»   » ಅಂದಾಜು ಎಷ್ಟು ಬಾರಿ ಹುಚ್ಚ ವೆಂಕಟ್ ಅಣ್ಣಂಗೆ ಲವ್ ಆಗ್ಬಹುದು.?!

ಅಂದಾಜು ಎಷ್ಟು ಬಾರಿ ಹುಚ್ಚ ವೆಂಕಟ್ ಅಣ್ಣಂಗೆ ಲವ್ ಆಗ್ಬಹುದು.?!

By: ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

''ನಾನು ನಿಜವಾಗ್ಲೂ ನಿನ್ನ ಇಷ್ಟ ಪಡ್ತಿದ್ದೀನಿ ಕಣೇ... ನಾನು ನಿನ್ನ ಲವ್ ಮಾಡ್ತಿದ್ದೀನಿ ಕಣೇ... ಪ್ಲೀಸ್ ನನ್ನ ಅರ್ಥ ಮಾಡ್ಕೊಳೇ...'' ಎಂದು ಟಿವಿ ಚಾನೆಲ್ ಗಳ ಪಾನೆಲ್ ಗಳಲ್ಲಿ ಕುಳಿತುಕೊಂಡು ಕಣ್ಣೀರು ಸುರಿಸುತ್ತಾ ಹುಚ್ಚ ವೆಂಕಟ್ ಹೇಳುತ್ತಿದ್ದರೆ, ಕೆಲವರಿಗೆ 'ಅಯ್ಯೋ ಪಾಪ' ಎನಿಸಬಹುದು.

ಆದ್ರೆ, ಹುಚ್ಚ ವೆಂಕಟ್ ಜನ್ಮ ಜಾಲಾಡಿದವರಿಗೆ ಮಾತ್ರ 'ಅಯ್ಯೋ ಪಾಪ' ಎಂದೆನಿಸಲು ಸಾಧ್ಯವೇ ಇಲ್ಲ. ಯಾಕಂದ್ರೆ, ಈ ರೀತಿ 'ಪ್ರೀತಿ, ಪ್ರೇಮ' ಎಂದುಕೊಂಡು ಹುಚ್ಚ ವೆಂಕಟ್ 'ಡ್ರಾಮಾ' ಮಾಡಿರುವುದು ಇದು ಮೊದಲ ಬಾರಿ ಅಲ್ಲವೇ ಅಲ್ಲ.!

'ರಮ್ಯಾ' ಎಪಿಸೋಡ್ ನಿಮಗೆ ನೆನಪಿದ್ಯಾ.?

ಹಾಗ್ನೋಡಿದ್ರೆ, ಹುಚ್ಚ ವೆಂಕಟ್ ಎಂಬ ಕ್ಯಾರೆಕ್ಟರ್ ಮಾಧ್ಯಮಗಳಿಗೆ ಪರಿಚಯವಾಗಿದ್ದೇ 'ರಮ್ಯಾ ಮೇಡಂ' ಎಪಿಸೋಡ್ ಮೂಲಕ. ಹುಚ್ಚ ವೆಂಕಟ್ ಗಾಂಧಿನಗರದ ತುಂಬೆಲ್ಲ ಸೌಂಡ್ ಮಾಡೋಕೆ ಶುರು ಮಾಡಿದ್ದೇ 'ರಮ್ಯಾ' ಹೆಸರನ್ನು ಹೇಳಿಕೊಂಡು.! 'ರಮ್ಯಾ ನನ್ ಹೆಂಡತಿ' ಅಂತ್ಹೇಳಿಕೊಂಡು ಮಾಧ್ಯಮಗಳಲ್ಲಿ 'ಬಿಗ್ ಬ್ರೇಕಿಂಗ್ ನ್ಯೂಸ್' ಕೊಟ್ಟ ಹುಚ್ಚ ವೆಂಕಟ್ ಪೊಲೀಸರ ಅತಿಥಿಯಾಗಿದ್ದು ನಿಮಗೆ ನೆನಪಿದೆ ತಾನೇ.?

ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ರಮ್ಯಾ ರನ್ನ ಮದುವೆ ಆಗಿದ್ದೇನೆ ಎಂದಿದ್ದ ವೆಂಕಟ್

''ನಾನು ರಮ್ಯಾ ರವರನ್ನ ಮದುವೆ ಆಗಿದ್ದೇನೆ'' ಎಂದು ಟಿವಿ ಚಾನೆಲ್ ಗಳ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಬೊಬ್ಬೆ ಹೊಡೆಯುತ್ತಿದ್ದ ಹುಚ್ಚ ವೆಂಕಟ್, ಒಂದು ರೌಂಡ್ ಪೊಲೀಸ್ ಸ್ಟೇಷನ್ ಗೆ ಹೋಗಿ ಬಂದ್ಮೇಲೆ 'ರಮ್ಯಾ' ಬಗ್ಗೆ ಉಸಿರು ಎತ್ತಲಿಲ್ಲ.

ವರ್ಷಗಳ ಹಿಂದೆಯೇ ಹುಚ್ಚ ವೆಂಕಟ್ ಗೆ ಮದುವೆ ಆಗಿದೆ.!

ಕ್ಯಾಮೆರಾ ಕಂಡ್ರೆ ಸಾಕು, 'ನನ್ ಮಗಂದ್.. ನನ್ ಎಕ್ಕಡ' ಎಂದು ಬಾಯಿಗೆ ಬಂದ್ಹಂಗೆ ಮಾತನಾಡುವ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಲ್ಲಿ ರಾದ್ಧಾಂತ ಮಾಡಿಕೊಂಡು ಹೊರಗೆ ಬಂದ್ಮೇಲೆ, ಟಿವಿ ಚಾನೆಲ್ ಗಳು 'ಹುಚ್ಚ ವೆಂಕಟ್ ರವರ ಮದುವೆ' ರಹಸ್ಯವನ್ನು ಬಯಲು ಮಾಡಿದ್ವು.

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು

2007ರಲ್ಲಿ ಮದುವೆ ಆಗಿತ್ತು.!

ಜನವರಿ 3ನೇ ತಾರೀಖು, 2007 ರಂದು ಹುಚ್ಚ ವೆಂಕಟ್ ಸಪ್ತಪದಿ ತುಳಿದಿದ್ದರು. ಅದು ರೇಷ್ಮಾ ಎನ್ನುವ ಹುಡುಗಿ ಜೊತೆ. ಸಂಪಂಗಿರಾಮನಗರದ ಗಣಪತಿ ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿತ್ತು.

ಅದೂ ಕೂಡ ಲವ್ ಮ್ಯಾರೇಜ್.!

ರೇಷ್ಮಾ ಎಂಬ ಹುಡುಗಿಯನ್ನು ಪ್ರೀತಿಸಿ, ವೆಂಕಟ್ ಮದುವೆ ಆಗಿದ್ದರು. ಆದ್ರೀಗ, ರೇಷ್ಮಾ ಹುಚ್ಚ ವೆಂಕಟ್ ಜೊತೆಯಲ್ಲಿ ಇಲ್ಲ. ''ಆಕೆಯೇ ನನ್ನನ್ನ ಬಿಟ್ಟು ಹೋದಳು'' ಎಂದು ಹುಚ್ಚ ವೆಂಕಟ್ ಹೇಳುತ್ತಾರೆ.

ವಿಭಾ ಎಂಬ ಯುವ ನಟಿಗೂ ಕಾಟ ಕೊಟ್ಟಿದ್ರು.!

ಮದುವೆ ವಿಚಾರವಾಗಿ ಯುವ ನಟಿ ವಿಭಾ ಎನ್ನುವವರಿಗೂ ಹುಚ್ಚ ವೆಂಕಟ್ ಕಾಟ ಕೊಟ್ಟಿದ್ದರು ಎಂದು ವರದಿ ಆಗಿದೆ.

ಈಗ ರಚನಾ....

ಇಷ್ಟೆಲ್ಲ ಆದ್ಮೇಲೆ, ಈಗ ರಚನಾ ಮೇಲೆ ಹುಚ್ಚ ವೆಂಕಟ್ ಗೆ ಲವ್ ಆಗಿದೆ. ರಚನಾ ಇಲ್ಲ ಅಂದ್ರೆ ನಾನು ಬದುಕುವುದಿಲ್ಲ ಎಂದು ಹುಚ್ಚ ವೆಂಕಟ್ ಹಠ ಹಿಡಿದಿದ್ದಾರೆ.

'ಅಣ್ಣಂಗೆ ಎಷ್ಟು ಬಾರಿ ಲವ್ ಆಗ್ಬಹುದು.?'

ಮೊದಲು ರೇಷ್ಮಾ, ಆಮೇಲೆ ರಮ್ಯಾ, ನಂತರ ವಿಭಾ, ಈಗ ರಚನಾ... ಅಣ್ಣಂಗೆ ಇಲ್ಲಿಯವರೆಗೂ ಲವ್ ಆಗಿರುವ ಲಿಸ್ಟ್ ಇದು. 'ಹೆಣ್ಮಕ್ಕಳು ಮೈ ತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಐಟಂ ಸಾಂಗ್ ಬ್ಯಾನ್ ಆಗ್ಬೇಕ್. ಅತ್ಯಾಚಾರ ಮಾಡುವವರನ್ನು ಕೊಲ್ಲುತ್ತೇನೆ'' ಎಂದು ಹೆಣ್ಮಕ್ಕಳ ಪರ ದನಿ ಎತ್ತುವ ಹುಚ್ಚ ವೆಂಕಟ್, 'ಪ್ರೀತಿ' ಹೆಸರಿನಲ್ಲಿ ಮಾತ್ರ ಅದೇ ಹುಡುಗಿಯರಿಗೆ ಯಾಕೆ ಹಿಂಸೆ ನೀಡುತ್ತಿದ್ದಾರೋ, ದೇವರೇ ಬಲ್ಲ.!

ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?

ಕೆಲವರ ವಾದ ಏನು.?

ಬಹುಶಃ ಇದು 'ಟಿ.ಆರ್.ಪಿ ಗಿಮಿಕ್' ಎಂಬುದು ಕೆಲವರ ವಾದ. ರಮ್ಯಾ ಹೆಸರು ಹೇಳಿಕೊಂಡು ರಾತ್ರೋರಾತ್ರಿ ಟಿ.ಆರ್.ಪಿ ಕಿಂಗ್ ಆದ ಹುಚ್ಚ ವೆಂಕಟ್, ಅದೇ ಥಿಯರಿಯನ್ನ ಆಗಾಗ ಅಪ್ಲೈ ಮಾಡಿಕೊಂಡು ಸುದ್ದಿ ವಾಹಿನಿಗಳಲ್ಲಿ ಆತಿಥ್ಯ ಸ್ವೀಕರಿಸುತ್ತಿದ್ದಾರೆ ಎಂದು ಗಾಂಧಿನಗರದ ಪಂಡಿತರು ಹೇಳುತ್ತಾರೆ. ಪ್ರಚಾರದ ಗೀಳು ಅಂಟಿರುವವರಿಗೆ ಹೇಗೆ ಪ್ರಚಾರ ಸಿಕ್ಕರೇನು ಎಂಬ ಮಾತು ನಿಜವೇ ಆಗಿದ್ದರೆ, ಅಣ್ಣಂಗೆ ಅಂದಾಜು ಎಷ್ಟು ಬಾರಿ ಲವ್ ಆಗ್ಬಹುದು.?!

English summary
Here is the detailed report on Huccha Venkat and his so called 'Love Stories'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada