For Quick Alerts
  ALLOW NOTIFICATIONS  
  For Daily Alerts

  ಕಲೆಕ್ಷನ್ ನಲ್ಲಿ ಚಿಂದಿ ಉಡಾಯಿಸಿದ ದರ್ಶನ್ 'Mr.ಐರಾವತ'

  By ಹರಾ
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಕ್ಕಿದೆ. ಬರೋಬ್ಬರಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ 'Mr.ಐರಾವತ' ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

  'ದಾಸ' ದರ್ಶನ್ ಅಭಿಮಾನಿಗಳಿಗೆ ಹಬ್ಬದೂಟ ಆಗಿರುವ 'Mr.ಐರಾವತ' ಸಿನಿಮಾ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದಿದೆ. ಮೂಲಗಳ ಪ್ರಕಾರ, ಬಿಡುಗಡೆ ಆದ ಎರಡೇ ದಿನಗಳಲ್ಲಿ 'Mr.ಐರಾವತ' ಬರೋಬ್ಬರಿ 8.25 ಕೋಟಿ ಕಲೆಕ್ಷನ್ ಮಾಡಿದೆ.

  ಕರ್ನಾಟಕ ಮಾತ್ರವಲ್ಲದೆ, ವಿದೇಶಗಳಲ್ಲಿಯೂ 'Mr.ಐರಾವತ' ಏಕಕಾಲಕ್ಕೆ ಬಿಡುಗಡೆ ಆಗಿತ್ತು. ಅಮೆರಿಕದಲ್ಲಿ 40 ಥಿಯೇಟರ್ ಗಳಲ್ಲಿ ಸಿನಿಮಾ ತೆರೆಕಂಡಿತ್ತು. ಬಿಗ್ ಬಜೆಟ್ ನಲ್ಲಿ ರೆಡಿಯಾಗಿದ್ದ 'Mr.ಐರಾವತ' ಸಿನಿಮಾ ಎರಡೇ ದಿನಗಳಲ್ಲಿ 8.25 ಕೋಟಿ ಲೂಟಿ ಮಾಡುವ ಮೂಲಕ ಗಾಂಧಿನಗರದಲ್ಲಿ ಹೊಸ ದಾಖಲೆ ಮಾಡಿದೆ. [ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']

  ದರ್ಶನ್ ಜೊತೆ ಊರ್ವಶಿ ರೌಟೆಲಾ ಜೋಡಿಯಾಗಿ ನಟಿಸಿದ ಸಿನಿಮಾ 'Mr.ಐರಾವತ'. ಖತರ್ನಾಕ್ ಖೇಡಿಯಾಗಿ ಪ್ರಕಾಶ್ ರೈ, ವಿಶೇಷ ಪಾತ್ರದಲ್ಲಿ ದರ್ಶನ್ ಪುತ್ರ ವಿನೀಶ್ ನಟಿಸಿದ್ದ ಈ ಚಿತ್ರಕ್ಕೆ ಎ.ಪಿ.ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಅಭಿಮಾನಿಗಳು 'ಐರಾವತ'ನ ದರ್ಬಾರ್ ಮೆಚ್ಚಿರುವುದರಿಂದ ನಿರ್ಮಾಪಕ ಸಂದೇಶ್ ನಾಗರಾಜ್ ಜೇಬು ತುಂಬಿದೆ.

  English summary
  According to the sources, Kannada Actor Darshan starrer Kannada Movie 'Mr.Airavata' box office collection is Rs.8.25 crore in 2 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X