»   » ಮದುವೆಗೆ ಮುನ್ನವೇ ಪ್ರೇಮಿಸಿದ್ದೆವು: ಉದಯ್ ಪತ್ನಿ

ಮದುವೆಗೆ ಮುನ್ನವೇ ಪ್ರೇಮಿಸಿದ್ದೆವು: ಉದಯ್ ಪತ್ನಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಮದುವೆಗೂ ಮುನ್ನವೇ ಟಾಲಿವುಡ್ ಹೀರೋ ಉದಯ್ ಕಿರಣ್ ಜೊತೆ ಒಂದೂವರೆ ವರ್ಷಗಳಷ್ಟು ಸಮಯ ಇಬ್ಬರೂ ಗಾಢವಾಗಿ ಪ್ರೀತಿಸಿಕೊಂಡಿದ್ದೆವು ಎಂದು ಅವರ ಪತ್ನಿ ವಿಷಿತಾ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದಂತೆ ವಿಷಿತಾರನ್ನು ಪೊಲೀಸರು ಇನ್ನೊಮ್ಮೆ ವಿಚಾರಣೆ ಮಾಡಿದ್ದಾರೆ.

ಮದುವೆಗೆ ಮುನ್ನ ತಾನೂ ಹಾಗೂ ಉದಯ್ ಒಂದೂವರೆ ವರ್ಷಗಳಷ್ಟು ಕಾಲ ಪ್ರೀತಿಸುತ್ತಿದ್ದೆವು. ಆಗ ಮನಸ್ಸು ಬಿಚ್ಚಿ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು ಎಂದು ವಿಷಿತಾ ಪೊಲೀಸರಿಗೆ ತಿಳಿಸಿದ್ದಾರೆ. ಮದುವೆ ಮುನ್ನ ಹಾಗೂ ಮದುವೆ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ತಕರಾರು ಇರಲಿಲ್ಲ ಎಂದೂ ಹೇಳಿದ್ದಾರೆ.


ಉದಯ್ ಕಿರಣ್ ಆತ್ಮಹತ್ಯೆಗೆ ಮುನ್ನ ವಿಷಿತಾ ತನ್ನ ಸ್ನೇಹಿತನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ತಾನೂ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಉದಯ್ ಹೇಳಿದ್ದರಂತೆ. ಆದರೆ ಅಷ್ಟರಲ್ಲೇ ಈ ರೀತಿ ಮಾಡಿಕೊಂಡರು ಎಂದು ಹೇಳುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿಬಂದವು.

ಆದರೆ ಆತ್ಮಹತ್ಯೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಆರ್ಥಿಕ ಸಮಸ್ಯೆಗಳು, ವೃತ್ತಿ ಬದುಕಿನಲ್ಲಿ ಅವಕಾಶಗಳಿಲ್ಲದಿರುವುದು ಬಹುಶಃ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಭಾವಿಸುತ್ತಿದ್ದಾರೆ. ಇನ್ನು ಟಾಲಿವುಡ್ ವಲಯದಲ್ಲಿ ನಾನಾ ಊಹಾಪೋಹಗಳು ಹರಿದಾಡುತ್ತಿವೆ.

ತೆಲುಗಿನ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ದಾಸರಿ ನಾರಾಯಣರಾವ್ ಹೇಳಿದ್ದು ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತಿದೆ. "ಉದಯ್ ಜೀವನದಲ್ಲಿ ಕೆಲವು ಶಕ್ತಿಗಳು ಆಟವಾಡಿಕೊಂಡವು. ಆ ಕಾರಣದಿಂದಲೇ ಖಿನ್ನತೆಗೆ ಒಳಗಾಗಿ ಆತ್ನಹತ್ಯೆಗೆ ದಾರಿತೆಗೆಯಿತು" ಎಂದಿದ್ದಾರೆ.

English summary
Uday Kiran wife Vishitha told to the police that they are in love before wedding for one and half year. Uday Kiran allegedly committed suicide by hanging himself from a tree at Komatapalli junction in Bobbili sub-division here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada