For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ: 'ರಾಬರ್ಟ್' ಎಂಟ್ರಿಗೆ ಮುಹೂರ್ತ ನಿಗದಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಯಾವಾಗ ಬಿಡುಗಡೆ ಆಗಬಹುದು ಎಂದು ಇಡೀ ಸ್ಯಾಂಡಲ್ ವುಡ್ ಕಾಯುತ್ತಿದೆ. 'ಯಜಮಾನ' ಸಿನಿಮಾದ ಯಶಸ್ಸಿನ ಬಳಿಕ ದರ್ಶನ್ ನಟನೆಯ ಚಿತ್ರ ರಾಬರ್ಟ್ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.

  ಲಾಕ್‌ಡೌನ್ ಘೋಷಣೆ ಆಗದಿದ್ದರೆ ಇಷ್ಟೊತ್ತಿಗಾಗಲೇ ಬೆಳ್ಳಿತೆರೆ ಮೇಲೆ ರಾಬರ್ಟ್ ಅಬ್ಬರಿಸಿಬಿಡುತ್ತಿದ್ದ. ಆದರೆ, ಕೊರೊನಾ ವೈರಸ್ ಅಡ್ಡಿಯಾಯಿತು. ಈಗ ಪರಿಸ್ಥಿತಿ ಬದಲಾಗಿದೆ. ಚಿತ್ರರಂಗ ಯಥಾಸ್ಥಿತಿಗೆ ಬರುತ್ತಿದೆ. ಮುಚ್ಚಿದ್ದ ಚಿತ್ರಮಂದಿರಗಳು ತೆರೆದಿವೆ. ಒಳ್ಳೆಯ ಸಮಯ ನೋಡಿ ತೆರೆಗೆ ಬರಲು ಸ್ಟಾರ್ಸ್ ಚಿತ್ರಗಳು ಸಜ್ಜಾಗುತ್ತಿದೆ. ಈ ನಡುವೆ ದರ್ಶನ್ ರಾಬರ್ಟ್ ಡೇಟ್ ನಿಗದಿ ಪಡಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

  ಕ್ರಿಸ್‌ಮಸ್‌ಗೆ ರಾಬರ್ಟ್

  ಕ್ರಿಸ್‌ಮಸ್‌ಗೆ ರಾಬರ್ಟ್

  ದರ್ಶನ್ ನಟನೆಯ ರಾಬರ್ಟ್, ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ, ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗಳು ಬಿಡುಗಡೆಗಾಗಿ ಸಾಲಿನಲ್ಲಿದೆ. ಈ ಚಿತ್ರಗಳ ಪೈಕಿ ಯಾವುದು ಮೊದಲು ಪ್ರೇಕ್ಷಕರ ಮುಂದೆ ಬರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಕುತೂಹಲದ ನಡುವೆ ರಾಬರ್ಟ್ ಸಿನಿಮಾ ಕ್ರಿಸ್‌ಮಸ್‌ಗೆ ಬರಲಿದೆ ಎಂಬ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.

  'ನಾನು ದರ್ಶನ್‌ರನ್ನು ನೋಡಲೇಬೇಕು ಕರೆದುಕೊಂಡು ಹೋಗಿ': ಅಜ್ಜಿಯ ಬೇಡಿಕೆ'ನಾನು ದರ್ಶನ್‌ರನ್ನು ನೋಡಲೇಬೇಕು ಕರೆದುಕೊಂಡು ಹೋಗಿ': ಅಜ್ಜಿಯ ಬೇಡಿಕೆ

  ಕ್ರಿಸ್‌ಮಸ್‌ ಏಕೆ?

  ಕ್ರಿಸ್‌ಮಸ್‌ ಏಕೆ?

  ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರು ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಒಂದು ಪಾತ್ರ ರಾಬರ್ಟ್. ಕಳೆದ ವರ್ಷದ ಕ್ರಿಸ್‌ಮಸ್‌ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ರಾಬರ್ಟ್ ಸಿನಿಮಾ ಬಿಡುಗಡೆಗೆ ಇದಕ್ಕಿಂತ ಉತ್ತಮ ದಿನ ಸದ್ಯಕ್ಕೆ ಇಲ್ಲ ಎಂದು ನಿರ್ಧರಿಸಿದಂತಿದೆ.

  ಬಿಗ್ ಬಜೆಟ್ ಚಿತ್ರಗಳಿಗೆ ಆತಂಕ

  ಬಿಗ್ ಬಜೆಟ್ ಚಿತ್ರಗಳಿಗೆ ಆತಂಕ

  ಕೊರೊನಾ ಆತಂಕದಲ್ಲಿರುವ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರ್ತಾರಾ ಎಂಬ ದೊಡ್ಡ ಆತಂಕ ದೊಡ್ಡ ಬಜೆಟ್ ಚಿತ್ರದ ನಿರ್ಮಾಪಕರಿಗೆ ಕಾಡುತ್ತಿದೆ. ಒಂದು ವೇಳೆ ಸಿನಿಮಾ ರಿಲೀಸ್ ಮಾಡಿದ್ಮೇಲೆ ಪ್ರೇಕ್ಷಕರು ಥಿಯೇಟರ್‌ಗೆ ಬರಲಿಲ್ಲ ಅಂದ್ರೆ ಎಂಬ ಭಯವೂ ಇದೆ. ಹಾಗಾಗಿ, ಇನ್ನೂ ಸ್ವಲ್ಪ ದಿನ ಕಾಯೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗ್ನೋಡಿದ್ರೆ, ಸ್ಟಾರ್ಸ್ ಸಿನಿಮಾಗಳೆಲ್ಲವೂ ಮುಂದಿನ ವರ್ಷವೇ ಬಿಡುಗಡೆಯಾಗುವುದು ಎಂಬ ಮಾತಿದೆ. ಸಂಕ್ರಾಂತಿ ನಂತರ ದೊಡ್ಡ ಚಿಚತ್ರಗಳು ಬರಬಹುದು ಎಂದು ಹೇಳಲಾಗಿತ್ತು.

  'ಕಲಾಸಿಪಾಳ್ಯ'ಕ್ಕೆ 16 ವರ್ಷ: ಸೋಶಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಭಕ್ತರ ಸಂಭ್ರಮ'ಕಲಾಸಿಪಾಳ್ಯ'ಕ್ಕೆ 16 ವರ್ಷ: ಸೋಶಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಭಕ್ತರ ಸಂಭ್ರಮ

  ದೊಡ್ಡ ಕಲೆಕ್ಷನ್ ನಿರೀಕ್ಷೆ ಹೊಂದಿರುವ ಚಿತ್ರ

  ದೊಡ್ಡ ಕಲೆಕ್ಷನ್ ನಿರೀಕ್ಷೆ ಹೊಂದಿರುವ ಚಿತ್ರ

  ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದಾರೆ. ಇದು ಇವರಿಗೆ ಮೊದಲ ಕನ್ನಡ ಸಿನಿಮಾ. ಜಗಪತಿ ಬಾಬು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮಾಂಟೇರೋ, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಾಬರ್ಟ್ ಸಿನಿಮಾದ ಕಲೆಕ್ಷನ್ ಮೇಲೆ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ, ಚಿತ್ರದ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ.

  ಮತ್ತೆ ಚುನಾವಣೆ ಅಖಾಡಕ್ಕೆ ದರ್ಶನ್-ಯಶ್? ಯಾರ ಪರ ಪ್ರಚಾರ?ಮತ್ತೆ ಚುನಾವಣೆ ಅಖಾಡಕ್ಕೆ ದರ್ಶನ್-ಯಶ್? ಯಾರ ಪರ ಪ್ರಚಾರ?

  English summary
  Challening Star Darshan starrer 'Roberrt' Movie Likely to release on December 25.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X