»   » ದರ್ಶನ್ ಜಗ್ಗು'ದಾದಾಗಿರಿ' ಹೇಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ.!

ದರ್ಶನ್ ಜಗ್ಗು'ದಾದಾಗಿರಿ' ಹೇಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಮಾರ್ಕೆಟ್ ಬಿದ್ದು ಹೋಗಿದೆ ಅಂತ ಗೊಣುಗುವವರ ಸಂಖ್ಯೆ ಗಾಂಧಿನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಒಂದೆರಡು ವಾರ ಸಿನಿಮಾ ಓಡಿದರೆ 'ಸಕ್ಸಸ್' ಎನ್ನುವ ಈಗಿನ ಕಾಲದಲ್ಲಿ ನಿರ್ಮಾಪಕ ಜೇಬು ಹಗುರವಾಗುತ್ತಿದೆಯೇ ಹೊರತು ಭಾರವಾಗುತ್ತಿಲ್ಲ.

ಹೊಸಬರ ಸಿನಿಮಾ ಬಂತೂ ಅಂದ್ರೆ ಕೇಳೋದೇ ಬೇಡ. ಸಿನಿಮಾ 'ಸೂಪರ್ ಹಿಟ್' ಅಂತ ಬ್ರ್ಯಾಂಡ್ ಅಗುವವರೆಗೂ ವಾಹಿನಿಯವರು ಸ್ಯಾಟೆಲೈಟ್ ರೈಟ್ಸ್ ಪಡೆದುಕೊಳ್ಳುವುದಿಲ್ಲ. ಸ್ಟಾರ್ ಸಿನಿಮಾಗಳಿಗೂ ಸದ್ಯ ಇದೇ ಪರಿಸ್ಥಿತಿ. [ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!]


ಹೀಗಿರುವಾಗಲೇ, 'ಬಾಕ್ಸ್ ಆಫೀಸ್ ಸುಲ್ತಾನ್', 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರವರ 'ಜಗ್ಗುದಾದಾ' ಸಿನಿಮಾ ಈ ಶುಕ್ರವಾರ (ಜೂನ್ 10) ಬಿಡುಗಡೆ ಆಗಲಿದೆ. ಬಿಡುಗಡೆಗೂ ಮುನ್ನವೇ ಎಂದಿನಂತೆ 'ದಾಸ' ದರ್ಶನ್ ಈ ಬಾರಿಯೂ ದಾಖಲೆ ಮಾಡಿದ್ದಾರೆ. ಮುಂದೆ ಓದಿ....


'ಜಗ್ಗುದಾದಾ' ದಾಖಲೆ.!

ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಆ ಮೂಲಕ 'ಜಗ್ಗುದಾದಾ' ಸ್ಯಾಂಡಲ್ ವುಡ್ ನಲ್ಲಿ ರೆಕಾರ್ಡ್ ಮಾಡಿದೆ. [ಸಿಂಹದಂತೆ ಘರ್ಜಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್]


ಎಷ್ಟು ಬೆಲೆಗೆ ಮಾರಾಟ.?

ಮೂಲಗಳ ಪ್ರಕಾರ, 'ಜಗ್ಗುದಾದಾ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಐದುವರೆ ಕೋಟಿಗೆ ಸೇಲ್ ಆಗಿದೆ. ['ಜಗ್ಗುದಾದಾ'ದಲ್ಲಿ ದರ್ಶನ್ ರ ಗೆಳೆಯನ ಪಾತ್ರ ಮಾಡುತ್ತಿರುವವರು ಇವರೇ]


ಯಾವ ವಾಹಿನಿಗೆ.?

ಬರೋಬ್ಬರಿ ಐದುವರೆ ಕೋಟಿ ಕೊಟ್ಟು ಯಾವ ವಾಹಿನಿ ಪ್ರಸಾರ ಹಕ್ಕು ಪಡೆದುಕೊಂಡಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. [ದರ್ಶನ್ ಅಭಿನಯದ 'ಜಗ್ಗುದಾದಾ' ಆಡಿಯೋ ವಿಮರ್ಶೆ]


ದರ್ಶನ್ ಜಗ್ಗು'ದಾದಾಗಿರಿ'.!

'ಜಗ್ಗುದಾದಾ'ಗಿರಿ ಗಾಂಧಿನಗರದಲ್ಲಿ ಜೋರಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.?


ಈ ವಾರ 'ಜಗ್ಗುದಾದಾ' ಬಿಡುಗಡೆ.!

ಸೆನ್ಸಾರ್ ಅಂಗಳದಿಂದ ಪಾಸ್ ಆಗಿರುವ 'ಜಗ್ಗುದಾದಾ' ಸಿನಿಮಾ ಇದೇ ಶುಕ್ರವಾರ ನಿಮ್ಮ ಮುಂದೆ ಬರಲಿದೆ.


ಟ್ರೈಲರ್ ನೋಡಿದ್ರಾ.?

ರಾಘವೇಂದ್ರ ಹೆಗಡೆ ನಿರ್ದೇಶಿಸಿರುವ ದರ್ಶನ್, ದೀಕ್ಷಾ ಸೇಠ್, ರವಿಶಂಕರ್, ಸೃಜನ್ ಲೋಕೇಶ್ ಅಭಿನಯಿಸಿರುವ 'ಜಗ್ಗುದಾದಾ' ಚಿತ್ರದ ಟ್ರೈಲರ್ ಒಮ್ಮೆ ನೋಡಿ...ಲಿಂಕ್ ಇಲ್ಲಿದೆ....


ರೋಮ್ಯಾಂಟಿಕ್ ಸಾಂಗ್ ನೋಡಿ....

'ಜಗ್ಗುದಾದಾ' ಚಿತ್ರದ ರೋಮ್ಯಾಂಟಿಕ್ ಸಾಂಗ್ 'ತಲೆ ಕೆಡುತ್ತೆ ಹುಡುಗಿ...' ಹಾಡಿನ ಲಿಂಕ್ ಇಲ್ಲಿದೆ, ಕ್ಲಿಕ್ ಮಾಡಿ....


ಮಾಸ್ ಸಾಂಗ್ ಗೆ ಸೂಪರ್ ಸ್ಟೆಪ್ ಹಾಕಿ...

ದರ್ಶನ್ ಅಭಿಮಾನಿಗಳಿಗಂತಲೇ ಚಿತ್ರೀಕರಣಗೊಂಡಿರುವ 'ಜಗ್ಗು ದುನಿಯಾ ರೇ..' ಹಾಡನ್ನ ನೋಡಿ, ಸ್ಟೆಪ್ ಹಾಕಿ....


ಡ್ಯುಯೆಟ್ ಸಾಂಗ್ ನೋಡಿ....

ವಿ.ಹರಿಕೃಷ್ಣ ಸಂಗೀತ ನೀಡಿರುವ ಡ್ಯುಯೆಟ್ ಸಾಂಗ್ 'ವಾಲೆ...ಜುಮ್ಕಿ...' ನೋಡಿ ಆನಂದಿಸಿ....


English summary
According to the Grapevine, Challenging Star Darshan starrer Kannada Movie 'Jaggu Dada' satellite rights is sold for the record price of Rs.5.5 Crore. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada