»   » ಡಿಸೆಂಬರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ.!

ಡಿಸೆಂಬರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ.!

Posted By:
Subscribe to Filmibeat Kannada
ದರ್ಶನ್ 51ನೇ ಸಿನಿಮಾ ಡಿಸೆಂಬರ್ ನಲ್ಲಿ ಶುರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು? ಇದು 'ಡಿ-ಬಾಸ್' ಅಭಿಮಾನಿಗಳನ್ನ ಕಾಡುತ್ತಿರುವ ದೊಡ್ಡ ಪ್ರಶ್ನೆ. ಇದಕ್ಕೀಗ ಉತ್ತರ ಸಿಕ್ಕಂತಾಗಿದೆ.

ಸದ್ಯ 'ಕುರುಕ್ಷೇತ್ರ'ದ ಚಿತ್ರೀಕರಣದಲ್ಲಿರುವ ದಾಸ ಡಿಸೆಂಬರ್ ತಿಂಗಳಿನಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ. ಈಗಾಗಲೇ 51ನೇ ಚಿತ್ರದ ಪೂರ್ವ ತಯಾರಿ ನಡೆಯತ್ತಿದ್ದು, ದರ್ಶನ್ ಬಂದ ಕೂಡಲೇ ಶೂಟಿಂಗ್ ಆರಂಭವಂತೆ.

ಇದಕ್ಕು ಮುಂಚೆ ಸ್ವತಃ ದರ್ಶನ್ ಅವರೇ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಗೊಂದಲ ಬೇಡವೆಂದಿದ್ದರು. ಆದ್ರೀಗ, 51ನೇ ಚಿತ್ರದ ನಿರ್ಮಾಪಕ ಹಾಗೂ ತಾಂತ್ರಿಕ ತಂಡ ಇಷ್ಟೊಂದು ತಯಾರಿ ನೋಡಿದ್ರೆ, ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗಿದ್ರೆ, 51ನೇ ಯಾವುದು? ಯಾರು ನಿರ್ದೇಶಕ? ಎಂದು ತಿಳಯಲು ಮುಂದೆ ಓದಿ.....

ಶೈಲಾಜ್ ನಾಗ್ ಪಾಲಿಗೆ 51ನೇ ಸಿನಿಮಾ

ಸಾಕಷ್ಟು ಗೊಂದಲಗಳ ನಡುವೆ ದರ್ಶನ್ ಅವರ 51 ನೇ ಸಿನಿಮಾ ಶೈಲಾಜ್ ನಾಗ್ ಮತ್ತು ಬಿ ಸುರೇಶ್ ಅವರು ನಿರ್ಮಾಣದಲಿ ಆರಂಭವಾಗಲಿದೆಯಂತೆ.

ನಾಯಕಿಗಾಗಿ ಹುಡುಕಾಟ

ಕಥೆ ಮತ್ತು ಚಿತ್ರಕಥೆ ಸಿದ್ದ ಮಾಡಿಕೊಂಡು ಚಿತ್ರೀಕರಣಕ್ಕೆ ಕಾಯುತ್ತಿರುವ ಶೈಲಾಜ್ ನಾಗ್ ಮತ್ತು ತಂಡ, ದರ್ಶನ್ ಅವರಿಗೆ ನಾಯಕಿಯನ್ನ ಹುಡುಕುತ್ತಿದ್ದಾರಂತೆ.

51ನೇ ಚಿತ್ರದ ತಾಂತ್ರಿಕ ತಂಡ

ಪಿ ಕುಮಾರ್ ದರ್ಶನ್ ಅವರ 51ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಬಹುತೇಕ ಖಚಿತವೆನ್ನಲಾಗಿದೆ. ಶ್ರೀಷಾ ಅವರ ಛಾಯಾಗ್ರಹಣವಿದ್ದು, ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರಂತೆ.

ಡಿಸೆಂಬರ್ ಗೆ 'ಕುರುಕ್ಷೇತ್ರ' ಮುಕ್ತಾಯ

ಡಿಸೆಂಬರ್ ನಲ್ಲಿ ಶೈಲಾಜ್ ನಾಗ್ ಅವರ ಸಿನಿಮಾ ಆರಂಭವಾಗಲಿದೆ ಎನ್ನುವುದಾದರೇ, ಕುರುಕ್ಷೇತ್ರದ ಚಿತ್ರದ ಚಿತ್ರೀಕರಣ ಡಿಸೆಂಬರ್ ನಲ್ಲಿ ಅಂತ್ಯವಾಗಲಿದೆ. ನಂತರ ಕುರುಕ್ಷೇತ್ರ ಪೋಸ್ಟ್ ಪ್ರಡೊಕ್ಷನ್ ಕೆಲಸ ಆರಂಭಿಸಲಿದೆ ಎನ್ನಲಾಗಿದೆ.

ಸಾಲುಗಟ್ಟಿ ನಿಂತಿದೆ ಪ್ರಾಜೆಕ್ಟ್

ಸಂದೇಶ ನಾಗರಾಜ್ ಅವರು ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. ತಮಿಳಿನ ವೀರಂ ಚಿತ್ರದ ರೀಮೇಕ್ ನಲ್ಲೂ ನಟಿಸಲಿದ್ದಾರೆ. ಈ ಚಿತ್ರವನ್ನ ಎಂ.ಡಿ ಶ್ರೀಧರ್ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Kannada Actor, Challenging Star Darshan's 51st Film Starts From This December. ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ಸೆಟ್ಟೇರಲಿದೆಯಂತೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada