋಣಚಾರ್ಯ, ಧೃತರಾಷ್ಟ್ರ, ಪಾತ್ರಗಳು ಬಹುತೇಕ ಅಂತಿಮವಾಗಿವೆ. ಈಗ ಕರ್ಣನ ಸರದಿ. ಕನ್ನಡದ 'ಕುರುಕ್ಷೇತ್ರ'ದಲ್ಲಿ ಕರ್ಣನ ಪಾತ್ರ ಯಾರು ಮಾಡ್ತಾರೆ ಎಂಬ ಕುತೂಹಲ ಹೆಚ್ಚಿತ್ತು. ಯಾಕಂದ್ರೆ, ಮಹಾಭಾರತದಲ್ಲಿ ಬರುವ ದುರಂತ ಪಾತ್ರ ಅದು, ಜೊತೆಗೆ ದುರ್ಯೋಧನನ ಪ್ರಾಣ ಸ್ನೇಹಿತನ ಪಾತ್ರವದು. ಹೀಗಾಗಿ, ದರ್ಶನ್ ಜೊತೆಯಲ್ಲಿ ಈ ಪಾತ್ರ ಮಾಡಬಲ್ಲವರು ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಮುಂದೆ ಓದಿ

ಸುದೀಪ್ ಮಾಡಬೇಕಿತ್ತು!

ಎಲ್ಲ ಅಂದುಕೊಂಡಂತೆ ಆಗಿದ್ದರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, 'ಕುರುಕ್ಷೇತ್ರ' ಚಿತ್ರದಲ್ಲಿ ಕರ್ಣನ ಪಾತ್ರ ಮಾಡಬೇಕಿತ್ತು. ಇದು ಚಿತ್ರದ ನಿರ್ಮಾಪಕ ಮುನಿರತ್ನ ಅವರ ಆಸೆಯೂ ಆಗಿತ್ತು. ಆದ್ರೆ, ಸುದೀಪ್ ಈ ಚಿತ್ರದಲ್ಲಿ ಅಭಿನಯಿಸುವುದರ ಬಗ್ಗೆ ಇನ್ನು ಖಚಿತವಾಗಿಲ್ಲ. ಹಾಗಾದ್ರೆ, ಕರ್ಣ ಯಾರು ಮಾಡಬಹುದು?

['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ದರ್ಶನ್ ಹೆಗಲಿಗೆ ಮತ್ತೊಂದು ಜವಾಬ್ದಾರಿ!

ಸುದೀಪ್ ಈ ಚಿತ್ರದಲ್ಲಿ ಅಭಿನಯಿಸುವುದು ಅನುಮಾನವೆಂಬ ಕಾರಣಕ್ಕೆ ಕರ್ಣನ ಪಾತ್ರಕ್ಕಾಗಿ ಹುಡುಕಾಟ ನಡೆಯಿತು. ಆದ್ರೆ, ಸೂಕ್ತ ನಟ ಸಿಕ್ಕಿಲ್ಲ ಎಂಬ ಮಾತಿದೆ. ಕೊನೆಗೆ ಈ ಜವಾಬ್ದಾರಿಯನ್ನ ದುರ್ಯೋಧನ ಪಾತ್ರಧಾರಿ ದರ್ಶನ್ ಹೆಗಲಿಗೆ ಕಟ್ಟಲು ನಿರ್ಧರಿಸಲಾಗಿದೆ.

[ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!]

'ಕುರುಕ್ಷೇತ್ರ'ದಲ್ಲಿ ದರ್ಶನ್ ದ್ವಿಪಾತ್ರ!

ಹೌದು, 'ಕುರುಕ್ಷೇತ್ರ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇಂತಹದೊಂದು ಸುದ್ದಿ ಈಗ 'ಕುರುಕ್ಷೇತ್ರ' ಅಂಗಳದಿಂದ ಕೇಳಿ ಬರುತ್ತಿದೆ.

['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

ದುರ್ಯೋಧನ, ಕರ್ಣನಾಗಿ ದರ್ಶನ್!

ಈ ಮೂಲಕ 'ಕುರುಕ್ಷೇತ್ರ'ದ ಎರಡು ಪ್ರಮುಖ ಪಾತ್ರದಲ್ಲಿ ಸ್ವತಃ ದರ್ಶನ್ ಅವರೇ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಒಂದೇ ತೆರೆಮೇಲೆ ಇಬ್ಬಿಬ್ಬರು ದರ್ಶನ್ ಗಳನ್ನ ನೋಡುವ ಸುವರ್ಣ ಅವಕಾಶ ದಾಸನ ಅಭಿಮಾನಿಗಳಿಗೆ ಸಿಗಲಿದೆ.

[ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!]

'ಇಂದ್ರ' ಚಿತ್ರದಲ್ಲಿ ದರ್ಶನ್ ದ್ವಿಪಾತ್ರ

ಈ ಹಿಂದೆ 'ಇಂದ್ರ' ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಣ್ಣ-ತಮ್ಮನಾಗಿ ಎರಡು ಪಾತ್ರಗಳನ್ನ ನಿರ್ವಹಿಸಿದ್ದರು.

ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ

'ಕುರುಕ್ಷೇತ್ರ'ದಲ್ಲಿ ದರ್ಶನ್ ದ್ವಿಪಾತ್ರವೆಂಬ ವಿಷ್ಯವನ್ನ ಖುದ್ದು ನಿರ್ಮಾಪಕರೇ ಹೇಳುವವರೆಗೂ ಖಚಿತವಿಲ್ಲ. ಆದ್ರೆ, ಈ ರೀತಿಯಾದ ಯೋಚನೆಯನ್ನ ಚಿತ್ರತಂಡ ಮಾಡಿದೆ ಎಂಬ ಸುದ್ದಿ ಮೂಲಗಳಿಂದ ಬಹಿರಂಗವಾಗಿದೆ. ಜುಲೈ 23ರಂದು 'ಕುರುಕ್ಷೇತ್ರ' ಸಿನಿಮಾ ಶುರು ಮಾಡುವ ಪ್ಲಾನ್ ಇದೆ. ಆ ದಿನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

['ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!]

English summary
According to Sources, Challenging Star Darshan will play Dual Role as (Karna and Duryodhana) In Kannada Movie 'Kurukshetra'. The Movie Directed by Naganna and Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada