»   » ಬೆಳಿಗ್ಗೆ ನಾಲ್ಕಕ್ಕೆ ಗೆಳೆಯನ ಜೊತೆ ದೀಪಿಕಾ ಪಡುಕೋಣೆ

ಬೆಳಿಗ್ಗೆ ನಾಲ್ಕಕ್ಕೆ ಗೆಳೆಯನ ಜೊತೆ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ನಟ-ನಟಿಯರ ಬದುಕೆ ಹಾಗೆ. ಕುಳಿತರೂ ನಿಂತರೂ ಕದಲಿದರೂ ಸುದ್ದಿಯೇ. ಆದರೆ ಒಬ್ಬರೇ ಕುಂತಾಗ, ನಿಂತಾಗ ಕಡೆಗೆ ತಲೆ ಸುತ್ತಿ ಬಿದ್ದರೂ ಆಗದ ಸುದ್ದಿ ನಟ-ನಟಿಯರಿಬ್ಬರೂ ಒಟ್ಟಿಗೆ ಇದ್ದಾಗ ಮಾತ್ರ ಬೇಡವೆಂದರೂ ಭಾರಿ ಸುದ್ದಿಯಾಗಿಬಿಡುತ್ತದೆ. ಈಗಾಗಿರುವದೂ ಅದೇ! ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬೆಳಿಗ್ಗೆ 4 ಗಂಟೆಗೆ ಒಟ್ಟಿಗೆ ಇದ್ದಾಗ ಜನರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಇತ್ತೀಚಿಗೆ ದೀಪಿಕಾ ಹಾಗೂ ರಣವೀರ್ ಅತಿ ಆಪ್ತರು ಎಂಬ ಮಾತು ಕೇಳಿಬರುತ್ತಿತ್ತು. ಈ ಜೋಡಿ ಒಟ್ಟಿಗೆ ಇದ್ದಾಗ ಸಾಕಷ್ಟು ಬಾರಿ ಸಾರ್ವಜನಿಕವಾಗಿ ಸಿಕ್ಕಿಬಿದ್ದಿದ್ದರು. ಈ ನಡುವೆ ಅವರಿಬ್ಬರ ಮಧ್ಯೆ ಲವ್ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಸಾಕ್ಷಿ ನೀಡುವಂತೆ ಸಿಕ್ಕಿಬಿದ್ದಿದ್ದಾರೆ. ಆದರೆ 'ಬೆಳಿಗ್ಗೆ 4 ಗಂಟೆಗೆ ಹೊರಗೆ ಬರುವಷ್ಟು ಅರ್ಜೆಂಟ್ ಅದೇನಿತ್ತೋ ಏನೋ! ಇನ್ನೂ ಸ್ವಲ್ಪ ಹೊತ್ತು ಜೊತೆಗಿದ್ದಿದ್ದರೆ ಆಗಿದ್ದು ಇನ್ನೊಮ್ಮೆ ಆಗಬಹುದಿತ್ತು ಅಷ್ಟೇ, ಮತ್ತೇನಿಲ್ಲವಲ್ಲ' ಎಂದು ಬಾಲಿವುಡ್ ಬೊಬ್ಬೆ ಹೊಡೆಯುತ್ತಿದೆ.

ಸುದ್ದಿ ಮಾಧ್ಯಮವೊಂದರ ಪ್ರಕಾರ, ಮುಂಬೈ ಸಬರ್ಬನ್ ಏರಿಯಾದ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೆಲ್ ಒಂದರಲ್ಲಿ ಬೆಳ್ಳಂಬೆಳಿಗ್ಗೆ 4 ಗಂಟೆಗೆ ಈ ಜೋಡಿ ಕಾಣಿಸಿಕೊಂಡಿದೆ. ನೀತಾ ಹಾಗೂ ಮುಖೇಶ್ ಅಂಬಾನಿ ಜೋಡಿ, ಅಬು ಜಾನಿ ಹಾಗೂ ಸಂದೀಪ್ ಖೋಸ್ಲಾ ಅವರಿಗೆ ನೀಡಿದ್ದ ಪಾರ್ಟಿಯಲ್ಲಿ ಭಾಗವಹಿಸಿತ್ತು ದೀಪಿಕಾ-ರಣವೀರ್ ಜೋಡಿ. ನಂತರ ಅಲ್ಲಿದ್ದ ಹೊಟೆಲ್ ಗೆ ಸೀದಾ ಹೋದ ದೀಪಿಕಾ ಮೊದಲ ಮಹಡಿಯಲ್ಲಿದ್ದ ರಣವೀರ್ ಅವರನ್ನು ಭೇಟಿಯಾಗಿದ್ದಾರೆ.

ನಂತರ ನಾಲ್ಕು ಗಂಟೆ ವೇಳೆಗೆ ಈ ಜೋಡಿ ಹೊಟೆಲ್ ರೂಂ ಹೊರಗಡೆ ಸಾರ್ವಜನಿಕರಿಗೆ ದರ್ಶನ್ ನೀಡಿದ್ದಾರೆ. ಆಗ ಟ್ರಾಕ್ ಪ್ಯಾಂಟ್ ಧರಸಿದ್ದ ರಣವೀರ್ ತುಂಬಾ ಸುಸ್ತಾದಂತೆ ಹಾಗು ನಿದ್ದೆಗೆಟ್ಟವರಂತೆ ಕಾಣುತ್ತಿದ್ದರು. ನಿದ್ದೆಗೆಟ್ಟು ಅಲ್ಲಿ ಅದೇನು ಮಾಡಿದರೋ ಈ ಜೋಡಿ ಎಂಬುದು ಕೆಲಸವಿಲ್ಲದವರ ಕುಹಕ ಎನಿಸಿದರೂ ಅವರಿಬ್ಬರ ಅಫೇರ್ ಸುದ್ದಿಗೆ ಇದು ಸಾಕ್ಷಿಯಾಗಿ ಈಗ ಗಾಳಿಯಲ್ಲಿ ಸಿಕ್ಕಸಿಕ್ಕ ಕಡೆ ಹಾರಾಡುತ್ತಿದೆ.

ದೀಪಿಕಾ ಪಡುಕೋಣೆ ವಿಷಯ ಬಿಡಿ, ರಣಬೀರ್ ಆಯ್ತು, ಸಿದ್ಧಾರ್ಥ್ ಆಯ್ತು ಈಗ ರಣವೀರ್ ಸರದಿ. ಆದರೆ ರಣವೀರ್ ಸಿಂಗ್ ಅವರ ಬಗ್ಗೆ ಅವರ ಗೆಳತಿ, ಪ್ರೇಯಸಿ ಅನುಷ್ಕಾ ಶರ್ಮಾ ಈಗೇನು ಹೇಳಬಹುದು ಎಂಬುದೇ ಈಗಿರುವ ಕುತೂಹಲ. ಇಂತಹ ಅದೆಷ್ಟೋ ಜೊಡಿಹಕ್ಕಿಗಳನ್ನು, ನಂತರ ಎಲ್ಲವೂ ಮುಗಿದ ಮೇಲೆ ಬೇರ್ಪಟ್ಟ ಹಕ್ಕಿಗಳನ್ನು ನೋಡಿರುವ ಬಾಲಿವುಡ್, ಇದೂ ಅವುಗಳ ರೀತಿಯೇ ಇನ್ನೊಂದು ಎಂದು ಮಾತಾಡಿಕೊಳ್ಳುತ್ತಿದೆಯಂತೆ. ಆದರೂ ದೀಪಿಕಾ-ರಣಬೀರ್, ಅಷ್ಟು ಅರ್ಜೆಂಟ್ ಹೊರಗೆ ಬರುವ ಸಾಹಸ ಮಾಡಬಾರದಿತ್ತೇನೋ! (ಏಜೆನ್ಸೀಸ್)

English summary
It seems that Deepika Padukone and Ranveer Singh have become very close friends. Ranveer and Deepika were seen chatting over food at 4 AM.
 
Please Wait while comments are loading...